ಹೆಚ್ಐವಿ ಸೋಂಕಿಗೆ ಈವರೆಗೂ ಯಾವುದೇ ಸೂಕ್ತ ಚಿಕಿತ್ಸೆ ಇಲ್ಲ. ಆದರೆ, ಅದನ್ನು ನಿಯಂತ್ರಣದಲ್ಲಿಡುವ ಚಿಕಿತ್ಸೆಗಳು ಲಭ್ಯವಿವೆ. ಸೋಂಕಿಗೆ ಲಸಿಕೆಯನ್ನು ಅಭಿವೃದ್ಧಿಪಡಿಸುವ ಪ್ರಯತ್ನಗಳು ಹಿಂದಿನಿಂದಲೂ ಸಾಗುತ್ತಲೇ ಪ್ರಗತಿಯಲ್ಲಿದ್ದರೂ ಅದ್ಯಾವುದೂ ಯಶಸ್ವಿಯಾಗಿಲ್ಲ. ಇದೀಗ ಅಮೆರಿಕದ ಸ್ಕ್ರಿಪ್ಸ್ ಸಂಶೋಧನಾ ಸಂಸ್ಥೆ ಹೆಚ್ಐವಿಗೆ ಲಸಿಕೆ ಅಭಿವೃದ್ಧಿಪಡಿಸಿದೆ.
ಸ್ಕ್ರಿಪ್ಸ್ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಅಭಿವೃದ್ಧಿ ಪಡಿಸಿದ ಹೊಸ ಲಸಿಕೆ ಮಾನವರಲ್ಲಿ ರೋಗದ ವಿರುದ್ಧ ಪ್ರತಿಕಾಯಗಳನ್ನು ಸೃಷ್ಟಿಸಲು ಯಶಸ್ವಿಯಾಗಿದೆ. ಒಂಟೆಯ ಮೇಲೆ ಈ ಲಸಿಕೆಯನ್ನು ಪ್ರಯೋಗಿಸಲಾಗಿದ್ದು, ಅದು ರೋಗ ನಿರೋಧಕ ಶಕ್ತಿಯನ್ನು ತೋರ್ಪಡಿಸಿದೆ. ಅದರ ದೇಹದಲ್ಲಿ ಪ್ರತಿ ರಕ್ಷಣಾ ಕಾಯಗಳು ಅಭಿವೃದ್ಧಿಯಾಗಿದ್ದು ಕಂಡುಬಂದಿದೆಯಂತೆ.
ಪ್ರಾಯೋಗಿಕ ಪರೀಕ್ಷೆಯ ಮೊದಲ ಹಂತದಲ್ಲಿ ಶೇಕಡಾ 97 ರಷ್ಟು ಪರಿಣಾಮ ತೋರಿದೆ. ಇದು ಮಾನವರ ದೇಹದಲ್ಲೂ ರಕ್ಷಣೆ ನೀಡಲಿದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಇದು ಹೆಚ್‌ಐವಿ ಮಾತ್ರವಲ್ಲದೇ ಫ್ಲೂ, ಹೆಪಟೈಟಿಸ್ ಸಿ ಮತ್ತು ಕೊರೊನಾ ವೈರಸ್ಗೂ ಚಿಕಿತ್ಸೆಯಾಗಿ ಲಸಿಕೆಯನ್ನು ಬಳಸಬಹುದಾಗಿದೆ ಎಂದು ಹೇಳಲಾಗ್ತಿದೆ.
ಓದಿ: ಕೋವಿಡ್ ಮಾನವ ನಿರ್ಮಿತ ವೈರಸ್: ಅಮೆರಿಕ ಮೂಲದ ವಿಜ್ಞಾನಿ ಹೇಳಿಕೆ