ETV Bharat / opinion

ವಿಶೇಷ ಲೇಖನ ; ಜಿಎಸ್‌ಟಿ ಪರಿಹಾರ ವಿಷಯದ ತೊಡಕಿನ ಪರಿಣಾಮಗಳು

author img

By

Published : Sep 22, 2020, 8:33 PM IST

ತಾನು ಕೊಡಮಾಡುವ ಎರಡು ಕೊಡುಗೆಗಳ ಪೈಕಿ ಯಾವುದಾದರೂ ಒಂದನ್ನು ಒಪ್ಪಿಕೊಳ್ಳಬೇಕು ಎಂದು ಭಾರತ ಸರ್ಕಾರವು ರಾಜ್ಯಗಳ ಮೇಲೆ ಒತ್ತಡ ಹೇರುವ ಹಾಗಿಲ್ಲ. ಮುಖ್ಯವಾಗಿ, 'ದೇವರ ಕೃತ್ಯ' ಎಂಬುದು ಭಾರತೀಯ ಕರಾರು ಕಾಯ್ದೆ, 1872ರಲ್ಲಿರುವ ಒಂದು ಪರಿಹಾರವಾಗಿದೆ ಹಾಗೂ ಅದನ್ನು ಜಿಎಸ್‌ಟಿ ಪರಿಹಾರ ವಿಷಯಕ್ಕೆ ಆಮದು ಮಾಡಿಕೊಳ್ಳುವ ಹಾಗಿಲ್ಲ..

GST
ಜಿಎಸ್‌ಟಿ

ಕಳೆದ ತಿಂಗಳು ಹಾಗೂ ಮುಂದಿನ ತಿಂಗಳು ಆರ್ಥಿಕತೆಗೆ, ಅದರಲ್ಲಿಯೂ ತೆರಿಗೆಗಳು ಮತ್ತು ಸಾಲಗಳ ಕ್ಷೇತ್ರಕ್ಕೆ ಅತ್ಯಂತ ಮಹತ್ವದ ತಿಂಗಳುಗಳಾಗಿವೆ. ರೂ. 1.6 ಲಕ್ಷ ಕೋಟಿ ಹೆಚ್ಚುವರಿ ಸಾಲಗಳಿಗೆ ಅನುಮತಿ ನೀಡುವಂತೆ ಕೇಂದ್ರ ಸರ್ಕಾರ ಸಂಸತ್ತಿನ ಅನುಮೋದನೆ ಕೋರಿದೆ. ಹಾಗೂ ಜಿಎಸ್‌ಟಿ ಪರಿಹಾರಕ್ಕೆ ಸಂಬಂಧಿಸಿದ ವಿಷಯಗಳು ಹಾಗೂ ವಿವಾದಗಳ ಹಿನ್ನೆಲೆಯಲ್ಲಿ ವಿಶೇಷ ಸಾಲ ಗವಾಕ್ಷಿಗಾಗಿ 13 ರಾಜ್ಯಗಳು ತಮ್ಮ ಸಹಮತ ವ್ಯಕ್ತಪಡಿಸಿವೆ. ಸದಾ ಸೂಕ್ಷ್ಮವಾಗಿದ್ದ ಈ ವಿಷಯ ಮತ್ತಷ್ಟು ಕಗ್ಗಂಟಾಗಲು ಒಪ್ಪಂದದ ಸಾಮ್ರಾಜ್ಯಕ್ಕೆ ದೇವರ (ದೇವರ ಕೃತ್ಯ) ಪ್ರವೇಶ ಕಾರಣವಾಗಿದೆ.

ಸಾಂವಿಧಾನಿಕ ವಿಷಯಗಳ ಸುತ್ತಲೂ ಕೇಂದ್ರೀಕೃತವಾಗಿರುವ ಭಿನ್ನಾಭಿಪ್ರಾಯಗಳಿಗೆ ಸಂಬಂಧಿಸಿದಂತೆ ಈ ವಿಷಯ ಇನ್ನಷ್ಟು ಸಂಕೀರ್ಣತೆಯನ್ನು ತಂದಂತಾಗಿದೆ. ಹಣಕಾಸುಗಳು, ಕೇಂದ್ರ ಹಾಗೂ ರಾಜ್ಯ ಸಂಬಂಧಗಳು ಹಾಗೂ ಒಕ್ಕೂಟ ವಿಷಯಗಳಿಗೆ ಸಂಬಂಧಿಸಿದಂತೆ ಇನ್ನಷ್ಟು ಹೆಚ್ಚಿನ ಸಮಸ್ಯೆಗಳು ಉದ್ಭವಿಸಲು ಈ ಬೆಳವಣಿಗೆ ಕಾರಣವಾಗಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಜಿಎಸ್‌ಟಿ ಪರಿಹಾರ ಮತ್ತು ಕೇಂದ್ರದ ಪಾತ್ರವನ್ನು ಸುತ್ತುವರಿದಿರುವ ಇತ್ತೀಚಿನ ವಿವಾದವನ್ನು ಕಡ್ಡಾಯವಾಗಿ ಮತ್ತು ಸಮರ್ಥವಾಗಿ ತಪ್ಪಿಸಲೇಬೇಕು.

ಈ ವಿಷಯವು ಸಾರ್ವಜನಿಕ ನೀತಿಗೆ ಸಂಬಂಧಿಸಿದಂತೆ ಕೂಡಾ ಪ್ರಾಮುಖ್ಯತೆ ಹೊಂದಿದೆ. ಏಕೆಂದರೆ, ಭಾರತದ ಆರ್ಥಿಕ ಹಾಗೂ ರಾಜಕೀಯ ರಚನೆಗಳಿಗೆ ಸಂಬಂಧಿಸಿದಂತೆ ಮಹತ್ವದ ಬದಲಾವಣೆಗಳು ಸಂಭವಿಸುತ್ತಿರುವುದು ಹಾಗೂ ಉತ್ಪ್ರೇಕ್ಷಿತ ಹಾಗೂ ರಾಜಕೀಯ ಘೋಷಣೆಗಳಲ್ಲಿ ಅವು ಕೊಚ್ಚಿಹೋಗದಂತೆ ನೋಡಿಕೊಳ್ಳುವ ಮಹತ್ವದ ಪಾಠಗಳನ್ನು ಈ ವಿಷಯ ಒಳಗೊಂಡಿದೆ. ಅದರಲ್ಲಿಯೂ ಜಾಣ್ಮೆಯ ಯೋಚನೆಯ ಸುತ್ತ ನಿರ್ಮಿಸಲ್ಪಟ್ಟ ರಾಜಕೀಯ ಮತ್ತು ಘೋಷಣೆಗಳು ಭಾರತದಂತಹ ಸಂಕೀರ್ಣ ಮತ್ತು ವೈವಿಧ್ಯಮಯ ದೇಶದಲ್ಲಿ ವಿಸ್ತೃತ ಹಾಗೂ ಆಳವಾದ ವಿಶ್ಲೇಷಣಾತ್ಮಕ ತಾರ್ಕಿಕತೆಗೆ ಎಂದಿಗೂ ಪರ್ಯಾಯ ಅನಿಸಲಾರವು.

ಜಿಎಸ್‌ಟಿ ಪರಿಹಾರ: ಕಾಯ್ದೆ ಹಾಗೂ ಅದರ ಅವಕಾಶಗಳು

ಜಾರಿಗೆ ಬಂದ ಮೊದಲ ದಿನದಿಂದಲೇ, ಭಾರತದಲ್ಲಿ ಆಗಲೇ ಸಂಕೀರ್ಣವಾಗಿದ್ದ ವ್ಯವಸ್ಥೆಯನ್ನು ಜಿಎಸ್‌ಟಿ ಮತ್ತಷ್ಟು ಹದಗೆಡಿಸಿದೆ. ಕೋವಿಡ್‌ನಂತಹ ಅನಿರೀಕ್ಷಿತವಾದ ಪರಿಸ್ಥಿತಿಯೊಂದು ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದರೆ ಏನಾದೀತು ಎಂಬುದನ್ನು ಊಹಿಸುವುದು ಒತ್ತಟ್ಟಿಗಿರಲಿ. ಅದನ್ನು ಹೊರತುಪಡಿಸಿದ ವಿವಿಧ ಸಂದರ್ಭಗಳನ್ನು ಗಮನದಲ್ಲಿ ಇಟ್ಟುಕೊಂಡು ಅವುಗಳನ್ನು ಜಾಣ್ಮೆ ಹಾಗೂ ಉಪಯುಕ್ತ ವಿಶ್ಲೇಷಣೆಯ ಮೂಲಕ ನಿರ್ವಹಿಸುವ ಯಾವೊಂದು ಕ್ರಮಗಳಿಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಂದಾಗಲಿಲ್ಲ. ತಾವು ಭಾರೀ ಸುಧಾರಕರು ಎಂಬುದನ್ನು ಸಾಬೀತುಪಡಿಸುವ ಆತುರದಲ್ಲಿ ಬಹುತೇಕ ಪ್ರಮುಖ ಸಮಸ್ಯೆಗಳನ್ನು ರಾಜಕೀಯ ನಾಯಕತ್ವವು ಕಡೆಗಣಿಸಿತು ಅಥವಾ ಅವನ್ನು ಮುಂದೂಡಿತು.

ಇನ್ನು, ರಾಜ್ಯಗಳು ಕೂಡಾ, ತಾವೂ 'ಸುಧಾರಕರು' ಅನಿಸಿಕೊಳ್ಳಬೇಕೆಂಬ ಉದ್ದೇಶದಿಂದ ಆತುರಕ್ಕೆ ಬಿದ್ದುಬಿಟ್ಟವು. ಈ ಪೈಕಿ ಬಹುತೇಕವು ಆರ್ಥಿಕೇತರ ಕಾರಣಗಳಾಗಿದ್ದವು. ಈ ಆತುರದಿಂದಾಗಿಯೇ, 31 ಮಾರ್ಚ್‌ 2016ರಿಂದ ಐದು ವರ್ಷಗಳವರೆಗೆ ಅವುಗಳಿಗೆ ತಗಲುವ ನಷ್ಟವನ್ನು ಭರ್ತಿ ಮಾಡಿಕೊಡುವುದಾಗಿ ಕೇಂದ್ರ ಸರ್ಕಾರ ಆತುರದಲ್ಲಿ ನೀಡಿದ್ದ ಭರವಸೆಯನ್ನು ನೆಚ್ಚಿಕೊಂಡು ಜಿಎಸ್‌ಟಿ ಜಾರಿಯನ್ನು ಒಪ್ಪಿಕೊಂಡುಬಿಟ್ಟವು. ಅಷ್ಟೇ ಅಲ್ಲ, ಸರಕು ಮತ್ತು ಸೇವಾ ತೆರಿಗೆ (ರಾಜ್ಯಗಳಿಗೆ ಪರಿಹಾರ) ಕಾಯ್ದೆ, 2017 ಕ್ಕೆ ಮಂಜೂರಾತಿಯನ್ನೂ ನೀಡಿಬಿಟ್ಟವು.

ಇಂಥಹದ್ದೇ ಅತ್ಯುತ್ಸಾಹದಲ್ಲಿ, ರಾಜ್ಯಗಳ ಅಂತರ್ಗತ ತೆರಿಗೆಗಳ ವರಮಾನದ ಪ್ರಗತಿ ದರವು ಈ ಐದು ವರ್ಷಗಳ ಪರಿವರ್ತನಾ ಅವಧಿಯಲ್ಲಿ ವಾರ್ಷಿಕ ಶೇಕಡಾ 14ರಷ್ಟಾಗಬಹುದು (ವಿಭಾಗ 3) ಎಂದು ರಾಜ್ಯಗಳು ಭಾವಿಸಿಕೊಂಡುಬಿಟ್ಟವು. ಒಂದು ವೇಳೆ ಈ ಪ್ರಮಾಣಕ್ಕಿಂತ ಕಡಿಮೆ ಆಗಬಹುದಾದ ಇಳಿಕೆಯನ್ನು ಮುಂದಿನ ಐದು ವರ್ಷಗಳವರೆಗೆ (2022ಕ್ಕೆ ಕೊನೆಯಾಗುವಂತೆ) ಕೇಂದ್ರ ಸರ್ಕಾರವು ಭರ್ತಿ ಮಾಡಿಕೊಡಬೇಕಿತ್ತು. ಪರಿವರ್ತನಾ ಅವಧಿಯಲ್ಲಿ ಹೀಗೆ ಕೊರತೆಯಾಗುವ ಆದಾಯವನ್ನು ಹೊಸ ಪರೋಕ್ಷ ತೆರಿಗೆಗಳಿಂದ ಭರ್ತಿ ಮಾಡಬೇಕು ಹಾಗೂ ಅವನ್ನು ತೀರುವಳಿಯಾಗದ ಜಿಎಸ್‌ಟಿ ಪರಿಹಾರ ನಿಧಿಗೆ (ವಿಭಾಗ 10) ಭರ್ತಿ ಮಾಡುವುದನ್ನು ನಿಯಮ ಒಳಗೊಂಡಿತ್ತು.

ಈ ವಿಶ್ಲೇಷಣೆ ಹಾಗೂ ರಾಜ್ಯಗಳ ಆದಾಯವು ವಾರ್ಷಿಕ ಶೇಕಡಾ 14ರಷ್ಟು ಏರಿಕೆಯಾಗುವುದು ಎಂಬ ಹೇಳಿಕೆಯು ಆರ್ಥಿಕ ಪ್ರಗತಿಯ ತಪ್ಪು ತಿಳುವಳಿಕೆ ಹಾಗೂ ಭಾರತದ ಪ್ರಗತಿಯನ್ನು ಯಾವುದೂ ತಡೆಯದು ಎಂಬ ಹುಸಿ ನಂಬಿಕೆಯನ್ನು ಆದರಿಸಿತ್ತು. ಇದು ಹೇಗೆಂದರೆ, ಮರಗಳು ಆಕಾಶದ ಕಡೆಗಷ್ಟೇ ಬೆಳೆಯುತ್ತವೆ ಎಂಬ ನಂಬಿಕೆಯಂತೆ. ಜಿಎಸ್‌ಟಿಯ ಸಂಕೀರ್ಣತೆ ಹಾಗೂ ಅದನ್ನು ಜಾರಿಗೊಳಿಸುವಲ್ಲಿಯ ತೊಂದರೆಗಳಿಂದಾಗಿ ಕೋವಿಡ್‌ ಆಗಮನಕ್ಕೂ ಮುನ್ನವೇ ದೇಶದ ಆರ್ಥಿಕತೆಯು ನಿಧಾನಗತಿಯಲ್ಲಿ ತೆವಳಲು ಪ್ರಾರಂಭಿಸಿಯಾಗಿತ್ತು.

ಹೀಗೆ ಉಂಟಾದ ಕೊರತೆ ಅಗಾಧವಾಗಿದ್ದು, ಕನಿಷ್ಟ ರೂ. 3 ಲಕ್ಷ ಕೋಟಿಯಷ್ಟಾಗಿದ್ದರೆ, ಪರಿಹಾರ ನಿಧಿಯ ಸಂಗ್ರಹ ಹೆಚ್ಚೆಂದರೆ ಅಂದಾಜು ರೂ.65,000 ಕೋಟಿಯಷ್ಟಾಗಬಹುದು. ಅಂದರೆ, ರೂ.2.35 ಲಕ್ಷ ಕೋಟಿಯಷ್ಟು ಭಾರೀ ಕೊರತೆ ಈಗ ಉಂಟಾಗಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಸಂಗ್ರಹ ಎಷ್ಟೇ ಆಗಿರಲಿ, ಕೇಂದ್ರ ಸರ್ಕಾರವು ಸಂವಿಧಾನಾತ್ಮಕವಾಗಿ ರಾಜ್ಯಗಳಿಗೆ ಅವುಗಳಿಗೆ ಉಂಟಾದ ನಷ್ಟವನ್ನು ಭರ್ತಿ ಮಾಡಿಕೊಡಲೇಬೇಕು.

ಏಕೆಂದರೆ, ಕೋವಿಡ್‌ ತಂದಿಟ್ಟ ನಷ್ಟದಿಂದಾಗಿ ಬಹುತೇಕ ರಾಜ್ಯಗಳಲ್ಲಿ ಕೊರತೆ ತೀವ್ರ ಪ್ರಮಾಣದಲ್ಲಿದೆ. ಇನ್ನೊಂದೆಡೆ ಪರಿಹಾರ ಹಾಗೂ ಅವುಗಳ ವಿವರಗಳನ್ನು ವಿಭಾಗ 6ರಲ್ಲಿ ಹಾಗೂ ಪರಿವರ್ತನಾ ಅವಧಿಯಲ್ಲಿ (ಅಂದರೆ 5 ವರ್ಷಗಳು) ಸದರಿ ಪರಿಹಾರ ಮೊತ್ತವನ್ನು ಪ್ರತಿ ಎರಡು ತಿಂಗಳಿಗೆ ಒಮ್ಮೆ ನೀಡಬೇಕು ಎಂದು ವಿಭಾಗ 7ರಲ್ಲಿ ಉದಾಹರಣೆಗಳ ಸಹಿತ ಅತ್ಯಂತ ಸ್ಪಷ್ಟವಾಗಿ ವಿವರಿಸಲಾಗಿದೆ.

ಆದರೆ, ಕೊರತೆ ಉಂಟಾದ ಸಂದರ್ಭದಲ್ಲಿ ಕೇಂದ್ರವು ರಾಜ್ಯಗಳಿಗೆ ಪರಿಹಾರ ನೀಡದಿರುವ ಕುರಿತು ಕಾಯ್ದೆಯಲ್ಲಿ ಯಾವುದೇ ನಿರ್ದಿಷ್ಟ ಉಲ್ಲೇಖ ಇಲ್ಲ. ಎಲ್ಲಕ್ಕಿಂತ ಪ್ರಮುಖವಾಗಿ, ಜಿಎಸ್‌ಟಿ ಪರಿಷತ್ತಿನ ಶಿಫಾರಸಿನ ಮೇರೆಗೆ, ಮೂಲ ವರ್ಷದಲ್ಲಿ ಸೇರ್ಪಡೆಯಾಗಿರುವ ಪರಿಸ್ಥಿತಿಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ನಿಯಮಗಳನ್ನು ರೂಪಿಸಬಹುದು ಎಂದು ವಿಭಾಗ 12 ಹೇಳುತ್ತದೆ. ಸಂಗ್ರಹವಾಗದ ಆದಾಯಗಳು, ಪರಿಹಾರದ ವಿಧಾನ, ಲೆವಿ ವಿಧಿಸುವಿಕೆ ಹಾಗೂ ತೆರಿಗೆ ಸಂಗ್ರಹ, ತೆರಿಗೆ ಪಾವತಿಗಳ ರೀತಿ ಹಾಗೂ ವರ್ಗದಂತಹ ಷರತ್ತುಗಳಿಗೆ ಇದು ಒಳಪಟ್ಟಿದೆ. ಹೀಗಾಗಿ, ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ ಕಾಯ್ದೆಗೆ ತಿದ್ದುಪಡಿ ಮಾಡದೆ, ಕೇಂದ್ರವು ತನ್ನ ಬದ್ಧತೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ.

ತೊಡಕುಗಳು...

ಯಾವುದೇ ಸಾಂವಿಧಾನಿಕ ಪರಿಹಾರ ಅಥವಾ ಕಾಯ್ದೆಯು ಆ ಕಾಯ್ದೆಗೆ ನೀಡಿರುವ ಷರತ್ತುಗಳನ್ನು ಪೂರ್ಣ ಪ್ರಮಾಣದಲ್ಲಿ ಅನುಸರಿಸಬೇಕು ಎಂಬುದು ಸರ್ವಮಾನ್ಯ ಒಪ್ಪಿತ ತತ್ವವಾಗಿದೆ. ಅಧಿಕಾರದಲ್ಲಿರುವ ವ್ಯಕ್ತಿಗಳು ದೇವರ ಮಧ್ಯಪ್ರವೇಶವನ್ನು ಈ ಪ್ರಕರಣದಲ್ಲಿ ಬಯಸುತ್ತಿದ್ದರೂ 'ದೇವರ ಕೃತ್ಯ' ಎಂಬುದನ್ನು ಉಲ್ಲೇಖಿಸುವ ಯಾವ ಅವಕಾಶವೂ ಈ ಪ್ರಕರಣದಲ್ಲಿ ಇಲ್ಲವಾಗಿದೆ. ಕಾನೂನಿನ ನಿಯಮದ ಮೂಲ ಆಶಯವೂ ಇದೇ ಆಗಿದೆ. ಕಾಯ್ದೆಯಲ್ಲಿ ಯಾವುದೇ ವಿನಾಯಿತಿಯನ್ನು ನೀಡಲಾಗಿಲ್ಲ ಎಂದಾದಾಗ, ಕೇಂದ್ರವು ರಾಜ್ಯಗಳಿಗೆ ಹಣ ನೀಡಬೇಕು ಎಂಬುದೇ ಅದರ ಅರ್ಥ. ಒಂದು ವೇಳೆ ರಾಜ್ಯಗಳು ಪರ್ಯಾಯ ಪರಿಹಾರ ಬಯಸಿದಲ್ಲಿ ಆ ಮಾತು ಬೇರೆ.

ತಾನು ಕೊಡಮಾಡುವ ಎರಡು ಕೊಡುಗೆಗಳ ಪೈಕಿ ಯಾವುದಾದರೂ ಒಂದನ್ನು ಒಪ್ಪಿಕೊಳ್ಳಬೇಕು ಎಂದು ಭಾರತ ಸರ್ಕಾರವು ರಾಜ್ಯಗಳ ಮೇಲೆ ಒತ್ತಡ ಹೇರುವ ಹಾಗಿಲ್ಲ. ಮುಖ್ಯವಾಗಿ, 'ದೇವರ ಕೃತ್ಯ' ಎಂಬುದು ಭಾರತೀಯ ಕರಾರು ಕಾಯ್ದೆ, 1872ರಲ್ಲಿರುವ ಒಂದು ಪರಿಹಾರವಾಗಿದೆ ಹಾಗೂ ಅದನ್ನು ಜಿಎಸ್‌ಟಿ ಪರಿಹಾರ ವಿಷಯಕ್ಕೆ ಆಮದು ಮಾಡಿಕೊಳ್ಳುವ ಹಾಗಿಲ್ಲ. ವಿಶೇಷ ಕಾಯ್ದೆಗೆ (ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ ಕಾಯ್ದೆ) ಸಾಮಾನ್ಯ ಕಾಯ್ದೆಯು (ಈ ಸಂದರ್ಭದಲ್ಲಿ ಭಾರತೀಯ ಕರಾರು ಕಾಯ್ದೆ, 1872) ದಾರಿ ಮಾಡಿ ಕೊಡಬೇಕು ಎಂಬುದು ಸರ್ವಮಾನ್ಯ ಕಾನೂನುಬದ್ಧ ತತ್ವವಾಗಿದೆ. ಕಾನೂನಿನ ಹಳೆಯ ಗಾದೆ ಮಾತು ಕೂಡಾ ಹೇಳುವುದು ಇದನ್ನೇ.

ನಷ್ಟವನ್ನು ಭರಿಸುವ ಮೂಲಕ ಕಾನೂನಿನ ನಿಯಮ ಹಾಗೂ ಸಾಂವಿಧಾನಿಕ ಪರಿಹಾರಗಳಿಗೆ ಕೇಂದ್ರ ಸರ್ಕಾರವು ತನ್ನ ಬದ್ಧತೆಯನ್ನು ತೋರುವುದು ಪ್ರಸ್ತುತ ಸಂದರ್ಭದ ಅವಶ್ಯಕತೆಯಾಗಿದೆ. ಏಕೆಂದರೆ, ಮೊದಲನೆಯದಾಗಿ ಇಂತಹದೊಂದು ಪರಿಸ್ಥಿತಿ ತಲೆದೋರಲು ಕಾರಣವಾಗಿದ್ದು ಆರ್ಥಿಕತೆಯ ಭವಿಷ್ಯದ ಸಾಧ್ಯತೆಗಳ ಕುರಿತು ಕೇಂದ್ರ ಸರ್ಕಾರ ಮಾಡಿರುವ ತಪ್ಪು ವಿಶ್ಲೇಷಣೆ.

ಎರಡನೆಯದಾಗಿ, ಕೇಂದ್ರ ಸರ್ಕಾರವು ತನ್ನ ಸಾಂವಿಧಾನಾತ್ಮಕ ಕರ್ತವ್ಯಗಳು ಹಾಗೂ ತನ್ನದೇ ಬದ್ಧತೆಗಳಿಂದ ಹಿಂದೆ ಸರಿಯಲಾರದು ಎಂದು ಅದು ಮೂಡಿಸಿರುವ ಪ್ರಭಾವ. ಮೂರನೆಯದಾಗಿ, ತನ್ನ ಸಾಂವಿಧಾನಿಕ ಹಾಗೂ ಕಾನೂನುಬದ್ಧ ಕರ್ತವ್ಯಗಳಿಂದ ಹಿಂದೆ ಸರಿಯುವ ಕೇಂದ್ರ ಸರ್ಕಾರದ ಯಾವುದೇ ಪ್ರಯತ್ನವು ಕೇಂದ್ರ ಮತ್ತು ರಾಜ್ಯಗಳಲ್ಲಿ ಕೇವಲ ಅಪನಂಬಿಕೆಯನ್ನು ಮಾತ್ರ ಹುಟ್ಟುಹಾಕಲು ಪ್ರಾರಂಭಿಸುತ್ತದೆ. ಒಕ್ಕೂಟ ವ್ಯವಸ್ಥೆಗೆ ಇದು ವಿನಾಶಕಾರಿಯೂ ಹೌದು.

ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು, ಸ್ಥಳೀಯ ಸರ್ಕಾರಗಳು ಹಾಗೂ ತನ್ನ ನಾಗರಿಕರು ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ಭಾರತವು ಉತ್ತಮ ಸಾಧನೆ ಮಾಡಲು ಸಾಧ್ಯವಾದೀತು. ಪರಿಹಾರವೊಂದನ್ನು ಮೇಲಿನಿಂದ ಒತ್ತಾಯಪೂರ್ವಕವಾಗಿ ಹೇರಲು ಹೋದರೆ, ಖಂಡಿತವಾಗಿಯೂ ಅದು ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸಲು ಸಾಧ್ಯವೇ ಇಲ್ಲ. ಕೊನೆಯದಾಗಿ, ಸಾಲ ಪಡೆಯುವಂತೆ ರಾಜ್ಯಗಳನ್ನು ಒತ್ತಾಯಿಸುವುದು ನಾಗರಿಕರಿಗೆ ವಿತ್ತೀಯ ಸಮಸ್ಯೆಗಳನ್ನು ಸೃಷ್ಟಿ ಮಾಡುತ್ತದೆ.

ಒಂದು ವೇಳೆ ಅಧಿಕಾರದಲ್ಲಿರುವ ಸರ್ಕಾರಗಳು ಇಂಥದೊಂದು ಕೃತ್ಯಕ್ಕೆ ಮುಂದಾದರೂ ಉಂಟಾಗುವುದು ಮಾತ್ರ ಇದೇ ಪರಿಣಾಮ. ಏಕೆಂದರೆ, ಇಂತಹ ಹೆಚ್ಚುವರಿ ಸಾಲಗಳಿಂದ ಅವು ಕೆಲವು ತಿಂಗಳುಗಳ ಕಾಲ ಮಾತ್ರ ನಿಭಾಯಿಸಲು ಸಾಧ್ಯವಾದೀತು. ರಾಜ್ಯಗಳು ಹೆಚ್ಚೆಚ್ಚು ಸಾಲಗಳನ್ನು ಪಡೆಯುವುದರ ಒಟ್ಟು ಫಲಿತಾಂಶ ಏನೆಂದರೆ, ನಿಕಟ ಭವಿಷ್ಯದಲ್ಲಿ ಅವುಗಳಿಂದ ಹೆಚ್ಚು ತೆರಿಗೆಗಳು ಉತ್ಪತ್ತಿಯಾಗುತ್ತವಷ್ಟೇ.

-ಡಾ. ಎಸ್.‌ ಅನಂತ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.