ETV Bharat / science-and-technology

ಬಳಕೆದಾರರನ್ನು ಗುರಿಯಾಗಿಸಲು ಗೂಗಲ್​ ಆ್ಯಡ್​ ದುರ್ಬಳಕೆ; ಆನ್​ಲೈನ್​ನಲ್ಲಿ ಹೀಗೂ ನಡೆಯತ್ತೆ ವಂಚನೆ

author img

By

Published : Dec 29, 2022, 12:53 PM IST

ಜನಪ್ರಿಯ ಸಾಫ್ಟ್​​ವೇರ್​​ ಉತ್ಪನ್ನಗಳ ಹುಡುಕುವವರೇ ಇವರ ಗುರಿ- ಅಸಲಿಯಂತೆ ಬಿಂಬಿಸಿ ಪೇಜ್​ ಕ್ಲಿಕ್ ಮಾಡಿದ್ರೆ- ಬಳಕೆದಾರರಿಗೆ ಅನುಮಾನ ಬಾರದ ರೀತಿ ಹ್ಯಾಕ್​​

ಬಳಕೆದಾರರನ್ನು ಗುರಿಯಾಗಿಸಲು ಗೂಗಲ್​ ಆ್ಯಡ್​ ದುರ್ಬಳಕೆ; ಆನ್​ಲೈನ್​ನಲ್ಲಿ ಹೀಗೂ ನಡೆಯತ್ತೆ ವಂಚನೆ
Abuse of Google Ads to target users; Fraud also happens online

ನವದೆಹಲಿ: ಜನಪ್ರಿಯ ಸಾಫ್ಟ್‌ವೇರ್ ಉತ್ಪನ್ನಗಳಿಗಾಗಿ ಹುಡುಕುವ ಬಳಕೆದಾರರನ್ನು ಗುರಿಯಾಗಿಸಿಕೊಂಡು ಹ್ಯಾಕರ್‌ಗಳು ಗೂಗಲ್​ ಆ್ಯಡ್​ ಪ್ಲಾಟ್‌ಫಾರ್ಮ್‌ನ ದುರುಪಯೋಗವನ್ನುಪಡಿಸಿಕೊಳ್ಳುವ ಸಂಖ್ಯೆ ಹೆಚ್ಚುತ್ತಿದೆ. ಗ್ರಾಮರ್ಲಿ, ಸ್ಲಾಕ್, ಡ್ಯಾಶ್‌ಲೇನ್, ಆಡಾಸಿಟಿ, ಐಟೊರೆಂಟ್, ಎನಿಡೆಸ್ಕ್, ಲಿಬ್ರೆ ಆಫೀಸ್, ಟೀಮ್‌ವ್ಯೂವರ್, ಥಂಡರ್‌ಬರ್ಡ್ ಸೇರಿದಂತೆ ಹಲವು ಸಾಫ್ಟ್​​ವೇರ್​​ಗಳನ್ನು ಒಳಗೊಂಡಿದೆ ಎಂದು ಬ್ಲಿಪಿಂಗ್​ ಕಂಪ್ಯೂಟರ್​ ವರದಿ ಮಾಡಿದೆ.

ಬೆದರಿಕೆವೊಡ್ಡವ ಹ್ಯಾಕರ್​ಗಳು ಅಧಿಕೃತ ವೆಬ್​ಸೈಟ್​​ ಕ್ಲೋನ್ ಮಾಡುತ್ತಾರೆ. ಬಳಕೆದಾರರು ಡೌನ್‌ಲೋಡ್ ಬಟನ್ ಕ್ಲಿಕ್ ಮಾಡಿದಾಗ ಸಾಫ್ಟ್‌ವೇರ್‌ನ ಟ್ರೋಜನೈಸ್ಡ್ ಆವೃತ್ತಿಗಳನ್ನು ವಿತರಿಸುತ್ತಾರೆ. ಗೂಗಲ್​ ಆ್ಯಡ್​ ಫ್ಲಾಟ್​ಫಾರ್ಮ್​ಗಳು ಗೂಗಲ್​ ಸರ್ಚ್​ ಮೂಲಕ ತಮ್ಮ ಫ್ಲಾಟ್​ಫಾರ್ಮ್​ ಸರ್ಚ್​ ಮಾಡಲು ಸಹಾಯ ಮಾಡುತ್ತದೆ. ಬಳಕೆದಾರರು ಒರಿಜಿನಲ್​ ಸಾಫ್ಟ್​ವೇರ್​ ಉತ್ಪನ್ನವನ್ನು ಬ್ರೌಸರ್​ನಲ್ಲಿ ನೋಡಿದಾಗ ವ್ಯತ್ಯಾಸ ಅರಿಯದಂತೆ ದುರುದ್ದೇಶಪೂರಿತ ಲಿಂಕ್​ ಅನ್ನು ಕ್ಲಿಕ್​ ಮಾಡಲಾಗುತ್ತದೆ. ಕಾರಣ ಇದು ನಿರ್ದಿಷ್ಟ ಸರ್ಚ್​ ಫಲಿತಾಂಶದಂತೆಯೇ ಇರುತ್ತದೆ.

ಟಾರ್ಗೆಟ್​ ಬಳಕೆದಾರರಿಂದ ವಂಚಿತ ಸೈಟ್​ಗೆ ಭೇಟಿ ನೀಡಿದಾಗ, ಸರ್ವರ್​ ತಕ್ಷಣವೇ ಅವುಗಳನ್ನು ದುರುದ್ದೇಶಪೂರಿತ ಪೇಲೋಡ್‌ಗೆ ಮರು ನಿರ್ದೇಶಿಸುತ್ತದೆ ಎಂದು ಗಾರ್ಡಿಯೋ ಲ್ಯಾಬ್ಸ್ ವಿವರಿಸಿದೆ. ಆ ವಂಚಿತ ಸೈಟ್‌ಗಳು ಸಂದರ್ಶಕರಿಗೆ ಪ್ರಾಯೋಗಿಕವಾಗಿ ಗೋಚರಿಸುವುದಿಲ್ಲ. ಲ್ಯಾಂಡಿಂಗ್ ಸೈಟ್ ದುರುದ್ದೇಶಪೂರಿತವಾಗಿದೆ ಎಂದು ಗೂಗಲ್​​ ಪತ್ತೆ ಮಾಡಿದರೆ, ಪ್ರಚಾರವನ್ನು ನಿರ್ಬಂಧಿಸಲಾಗುತ್ತದೆ ಮತ್ತು ಜಾಹೀರಾತುಗಳನ್ನು ತೆಗೆದುಹಾಕಲಾಗುತ್ತದೆ.

ಈ ವಂಚಿತ ಸೈಟ್​ಗಳು ಜಿಪ್​ ಅಥವಾ ಎಂಎಸ್​ಐ ಫಾರ್ಮ್​ನಲ್ಲಿ ಇರುತ್ತದೆ. ಗಿಟ್ಟಹನ್​, ಡ್ರಾಪ್​ಬಾಕ್ಸ್​ ಅಥವಾ ಡಿಸ್​ಕೊರ್ಡ್​​ ಸಿಡಿಎನ್​ ಕೋಡ್​ ಆಧಾರಿತ ಸೇವೆಯಂತೆ ಡೌನ್​ಲೋಡ್​​ ಆಗುತ್ತದೆ. ಅಲ್ಲದೇ ಬಳಕೆದಾರರಲ್ಲಿ ಯಾವುದೇ ಆಕ್ಷೇಪ ವ್ಯಕ್ತಪಡಿಸದೇ ಇವು ಡೌನ್​ಲೋಡ್​ ಆಗುತ್ತದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: 400 ಮಿಲಿಯನ್​ ಬಳೆಕೆದಾರರ ಡೇಟಾ ಕದ್ದು, ಎಲಾನ್​ ಮಸ್ಕ್​ಗೆ ಆಫರ್​​ ನೀಡಿದ ಹ್ಯಾಕರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.