ETV Bharat / opinion

ಸಂಕಷ್ಟದಲ್ಲಿ ಪ್ರಜಾಪ್ರಭುತ್ವ.. ಅಪಾಯಕ್ಕೆ ಸಿಲುಕಿರುವ ಗಣತಂತ್ರ ಉಳಿಸೋದು ಹೇಗೆ? - ನರೇಂದ್ರ ಮೋದಿ

ಕೆಟ್ಟ ರಾಜಕೀಯದ ನೆರಳಿನಲ್ಲಿ ನಲುಗುತ್ತಿರುವ ಭಾರತದಲ್ಲಿ ನಾಗರಿಕ ಹಕ್ಕುಗಳು ಇಲ್ಲವಾಗುತ್ತಿವೆ. ರಾಷ್ಟ್ರ ನಿರ್ಮಾತೃಗಳು ಕನಸು ಕಂಡ ಸ್ವತಂತ್ರ ಭಾರತ ಇದೇನಾ? ಅನ್ನುವ ವಾತಾವರಣ ದೇಶದಲ್ಲಿ ಸೃಷ್ಟಿಯಾಗುತ್ತಿದೆ. ಅಮೃತ ಮಹೋತ್ಸವದ ಈ ಸುಸಂದರ್ಭದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.

http://10.10.50.90:6060///finaloutc/english-nle/finalout/09-November-2022/16877362_imgr.jpg
ಸಂಕಷ್ಟದಲ್ಲಿ ಪ್ರಜಾಪ್ರಭುತ್ವ.. ಅಪಾಯಕ್ಕೆ ಸಿಲುಕಿರುವ ಗಣತಂತ್ರ ಉಳಿಸೋದು ಹೇಗೆ?
author img

By

Published : Nov 9, 2022, 10:19 PM IST

ಹೈದರಾಬಾದ್​: ವಿಧಾನಸಭೆ, ರಾಜ್ಯ ಹಾಗೂ ಲೋಕಸಣೆಯ ಸದಸ್ಯರನ್ನು ಸಂತೆಯಲ್ಲಿನ ಸರಕುಗಳನ್ನಾಗಿ ಮಾಡಿ, ಕೋಟಿ ಕೋಟಿ ಸುರಿದು ಅಧಿಕಾರವನ್ನು ಕೊಳ್ಳುವುದು ಈಗ ಮಾಮೂಲು ಎಂಬಂತಾಗಿದೆ. ಕೋಟಿ ಕೋಟಿ ನೀಡಿ ಖರೀದಿ ಮಾಡುವ ಈ ರಾಜ ನೀತಿ ಸರಿಯೇ ಎಂಬ ಪ್ರಶ್ನೆಯೂ ಜನರ ಮನಸಿನಲ್ಲಿ ಬಿರುಗಾಳಿಯನ್ನೆಬ್ಬಿಸಿದೆ.

ಶಾಸಕರನ್ನೇ ಸರಕಿನ ವಸ್ತುವಾಗಿಸಿ ಕೋಟಿಗಟ್ಟಲೆ ವಸೂಲಿ ಮಾಡಿ ಅಧಿಕಾರ ಖರೀದಿಸುವುದು- ಎಂಥ ರಾಜಕೀಯ?. ಜನರ ನಿರ್ಧಾರಗಳಿಗೆ ಕಿಂಚಿತ್ತೂ ಬೆಲೆ ನೀಡದೇ ಶಾಂತಿಯುತವಾಗಿ ಚುನಾಯಿತ ಸರ್ಕಾರಗಳನ್ನು ಉರುಳಿಸುವುದು ಪ್ರಜಾಪ್ರಭುತ್ವದ ತಳಹದಿಯನ್ನೇ ಅಲಗಾಡಿಸುವ ಅತ್ಯಂತ ಕೆಟ್ಟ ಮಾರ್ಗವಲ್ಲದೇ ಮತ್ತೇನು?. ಇಂತಹ ಅಯೋಗ್ಯ ರಾಜಕಾರಣದ ಬೆತ್ತಲೆ ನೃತ್ಯಗಳಿಗೆ ಹಲವು ದಶಕಗಳ ಹಿಂದೆಯಿಂದಲೂ ವೇದಿಕೆ ಸಿಕ್ಕಿದೆ.

ಈ ಮಾತಿಗೆ ಇಂಬು ನೀಡುವಂತೆ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್, ಬಿಜೆಪಿ ತನ್ನ ಪಕ್ಷದ ಶಾಸಕರಿಗೆ ಆಮಿಷವೊಡ್ಡುತ್ತಿದೆ ಎಂದು ಆರೋಪಿಸಿದ್ದಾರೆ. ದೆಹಲಿ ಮತ್ತು ಪಂಜಾಬ್‌ನಲ್ಲಿ ತಮ್ಮ ಶಾಸಕರು ತೊಂದರೆಯಲ್ಲಿದ್ದಾರೆ ಎಂದು 'ಎಎಪಿ' ನಾಯಕ ಅರವಿಂದ್ ಕೇಜ್ರಿವಾಲ್ ಇದಕ್ಕೂ ಮೊದಲೇ ಆರೋಪಿಸಿದ್ದಾರೆ. ಆರೋಪ - ಪ್ರತ್ಯಾರೋಪಗಳ ಪರ್ವದಲ್ಲಿ ಎಲ್ಲ ಪಕ್ಷಗಳೂ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಗಾಳಿಗೆ ತೂರಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಆರು ದಶಕಗಳ ಹಿಂದೆ ಕೇರಳದಲ್ಲಿ ನಂಬೂದರಿಪಾದ್ ಸರ್ಕಾರ ವಿಸರ್ಜನೆ ಮಾಡುವ ಮೂಲಕ ಇಂತಹದ್ದೊಂದು ಅಪಾಯಕಾರಿ ಮಾರ್ಗಕ್ಕೆ ಕೈ ಹಾಕಲಾಗಿತ್ತು. ಅವತ್ತಿನಿಂದ ಪ್ರತಿಪಕ್ಷಗಳ ಸರ್ಕಾರಗಳನ್ನು ಕತ್ತು ಹಿಸುಕಿ ರಾಜ್ಯಗಳಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿದ ಕಾಂಗ್ರೆಸ್ ಈ ಅಪಾಯಕಾರಿ ಹಾಗೂ ಭ್ರಷ್ಟ ಇತಿಹಾಸಕ್ಕೆ ಮುನ್ನುಡಿ ಬರೆದಿದ್ದು ಇಡೀ ದೇಶಕ್ಕೆ ಗೊತ್ತಿದೆ. 1984ರಲ್ಲಿ ತೆಲುಗು ನಾಡಲ್ಲಿ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದ ಎನ್ ಟಿಆರ್ ಸರ್ಕಾರವನ್ನು ಇಂದಿರಾಗಾಂಧಿ ಕಿತ್ತೊಗೆದು ರಾಷ್ಟ್ರಪತಿ ಆಳ್ವಿಕೆ ಹೇರಿದ್ದನ್ನು ಯಾರೂ ಮರೆಯಲು ಸಾಧ್ಯವಿಲ್ಲ.

ಅದಾದ ಬಳಿಕ ಸಾಲು ಸಾಲು ಸರ್ಕಾರಗಳು ಉರುಳಿವೆ. ಇದೆಲ್ಲ ಈಗ ಇತಿಹಾಸ.. ಈಗ ಸಮರ್ಪಿತ ಕಾರ್ಯಕರ್ತರ ತ್ಯಾಗ ಮತ್ತು ಆರೆಸ್ಸೆಸ್ ವ್ಯವಸ್ಥೆಯ ನೆರವಿನಿಂದ ಬಿಜೆಪಿ ಕಾಲಕ್ರಮೇಣ ಅಜೇಯ ಶಕ್ತಿಯಾಗಿ ಹೊರಹೊಮ್ಮಿದೆ. ಆದರೆ ಈ ಹಿಂದಿನ ಆಳುವ ಸರ್ಕಾರಗಳ ಮನಸ್ಥಿತಿಯೇನೂ ಬದಲಾಗಿಲ್ಲ. ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ ಎಂಬಂತೆ, ಇವರು ಅದನ್ನ ಮತ್ತಷ್ಟು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ತಾವು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಎದುರಾಳಿ ಪಕ್ಷಗಳನ್ನು ಒಡೆದು ಸರಕಾರಗಳನ್ನು ಉರುಳಿಸುವ ಮೂಲಕ ಸ್ವಂತ ಪಕ್ಷದ ಸರಕಾರಗಳನ್ನು ಸ್ಥಾಪಿಸುವ ಪ್ರಯತ್ನಗಳು ವ್ಯಾಪಕವಾಗಿ ನಡೆಯುತ್ತಿವೆ.

ಅರುಣಾಚಲ ಪ್ರದೇಶ, ಮಧ್ಯಪ್ರದೇಶ, ಮಣಿಪುರ, ಗೋವಾ ಮತ್ತು ಕರ್ನಾಟಕದಲ್ಲಿ ಎದುರಾಳಿ ಪಕ್ಷದ ಶಾಸಕರನ್ನ ಸೆಳೆದು ಕಮಲ ಅರಳಿಸಲಾಗಿದೆ. ಮೊನ್ನೆ ಮೊನ್ನೆ ಶಿವಸೇನೆ, ಕಾಂಗ್ರೆಸ್ ಮತ್ತು ಎನ್‌ಸಿಪಿಯ ಅಘಾಡಿ ಸಮ್ಮಿಶ್ರ ಸರ್ಕಾರವನ್ನು ರಾಜಕೀಯ ತಂತ್ರಗಳೊಂದಿಗೆ ಅಧಿಕಾರದಿಂದ ಕಿತ್ತೊಗೆಯಲಾಗಿದೆ. ಈ ಮೂಲಕ ಪ್ರಜಾಪ್ರಭುತ್ವದ ಸಮಾಧಿ ಮಾಡಿ ಮಹಾರಾಷ್ಟ್ರದಲ್ಲಿ ಅಧಿಕಾರದ ಗದ್ದುಗೆ ಹಿಡಿಯಲಾಗಿದೆ.

ಸಮಯ ಸಿಕ್ಕಾಗ ಬೇರೆ ಪಕ್ಷಗಳು, ಬೇರೆ ಪಕ್ಷದ ನಾಯಕರುಗಳನ್ನು ತಮ್ಮ ತೆಕ್ಕೆಗೆ ತರಲು ಸದಾ ಪ್ರಯತ್ನ ಮಾಡುತ್ತಲೇ ಸಾಗಿದೆ. ಪ್ರತಿಪಕ್ಷಗಳನ್ನು ಸಂಪೂರ್ಣವಾಗಿ ದುರ್ಬಲಗೊಳಿಸುವ ಮತ್ತು ಆಡಳಿತ ಪಕ್ಷಗಳ ಮೇಲೆ ಪ್ರಾಬಲ್ಯ ಸಾಧಿಸುವ ಪ್ರಜಾಪ್ರಭುತ್ವ ವಿರೋಧಿ ಪ್ರವೃತ್ತಿಗಳು ದೇಶದ ಪ್ರಜಾಪ್ರಭುತ್ವವನ್ನು ಅಪಾಯ ದೂಡಿರುವುದಂತೂ ಸುಳ್ಳಲ್ಲ. ಎಲ್ಲ ಪಕ್ಷಗಳೂ ಸೇರಿ ಭ್ರಷ್ಟ ರಾಜಕಾರಣದಿಂದ ದೇಶದಲ್ಲಿ ಈಗಾಗಲೇ ಮಿನುಗುತ್ತಿರುವ ಪ್ರಜಾಪ್ರಭುತ್ವದ ದೀಪವನ್ನು ಸಂಪೂರ್ಣವಾಗಿ ನಂದಿಸುವತ್ತ ಮುನ್ನಡೆ ಇಟ್ಟಿವೆ.

ಅನೈತಿಕ ರೀತಿಯಲ್ಲಿ ಅಧಿಕಾರ ಚಲಾಯಿಸಲು ತಮ್ಮ ಆತ್ಮವನ್ನು ಒತ್ತೆ ಇಡುವುದಿಲ್ಲ ಎಂಬುದು ವಾಜಪೇಯಿ ಅವರ ಅಂದಿನ ಉದಾತ್ತ ಆದರ್ಶವಾಗಿತ್ತು. ಅಧಿಕಾರಕ್ಕಾಗಿ ಅಡೆತಡೆಗಳ ಮೆಟ್ಟಿಲೇರುವುದರಲ್ಲಿ ತಪ್ಪೇನಿಲ್ಲ. ಆದರೆ ಸಮಕಾಲೀನ ರಾಜಕಾರಣ ಅವನತಿಯತ್ತ ಸಾಗುತ್ತಿದೆ. 'ನಲವತ್ತು ಟಿಎಂಸಿ ಶಾಸಕರು ನಮ್ಮೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಗೆದ್ದ ನಂತರ ಅವರು ತಮ್ಮ ಪಕ್ಷವನ್ನು ತೊರೆಯುತ್ತಾರೆ ಎಂದು ಪ್ರಧಾನಿ ಮೋದಿ, ಮೂರು ವರ್ಷಗಳ ಹಿಂದೆ ಪಶ್ಚಿಮ ಬಂಗಾಳದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಘೋಷಿಸಿದ್ದರು. ಹಾಗಾದರೆ ಪ್ರಧಾನಿ ಮೋದಿ ಅವರ ಈ ಮಾತಿನ ಅರ್ಥವೇನು?.

ಪಾರದರ್ಶಕ ಸರ್ಕಾರ ಮತ್ತು ಸರ್ಕಾರದ ತಪ್ಪುಗಳನ್ನು ಬೆಳಕಿಗೆ ತರುವ ಪ್ರಬಲ ಪ್ರತಿಪಕ್ಷಗಳು ದೇಶದ ಪ್ರಗತಿಯ ಚಕ್ರಗಳಾಗಿವೆ. ಭಾರತದಲ್ಲಿ ಪ್ರಜಾಪ್ರಭುತ್ವದ ಸಂರಕ್ಷಣೆಗೆ ಪ್ರಮುಖವಾದ ಪತ್ರಿಕಾ ಸ್ವಾತಂತ್ರ್ಯ ಆಡಳಿತ ಪಕ್ಷಗಳ ಕೈಗೆ ಸಿಕ್ಕಿಹಾಕಿಕೊಳ್ಳುತ್ತಿದೆ. ಜನರು ತಮ್ಮ ಅಸಮ್ಮತಿಯನ್ನು ನಿರ್ಭೀತಿಯಿಂದ ವ್ಯಕ್ತಪಡಿಸುವ ವಾತಾವರಣವೂ ಇಲ್ಲವಾಗಿದೆ. ಸ್ವತಂತ್ರವಾಗಿ ಮತ್ತು ಸರಿಯಾಗಿ ಕಾರ್ಯನಿರ್ವಹಿಸಬೇಕಾದ ವಿವಿಧ ವ್ಯವಸ್ಥೆಗಳು ಮತ್ತು ತನಿಖಾ ಸಂಸ್ಥೆಗಳು ರಾಜಕೀಯ ಅಪರಾಧಿಗಳ ದಾಳಿಗೆ ಒಳಗಾಗುತ್ತಿವೆ. ಕರ್ತವ್ಯ ನಿರ್ವಹಣೆಯಲ್ಲಿ ನಿಷ್ಪಕ್ಷಪಾತವಾಗಿ ನಡೆದುಕೊಳ್ಳಬೇಕಾದ ಕಾರ್ಯವಿಧಾನಗಳು ಆಡಳಿತ ಪಕ್ಷಗಳಿಗೆ ಹುರುಪು ನೀಡುತ್ತಿವೆ.

ಕೆಟ್ಟ ರಾಜಕೀಯದ ನೆರಳಿನಲ್ಲಿ ನಲುಗುತ್ತಿರುವ ಭಾರತದಲ್ಲಿ ನಾಗರಿಕ ಹಕ್ಕುಗಳು ಇಲ್ಲವಾಗುತ್ತಿವೆ. ರಾಷ್ಟ್ರ ನಿರ್ಮಾತೃಗಳು ಕನಸು ಕಂಡ ಸ್ವತಂತ್ರ ಭಾರತ ಇದೇನಾ? ಅನ್ನುವ ವಾತಾವರಣ ದೇಶದಲ್ಲಿ ಸೃಷ್ಟಿಯಾಗುತ್ತಿದೆ. ಅಮೃತ ಮಹೋತ್ಸವದ ಈ ಸುಸಂದರ್ಭದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ದೇಶದಲ್ಲಿ ನಿಜವಾದ ಪ್ರಜಾಪ್ರಭುತ್ವವನ್ನು ಕಾಪಾಡಲು ಸಾಂವಿಧಾನಿಕ ವ್ಯವಸ್ಥೆಗಳು, ಬುದ್ಧಿಜೀವಿಗಳು ಮತ್ತು ಜನರು ಕೈಜೋಡಿಸಬೇಕಾದ ನಿರ್ಣಾಯಕ ಕ್ಷಣ ಇದು.

ಇದನ್ನು ಓದಿ: ಅಂದು ಪಂಚರಾಜ್ಯ, ಇಂದು ಗುಜರಾಜ್ ಚುನಾವಣೆ, ಬೊಮ್ಮಾಯಿ ಸಂಪುಟ ವಿಸ್ತರಣೆಗೆ ಕೂಡಿ ಬರದ ಮುಹೂರ್ತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.