ವಾಷಿಂಗ್ಟನ್: ಚೀನಾದ ವಿರೋಧದ ನಡುವೆಯೂ ಅಮೆರಿಕ ಸಂಸತ್ನ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈವಾನ್‌ಗೆ ಭೇಟಿ ನೀಡಿದ್ದಾರೆ. ಕಳೆದ 25 ವರ್ಷಗಳಲ್ಲಿ ತೈವಾನ್‌ಗೆ ಭೇಟಿ ನೀಡಿದ ಅತ್ಯುನ್ನತ ಶ್ರೇಣಿಯ ಅಮೆರಿಕದ ಪ್ರತಿನಿಧಿ ಇವರಾಗಿದ್ದಾರೆ. ಅತ್ತ ತೈವಾನ್‌ಗೆ ಪೆಲೋಸಿ ಭೇಟಿ ನೀಡುತ್ತಿದ್ದಂತೆ ಇತ್ತ ಚೀನಾ ಮಿಲಿಟರಿ ಸನ್ನದ್ಧತೆಯನ್ನು ಘೋಷಿಸಿದೆ.
ಸ್ಪೀಕರ್ ನ್ಯಾನ್ಸಿ ಪೆಲೋಸಿ ಅಮೆರಿಕ ಭೇಟಿ ಚೀನಾ- ಅಮೆರಿಕ ನಡುವಣ ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಚೀನಾ ತೈವಾನ್ ತನ್ನ ರಾಷ್ಟ್ರದ ಭಾಗವೆಂದು ಪ್ರತಿಪಾದಿಸುತ್ತಾ ಬಂದಿದೆ. ವಿದೇಶಗಳ ನಾಯಕರು ಮತ್ತು ಪ್ರತ್ಯೇಕ ರಾಜತಾಂತ್ರಿಕತೆಯನ್ನು ಚೀನಾ ವಿರೋಧಿಸುತ್ತದೆ. ಡ್ರ್ಯಾಗನ್ನ ಈ ಪ್ರತಿರೋಧದ ನಡುವೆ ಪೆಲೋಸಿ ತೈವಾನ್ ಭೇಟಿ ಈಗ ಭಾರಿ ಕುತೂಹಲಕ್ಕೆ ಕಾರಣವಾಗಿದ್ದರೆ, ಮತ್ತೊಂದು ಕಡೆ ಎರಡೂ ರಾಷ್ಟ್ರಗಳ ನಡುವಣ ಉದ್ವಿಗ್ನತೆಗೂ ಕಾರಣವಾಗಿದೆ.
ಅಧ್ಯಕ್ಷ ಜೋ ಬೈಡನ್ ಚೀನಾದ ಈ ಆರೋಪಗಳನ್ನು ತಳ್ಳಿಹಾಕಿದ್ದು, ಚೀನಾ - ಅಮೆರಿಕ ನಡುವಣ ಉದ್ವಿಗ್ನತೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಮಾತನಾಡಿದ್ದಾರೆ. ನಾವು ಚೀನಾದ ಒಂದು ರಾಷ್ಟ್ರ ನೀತಿಯನ್ನು ಒಪ್ಪುತ್ತೇವೆ ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ ತೈಪೆಯೊಂದಿಗೆ ಅಮೆರಿಕ ದೀರ್ಘ ಕಾಲಿಕ ಸಂಬಂಧಗಳನ್ನು ಹೊಂದಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಪೆಲೋಸಿ ತೈವಾನ್‌ಗೆ ಭೇಟಿ ನೀಡಿದ್ದೇಕೆ?: ಪೆಲೋಸಿ ಅವರ ಈ ಭೇಟಿಯ ಉದ್ದೇಶ ಪ್ರಜಾಪ್ತಭುತ್ವದ ಹೋರಾಟಕ್ಕೆ ಬೆಂಬಲ ನೀಡುವ ಉದ್ದೇಶ ಹೊಂದಿದೆ. ಟಿಯಾನ್ಮೆನ್ ಸ್ಮೇರ್ ದುರ್ಘಟನೆಗೆ ತಿರುಗೇಟು ನೀಡುವ ಉದ್ದೇಶ ಪೆಲೋಸಿ ಅವರದ್ದು, ತೈವಾನ್ನಲ್ಲಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಉದ್ದೇಶ ಅವರದ್ದು. ಏಕೆಂದರೆ ಚೀನಾ ಪ್ರಜಾಪ್ರಭುತ್ವದ ಚಳವಳಿಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಇನ್ನು ಎರಡು ವರ್ಷಗಳ ಹಿಂದೆ ಇದೇ ಸ್ಥಳದಲ್ಲಿ ಸ್ವದೇಶಿ ಪ್ರಜಾಪ್ರಭುತ್ವ ಚಳವಳಿ ಹತ್ತಿಕ್ಕಿದ್ದವು.
ಜಗತ್ತು ನಿರಂಕುಶಾಧಿಕಾರ ಮತ್ತು ಪ್ರಜಾಪ್ರಭುತ್ವದ ನಡುವಿನ ಆಯ್ಕೆಯನ್ನು ಗುರುತಿಸುವ ಮತ್ತು ಹೊಂದುವ ಕಾಲಘಟ್ಟದಲ್ಲಿವೆ. ಹೀಗಾಗಿ ಸ್ವೀಕರ್ ಪೆಲೋಸಿ ಅವರ ಈ ಭೇಟಿ ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳ್ಳುವ ವಿಶಾಲ ದೃಷ್ಟಿಕೋನವನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ. ಇತ್ತೀಚಗಷ್ಟೇ ಅವರು ಉಕ್ರೇನ್ಗೆ ಕಾಂಗ್ರೆಸ್ ನಿಯೋಗದೊಂದಿಗೆ ಭೇಟಿ ನೀಡಿದ್ದರು. ಈ ಮೂಲಕ ಪ್ರಜಾಪ್ರಭುತ್ವ ನೆಲೆಗೊಳಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.
ನಿರುಂಕುಶಾಧಿಕಾರಕ್ಕೆ ಮಣಿಯಲ್ಲ: ತೈವಾನ್ ಭೇಟಿ ಬಗ್ಗೆ ವಾಷಿಂಗ್ಟನ್ ಪೋಸ್ಟ್ ಜತೆ ಮಾತನಾಡಿರುವ ನ್ಯಾನ್ಸಿ ಪೆಲೋಸಿ, "ನಾವು ಎಂದಿಗೂ ನಿರಂಕುಶಾಧಿಕಾರಿಗಳಿಗೆ ಮಣಿಯುವುದಿಲ್ಲ. ಅಮೆರಿಕ ಮತ್ತು ನಮ್ಮ ಮಿತ್ರರಾಷ್ಟ್ರಗಳು ಈ ಬಗ್ಗೆ ಸ್ಪಷ್ಟಪಡಿಸುವುದು ಇಂದಿನ ಅತ್ಯಗತ್ಯ ಎಂದು ಹೇಳಿದ್ದಾರೆ.
ತೈವಾನ್ ಬಗ್ಗೆ ಅಮೆರಿಕದ ನಿಲುವೇನು? : ಅಮೆರಿಕ ಅಧ್ಯಕ್ಷ ಮತ್ತು ಸ್ಪೀಕರ್ ನ್ಯಾನ್ಸಿ ಪೆಲೋಸಿ ಒಂದು ಚೀನಾ ನೀತಿಗೆ ಅಮೆರಿಕ ಬದ್ಧ ಎಂದು ಸ್ಪಷ್ಟ ಪಡಿಸಿದ್ದಾರೆ. 1949 ರಲ್ಲಿ ನಡೆದ ಅಂತರ್ಯುದ್ಧದ ಸಮಯದಲ್ಲಿ ತೈವಾನ್ ಚೀನಾದಿಂದ ಬೇರ್ಪಟ್ಟಿತ್ತು. ಆದರೆ, ಚೀನಾ ತೈವಾನ್ ದ್ವೀಪವನ್ನು ತನ್ನ ಸ್ವಂತ ಪ್ರದೇಶ ಎಂದು ಹೇಳುತ್ತದೆ. ಅಷ್ಟೇ ಅಲ್ಲ ತೈವಾನ್ ವಶಕ್ಕೆ ಪಡೆಯಲು ಮಿಲಿಟರಿ ಕಾರ್ಯಾಚರಣೆ ಮಾಡಲು ಹಿಂಜರಿಯಲ್ಲ ಎಂದೂ ಘೋಷಿಸಿದೆ.
ಇದರ ಭಾಗವಾಗಿಯೇ ನ್ಯಾನ್ಸಿ ಪೆಲೋಸಿ ತೈವಾನ್ ತಲುಪುತ್ತಿದ್ದಂತೆ ಚೀನಾ ಮಿಲಟರಿ ಕಾರ್ಯಾಚರಣೆ ಘೋಷಿಸಿದೆ. ಚೀನಾ ಇತ್ತೀಚಿನ ವರ್ಷಗಳಲ್ಲಿ ರಾಜತಾಂತ್ರಿಕ ಮತ್ತು ಮಿಲಿಟರಿ ಒತ್ತಡ ಎರಡನ್ನೂ ಹೆಚ್ಚಿಸುತ್ತಿದೆ. 2016 ರಲ್ಲಿ ಅಧ್ಯಕ್ಷ ತ್ಸೈ ಇಂಗ್-ವೆನ್ ದ್ವೀಪ ಮತ್ತು ಮುಖ್ಯ ಭೂಭಾಗವು ಒಂದೇ ಚೀನೀ ರಾಷ್ಟ್ರದ ಪ್ರತಿಪಾದನೆ ಮಾಡುತ್ತಿದೆ.
ಪೆಲೋಸಿ ತೈವಾನ್ ಭೇಟಿಯನ್ನು ಚೀನಾ ಹೇಗೆ ನಿರ್ವಹಿಸುತ್ತದೆ?: ಪೆಲೋಸಿ ತೈವಾನ್‌ಗೆ ಆಗಮಿಸುತ್ತಿದ್ದಂತೆ ಚೀನಾ ಮಿಲಿಟರಿ ಕಾರ್ಯಾಚರಣೆ ಮತ್ತು ಅಭ್ಯಾಸಗಳ ಸರಣಿಯನ್ನ ಆರಂಭಿಸಿದೆ. ಇದು ಚೀನಾದ ಸಾರ್ವಭೌಮತೆಗೆ ಧಕ್ಕೆ ತಂದಿದೆ ಎಂದು ನಂಬಿರುವ ಡ್ರ್ಯಾಗನ್ ತೈವಾನ್ ಸುತ್ತ ಮಿಲಿಟರಿ ಸರ್ವಗಾವಲು ಹಾಕಿದೆ.
ಚೀನಾದ ಅಧಿಕೃತ ಮಾಧ್ಯವೊಂದು ಹೇಳಿರುವ ಪ್ರಕಾರ, ಡ್ರ್ಯಾಗನ್ ಸೇನೆಯು ಗುರುವಾರದಿಂದ - ಭಾನುವಾರದವರೆಗೆ ತೈವಾನ್‌ನ ಅನೇಕ ಸ್ಥಳಗಳಲ್ಲಿ ಲೈವ್-ಫೈರ್ ಡ್ರಿಲ್ಗಳನ್ನು ಸಂಯೋಜಿಸಲು ಆರಂಭಿಸಲಿದೆ ಎಂದು ವರದಿ ಮಾಡಿದೆ. ತೈವಾನ್ ಸುತ್ತಮುತ್ತಲಿನ ಆರು ವಿಭಿನ್ನ ಪ್ರದೇಶಗಳಲ್ಲಿ ಕಾರ್ಯಾಚರಣೆ ಮಾಡಲಿದೆ ಎಂಬುದರ ಬಗ್ಗೆ ಚೀನಾ ಮಾಧ್ಯಮ ವರದಿ ಮಾಡಿದೆ. ತೈವಾನ್ ಸುತ್ತ 21 ವಿಮಾನಗಳು ಗಸ್ತು ತಿರುಗುತ್ತಿವೆ. ಅವುಗಳಲ್ಲಿ 18 ಯುದ್ಧವಿಮಾನಗಳಾಗಿವೆ.
ಚೀನಾದ ಪ್ರಬಲ ವಿರೋಧಕ್ಕೆ ಅಮೆರಿಕದ ಪ್ರತಿಕ್ರಿಯೆ ಏನು?: ಅಮೆರಿಕ ಸಂಸತ್ನ ಸ್ಪೀಕರ್ ನ್ಯಾನ್ಸಿ ಪೆಲೋಸಿ ಭೇಟಿ ಬಗ್ಗೆ ಅಧ್ಯಕ್ಷ ಜೋ ಬೈಡನ್ ಕಳವಳ ವ್ಯಕ್ತಪಡಿಸಿದ್ದರೂ, ವಿರೋಧವನ್ನು ವ್ಯಕ್ತಪಡಿಸಿಲ್ಲ. ಚೀನಾ ವಿರೋಧದ ಹಿನ್ನೆಲೆ ತೈವಾನ್‌ಗೆ ಭೇಟಿ ನೀಡಬೇಕೇ ಬೇಡವೇ ಎಂಬುದನ್ನು ಅವರೇ ನಿರ್ಧರಿಸಲಿ ಎಂದು ಎಂದಿದ್ದರು ಅಧ್ಯಕ್ಷ ಬೈಡನ್.
ಆದರೆ, ಇದೀಗ ಪೆಲೋಸಿ ತೈಪೆ ಪ್ರವಾಸ ಕೈಗೊಂಡಿದ್ದಾರೆ. ಅತ್ತ ಚೀನಾ ಮಿಲಿಟರಿ ಕಾರ್ಯಾಚರಣೆ ಆರಂಭಿಸಿದೆ. ಇನ್ನೊಂದೆಡೆ ಅಮೆರಿಕ ಸಹ ಪೆಲೋಸಿ ತೈವಾನ್ ಭೇಟಿಗೂ ಮುನ್ನವೇ ಅಮೆರಿಕನ್ ಮಿಲಿಟರಿ ಇಂಡೋ - ಪೆಸಿಫಿಕ್ ಪ್ರದೇಶದಲ್ಲಿ ತನ್ನ ಭದ್ರತೆಯನ್ನು ಹೆಚ್ಚಿಸಿದೆ. ವಿಮಾನವಾಹಕ ನೌಕೆ USS ರೊನಾಲ್ಡ್ ರೇಗನ್ ಮತ್ತು ಉಳಿದ ರಕ್ಷಣಾ ವಾಹಕಗಳು ಫಿಲಿಫ್ಪಿನ್ಸ್ ಸಮುದ್ರದಲ್ಲಿ ಸನ್ನದ್ಧವಾಗಿಟ್ಟಿದೆ ಎಂದು ಯುಎಸ್ ಅಧಿಕಾರಿಗಳು ಹೇಳಿದ್ದಾರೆ.
F/A-18 ಫೈಟರ್ ಜೆಟ್‌ಗಳು ಮತ್ತು ಹೆಲಿಕಾಪ್ಟರ್‌ಗಳು ಹಾಗೆಯೇ ಅತ್ಯಾಧುನಿಕ ರೇಡಾರ್ ವ್ಯವಸ್ಥೆಗಳು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ಒಳಗೊಂಡಂತೆ ಪ್ರಬಲವಾದ ವಿಮಾನಗಳ ಶ್ರೇಣಿಯನ್ನು ಹೊಂದಿದ್ದು, ಅವುಗಳನ್ನ ಚೀನಾ ಸಮೀಪದ ಮಿತ್ರ ರಾಷ್ಟ್ರಗಳ ನೆಲೆಗಳಲ್ಲಿ ಸನ್ನದ್ಧವಾಗಿಟ್ಟಿದೆ.
ಸಶಸ್ತ್ರ ಸಂಘರ್ಷ ಬೇಕೆ?; ಚೀನಾ ಅಧ್ಯಕ್ಷ ಕ್ಸಿ ಜಿಂಗ್ಪಿನ್ ಮತ್ತು ಬೈಡನ್ ಇಬ್ಬರೂ ಯುದ್ಧವನ್ನು ಸಧ್ಯಕ್ಕೆ ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕಳೆದ ವಾರ ಬೈಡನ್ ಅವರೊಂದಿಗೆ ದೂರವಾಣಿ ಕರೆ ಮಾಡಿ ಮಾತನಾಡಿರುವ ಚೀನಾ ಅಧ್ಯಕ್ಷ ಕ್ಸಿ ಮತ್ತು ಬೈಡನ್ ಇಬ್ಬರೂ ಶಾಂತಿಯಿಂದ ಇರುವ ಹಾಗೂ ಉಭಯ ರಾಷ್ಟ್ರಗಳು ಸಹಕಾರ ನೀಡಬೇಕು ಎಂಬ ಬಗ್ಗೆಯೇ ಚರ್ಚಿಸಿದ್ದಾರೆ.
ಆದರೆ, ಪೆಲೋಸಿ ಭೇಟಿಯನ್ನು ವಿರೋಧಿಸಿ ಚೀನಾ ತೈವಾನ್ ಮೇಲೆ ಮಿಲಿಟರಿ ಕ್ರಮಕ್ಕೆ ಮುಂದಾಗುತ್ತಿದೆ. ಚೀನಾದ ಈ ರೀತಿಯ ಪ್ರಚೋದನಕಾರಿ ತಂತ್ರ ದೊಡ್ಡ ಅಪಾಯಕ್ಕೂ ಕಾರಣವಾಗಬಹುದು.
ಇದನ್ನು ಓದಿ: ಪೆಲೋಸಿ ಭೇಟಿಗೆ ಚೀನಾ ಪ್ರಬಲ ವಿರೋಧ: ತೈವಾನ್‌ನ ಸುತ್ತ 'ಮಿಲಿಟರಿ' ಕ್ರಮಕ್ಕೆ ಡ್ರ್ಯಾಗನ್ ಸನ್ನದ್ಧ