ನವದೆಹಲಿ: 2028ರ ವೇಳೆ ಶೇ 53ರಷ್ಟು ಮೊಬೈಲ್ ಚಂದಾದಾರರು 5ಜಿ ಸೇವೆ ಹೊಂದಿರಲಿದ್ದು, ಮೊಬೈಲ್ ಬಳಕೆದಾರರ ಸಂಖ್ಯೆ 690 ಮಿಲಿಯನ್ ಆಗಲಿದೆ ಎಂದು ವರದಿ ತಿಳಿಸಿದೆ. ಜಿಯೋ ಮತ್ತು ಏರ್ಟೆಲ್ ಈ ವರ್ಷದ ಅಂತ್ಯದಲ್ಲಿ ದೇಶಾದ್ಯಂತ 5ಜಿ ಸೇವೆ ಆರಂಭಿಸಿದರೆ, 31 ಮಿಲಿಯನ್ ಜನರು ಚಂದಾದಾರರಾಗಬಹುದು ಎಂಬ ನಿರೀಕ್ಷೆ ಇದೆ ಎಂದು ಅಂದಾಜಿಸಲಾಗಿದೆ.
2022ರಲ್ಲಿ ಪ್ರತಿತಿಂಗಳಿಗೆ ಸಾಮಾನ್ಯವಾಗಿ ಸ್ಮಾರ್ಟ್ಫೋನ್ಗಳ ಡಾಟಾ ಟ್ರಾಫಿಕ್ 25ಜಿಬಿ ಇದ್ದು, ಇದು 2028ರವೇಳೆಗೆ 54 ಜಿಬಿ ಆಗಲಿದೆ. ಈ ವರ್ಷ ಸ್ಮಾರ್ಟ್ಫೋನ್ ಚಂದಾದಾರಿಕೆ ಈ ವರ್ಷ 77ರಷ್ಟು ಬೆಳವಣಿಗೆ ಕಂಡಿದ್ದು 2028ರಲ್ಲಿ 94ರಷ್ಟು ಆಗಲಿದೆ.
2024ರಲ್ಲಿ 930 ಮಿಲಿಯನ್ ಬಳಕೆದಾರರೊಂದಿಗೆ 4ಜಿ ಚಂದಾದಾರಿಕೆ ಉತ್ತುಂಗದಲ್ಲಿ ಇರಲಿದ್ದು, 2028ರಲ್ಲಿ 570 ಮಿಲಿಯನ್ನೊಂದಿಗೆ ಈ ಅಂದಾಜು ಇಳಿಕೆ ಕಾಣಲಿದೆ. ವಿಶೇಷವಾಗಿ ಹಳ್ಳಿಗಳು ಮತ್ತು ರಿಮೋಟ್ ಮನೆಗಳಿಗೆ ಬ್ರಾಂಡ್ಬ್ಯಾಂಡ್ ತರಬೇಕು ಎಂಬ ಭಾರತದ ಡಿಜಿಟಲ್ ಗುರಿ ಸಾಧಿಸುವಲ್ಲಿ 5ಜಿ ನಿರ್ಣಾಯಕ ಗುರಿಯನ್ನು ಹೊಂದಿದೆ ಎಂದು ಎರಿಕ್ಸನ್ ಇಂಡಿಯಾ ಮುಖ್ಯಸ್ಥ ನಿತಿನ್ ಬನ್ಸಲ್ ತಿಳಿಸಿದ್ದಾರೆ.
ಎನ್ಹ್ಯಾನ್ಸಡ್ ಮೊಬೈಲ್ ಬ್ರಾಡ್ ಬ್ಯಾಂಡ್ ಮತ್ತು ಫಿಕ್ಸಡ್ ವೈರ್ಲೆಸ್ ಆಕ್ಸೆಸ್ ಅನ್ನು ಭಾರತದ 5ಜಿ ಸೇವೆಯಲ್ಲಿ ಆರಂಭದಲ್ಲೇ ಬಳಸಬಹುದಾಗಿದೆ ಎಂದು ನಿರೀಕ್ಷಿಸಲಾಗಿದೆ. ಇದು ನಿಮಗೆ ಒಂದು ನಿರ್ದಿಷ್ಟ ಸ್ಥಳದಲ್ಲೇ ಫಿಕ್ಸಡ್ ಬ್ಯಾಂಡ್ ಬ್ಯಾಂಡ್ ಸೇವೆಯನ್ನು ಚಲನೆ ವೇಳೆ ಕೂಡ ಪಡೆಯಬಹುದು ಎಂಬ ಅನುಭವ ನೀಡುತ್ತದೆ ಎಂದು ತಿಳಿಸಿದ್ದಾರೆ. ಭಾರತದ ಪ್ರದೇಶದಲ್ಲಿನ ಸ್ಮಾರ್ಟ್ಫೋನ್ನಲ್ಲಿ ಬಳಕೆಯಾಗುತ್ತಿರುವ ಸಾಮಾನ್ಯ ಡಾಟಾ ಟ್ರಾಫಿಕ್ ಜತ್ತಿನಲ್ಲಿ ಸದ್ಯ ಹೆಚ್ಚಿದೆ.
ಭಾರತದ ಪ್ರದೇಶದಲ್ಲಿ ಸದ್ಯ ತಿಂಗಳಿಗೆ 18ಇಬಿ ಇರುವ ಒಟ್ಟು ಮೊಬೈಲ್ ಟ್ರಾಫಿಕ್ 2028ರ ಹೊತ್ತಿಗೆ 53 ಇಬಿ (ಎಕ್ಸಾಬೈಟಟ್) ಆಗಲಿದೆ. ಜಗತ್ತಿನ ಅನೇಕ ಕಡೆ ಪ್ರಸ್ತುತ ಮತ್ತು ಅಭಿವೃದ್ಧಿ ಆರ್ಥಿಕತೆ ಸವಾಲಿನ ನಡುವೆ ಈ ವರ್ಷದ ಅಂತ್ಯಕ್ಕೆ 1 ಬಿಲಿಯನ್ ಜನರು 5ಜಿ ಚಂದಾದಾರಿಕೆ ಹೊಂದಲಿದ್ದು, 2028ರ ವರ್ಷಾಂತ್ಯಕ್ಕೆ ಐದು ಬಿಲಿಯನ್ ಆಗಲಿದೆ. 2022ರ ಜುಲೈ- ಸೆಪ್ಟೆಂಬರ್ ನಡುವೆ ಜಾಗತಿಕವಾಗಿ 110 ಮಿಲಿಯನ್ ಜನರು 5ಜಿ ಚಂದಾದಾರರಾಗಿದ್ದಾರೆ.
ಇದನ್ನೂ ಓದಿ: 54 ಲಕ್ಷ ಟ್ವಿಟರ್ ಬಳಕೆದಾರರ ಡೇಟಾ ಕಳವು: ಆನ್ಲೈನ್ನಲ್ಲಿ ಮಾರಾಟ!