ಇಂದೋರ್(ಮಧ್ಯಪ್ರದೇಶ) : ತಂತ್ರಜ್ಞಾನ ಮುಂದುವರೆದಂತೆ ಕಂಪ್ಯೂಟರ್ ಬಳಕೆ ಮತ್ತಷ್ಟು ಸುಲಭವಾಗುತ್ತಲೇ ಇದೆ. ಎಲ್ಲಾ ವಯಸ್ಸಿನವರಿಗಾಗಿ ಕಂಪ್ಯೂಟರ್ ಸ್ನೇಹಿಯಾಗಿರುವ ಅಲೆಕ್ಸಾ ಪ್ರಸ್ತುತ ಜಗತ್ತಿನಲ್ಲಿರುವ ಅತ್ಯಾಧುನಿಕ ತಂತ್ರಜ್ಞಾನ.
ಧ್ವನಿ ಮೂಲಕ ಏನೇ ಕೇಳಿದರೂ ಅಲೆಕ್ಸಾ ಮಾಹಿತಿ ನೀಡುತ್ತದೆ. ಆದರೆ, ಮಧ್ಯಪ್ರದೇಶದ ಇಂದೋರ್ ಮೂಲದ 7ನೇ ತರಗತಿಯ ವಿದ್ಯಾರ್ಥಿ ಇಂತಹದ್ದೇ ತಂತ್ರಜ್ಞಾನವನ್ನು ಅವಿಷ್ಕಾರ ಮಾಡಿದ್ದಾರೆ. ತನ್ನ ಮಯಸ್ಸಿಗೂ ಮೀರಿದ ಈ ಸಾಧನೆಗಾಗಿ ಬಾಲಕನಿಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಮಧ್ಯಪ್ರದೇಶದ ವಂಡರ್ ಬಾಯ್ ಖ್ಯಾತಿಯ ಇಂದೋರ್‌ನ ಅವಿ ಶರ್ಮಾ ಧ್ವನಿ ಕಮಾಂಡ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ್ದಾರೆ. ಇದಕ್ಕೆ ಮಾಧವ್(MADHAV) (ಮೈ ಅಡ್ವಾನ್ಸ್ ಡೊಮೆಸ್ಟಿಕ್ ಹ್ಯಾಂಡ್ಲಿಂಗ್ ಐ ಆವೃತ್ತಿ) ಎಂದು ಹೆಸರಿಟ್ಟಿದ್ದಾರೆ.
7ನೇ ತರಗತಿಯಲ್ಲಿ ಓದುತ್ತಿರುವ 12 ವರ್ಷದ ಅವಿ ಕಂಪ್ಯೂಟರ್ ಕೋಡಿಂಗ್‌ನ ಪೈಥಾನ್ ಭಾಷೆಯನ್ನು ಸ್ವತಃ ಕಲಿತು ಕಂಪ್ಯೂಟರ್ ಮೂಲಕ ಮಾಡುವ ಎಲ್ಲಾ ಕಾರ್ಯಗಳನ್ನು ಒಂದೇ ಧ್ವನಿಯಲ್ಲಿ ಮಾಡಬಹುದಾದ ಧ್ವನಿ ಆಜ್ಞೆಯ ಸಹಾಯ ವ್ಯವಸ್ಥೆ ಅಭಿವೃದ್ಧಿಪಡಿಸಿದ್ದಾರೆ.
ಮಾಧವ್ ಕ್ರಿಕೆಟ್ ಬಗ್ಗೆ ಹೇಳಿ, ಸಲ್ಮಾನ್ ಹುಟ್ಟು ಹಬ್ಬ ಯಾವಾಗ ಹೀಗೆ ಧ್ವನಿ ಮೂಲಕ ಏನೇ ಪ್ರಶ್ನೆ ಕೇಳಿದರೂ ವಿಕಿಪೀಡಿಯ ಮಾಹಿತಿ ಆಧರಿಸಿ ಕೆಲವೇ ಕ್ಷಣಗಳಲ್ಲಿ ಮಾಹಿತಿ ನೀಡುತ್ತದೆ. ಅವಿ ಶರ್ಮಾ ಅವರ ಈ ಆವಿಷ್ಕಾರ ಅಚ್ಚರಿ ಮೂಡಿಸುತ್ತಿದೆ.
ಮತ್ತೊಂದು ಆಶ್ಚರ್ಯಕರ ಅಂಶವೆಂದರೆ ಈ ಧ್ವನಿ ಸಹಾಯಕಕ್ಕಾಗಿ ಯಾವುದೇ ಪ್ರತ್ಯೇಕ ಉಪಕರಣದ ಅಗತ್ಯವಿಲ್ಲ. ನಿಮ್ಮ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಕ್ರೋಮ್‌ಬುಕ್ ಅಥವಾ ವಿಂಡೋಸ್‌ನ ಯಾವುದೇ ಸಾಫ್ಟ್‌ವೇರ್ ನವೀಕರಣದ ಅಗತ್ಯವೂ ಇಲ್ಲ.
ಇದಕ್ಕಾಗಿ ಹೆಚ್ಚು ಹಣ ಖರ್ಚು ಮಾಡಬೇಕಾಗಿಲ್ಲ. ಏಕೆಂದರೆ, ಪ್ರಸ್ತುತ ಧ್ವನಿ ಗೂಗಲ್ ಅಸಿಸ್ಟೆಂಟ್‌ನ ತಂತ್ರಜ್ಞಾನವನ್ನು ಆಧರಿಸಿದೆ. ಆದರೆ, ಅವಿ ಶರ್ಮಾ ಅಭಿವೃದ್ಧಿಪಡಿಸಿರುವ ದೇಶೀಯ ಅಲೆಕ್ಸಾ ಪ್ರಪಂಚದಾದ್ಯಂತದ ಎಲ್ಲಾ ಕಂಪ್ಯೂಟರ್ ತಂತ್ರಜ್ಞಾನದ ನಿರ್ವಹಣೆಗೆ ಸವಾಲು ಹಾಕಿದೆ.
ಹವಾಮಾನ, ರೋಡ್ ಮ್ಯಾಪ್, ಇ-ಪುಸ್ತಕಗಳು ಸೇರಿದಂತೆ ನಮ್ಮ ಮನಸ್ಸಿನಲ್ಲಿ ಉದ್ಭವಿಸುವ ಎಲ್ಲಾ ರೀತಿಯ ಪ್ರಶ್ನೆಗಳಿಗೆ ಧ್ವನಿ ತಂತ್ರಾಂಶ ಕೆಲವೇ ನಿಮಿಷಗಳಲ್ಲಿ ಉತ್ತರಗಳನ್ನು ನೀಡುತ್ತದೆ. ಇದಕ್ಕೆ ಕೀ ಬೋರ್ಡ್‌ನ ಅಗತ್ಯವೇ ಇರುವುದಿಲ್ಲ.
ಭವಿಷ್ಯದಲ್ಲಿ ಈ ತಂತ್ರಾಂಶ ದೇಶದ ಮನೆ ಮನೆಗೆ ತಲುಪಿದರೆ ಅಚ್ಚರಿ ಇಲ್ಲ. ಅತಿ ಚಿಕ್ಕಯಸ್ಸಿನಲ್ಲೇ ಅವಿ ಶರ್ಮಾ ಈ ಜ್ಞಾನಶಕ್ತಿಯಿಂದಾಗಿ ಈಗಾಗಲೇ ಅವರು ವಂಡರ್ ಬಾಯ್ ಎನಿಸಿದ್ದಾರೆ. ಹಲವಾರು ಪ್ರಶಸ್ತಿಗಳನ್ನು ತಮ್ಮದಾಸಿಕೊಂಡಿದ್ದಾರೆ.
![avi sharma](https://etvbharatimages.akamaized.net/etvbharat/prod-images/14038739_wonderboy.jpeg)
ಇದನ್ನೂ ಓದಿ: James Webb Telescope: ಉಡಾವಣೆಯಾದ ಜೇಮ್ಸ್ ವೆಬ್: ಜಗತ್ತಿನ ಮತ್ತಷ್ಟು ಕೌತುಕ ಬಿಚ್ಚಿಡುವ ಸಾಧ್ಯತೆ