ಪ್ರಸ್ತುತ ಕಾಲಘಟ್ಟದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ನಿಜಕ್ಕೂ ಸವಾಲಿನ ಕೆಲಸವೇ. ಆರೋಗ್ಯವಾಗಿದ್ದರೆ ಸೌಂದರ್ಯವನ್ನೂ ಕಾಪಾಡಿಕೊಳ್ಳಬಹುದು. ಆದರೆ ವಯಸ್ಸಾದಂತೆ ಮುಪ್ಪು ಹಂತಹಂತವಾಗಿ ಸೌಂದರ್ಯವನ್ನು ಆಕ್ರಮಿಸಿಕೊಳ್ಳುತ್ತದೆ. ಸೌಂದರ್ಯ ಕಳೆಗುಂದುತ್ತದೆ. ಆದರೆ ಕೆಲವೊಂದು ಚಟುವಟಿಕೆಗಳು ವಯಸ್ಸಾಗುತ್ತಿದ್ದರೂ ಸೌಂದರ್ಯವನ್ನು ಹಾಗೆಯೇ ಉಳಿಯುವಂತೆ ಮಾಡುತ್ತವೆ. ಇದಕ್ಕೆ ಇಲ್ಲೊಬ್ಬರು ಟಿಪ್ಸ್ ಕೊಟ್ಟಿದ್ದಾರೆ.
ಜಗತ್ತಿನ ಅತ್ಯಂತ 'ಹಾಟೆಸ್ಟ್ ಗ್ರಾಂಡ್ಮಾ' ಎಂದೇ ಹೆಸರಾಗಿರುವ 51 ವರ್ಷದ ಗಿನಾ ಸ್ಟೆವಾರ್ಟ್ಸ್, ವಯಸ್ಸಾದರೂ ಆರೋಗ್ಯದಿಂದಿರಲು ಕೆಲವು ಸಲಹೆಗಳನ್ನು ಕೊಡುತ್ತಾರೆ. ಅತ್ಯಂತ ಪ್ರಖ್ಯಾತ ಆನ್ಲೈನ್ ರೂಪದರ್ಶಿಗಳ ಪೈಕಿ ಒಬ್ಬರಾಗಿರುವ ಇವರು ರಾತ್ರಿ ವೇಳೆ ನಗ್ನವಾಗಿ ಮಲಗಿದರೆ, ಆ್ಯಂಟಿ- ಏಜಿಂಗ್ ಹಾರ್ಮೋನ್ಗಳು ಉತ್ಪತ್ತಿಯಾಗಲು ಸಹಾಯಕವಾಗುತ್ತದೆ ಎನ್ನುತ್ತಾರೆ. ಈ ಮೂಲಕ ನಾವು ಆರೋಗ್ಯವನ್ನು ಕಾಪಾಡಿಕೊಳ್ಳಬಹುದಂತೆ.
ಇದರ ಜೊತೆಗೆ, ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಯೋನಿ ಸೋಂಕಿನ ಸಮಸ್ಯೆಗೂ ಇದು ಪರಿಹಾರ ನೀಡುತ್ತದೆ ಎಂದು ಹೇಳುತ್ತಾರೆ. ಯೋನಿಯ ಆರೋಗ್ಯ ವೃದ್ಧಿಗೆ ನಗ್ನವಾಗಿ ಮಲಗುವುದು ಒಳ್ಳೆಯದು ಎಂಬುದು ಗಿನಾ ಸ್ಟೆವಾರ್ಟ್ಸ್ ಅಭಿಪ್ರಾಯ.
ಹಾಗಾಗಿ, ರಾತ್ರಿ ವೇಳೆ ನಗ್ನವಾಗಿ ಮಲಗುವುದರಿಂದ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ಲೈಂಗಿಕ ಜೀವನವನ್ನು ಉತ್ತಮ ಪಡಿಸಿಕೊಳ್ಳಬಹುದು ಎಂದು ಹೇಳುವ ಅವರು ಈ ರೀತಿಯಾಗಿ ವಿವರ ನೀಡುತ್ತಾರೆ.
'ಯೋನಿಯು ರಾತ್ರಿ ವೇಳೆ ಹಗಲಿಗಿಂತ ಹೆಚ್ಚು ತೇವಾಂಶದಿಂದ ಕೂಡಿರುತ್ತದೆ. ಒಳ ಉಡುಪು ಅಥವಾ ಪೈಜಾಮಾ ರೀತಿಯ ಉಡುಪು ಧರಿಸಿ ಮಲಗುವುದರಿಂದ ಆ ತೇವಾಂಶ ಅಲ್ಲಿಯೇ ಉಳಿದು, ಆ ತೇವಾಂಶದಲ್ಲಿಯೇ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗಿ ಸೋಂಕಿಗೆ ಕಾರಣವಾಗುತ್ತವೆ. ಇದರಿಂದ ಯೋನಿಯ ಆರೋಗ್ಯಕ್ಕೆ ತೊಂದರೆಯಾಗುತ್ತದೆ. ಸಂಪೂರ್ಣ ಬೆತ್ತಲೆಯಾಗಿ ನಿಮ್ಮ ಸಂಗಾತಿಯೊಡನೆ ಲೈಂಗಿಕ ಸುಖ ಅನುಭವಿಸುವುದು ಕೂಡಾ ಆರೋಗ್ಯಕ್ಕೆ ಒಳ್ಳೆಯದು' ಅನ್ನೋದು ಗಿನಾ ಸ್ಟೆವಾರ್ಟ್ಸ್ ಅಭಿಮತ.
'ರಾತ್ರಿ ವೇಳೆ ಬಟ್ಟೆಗಳನ್ನು ಕಳಚಿ ಮಲಗುವುದರಿಂದ ದೇಹದ ಉಷ್ಣಾಂಶವನ್ನು ಹೊಂದಿಸಿಕೊಳ್ಳಬಹುದು. ಇದರಿಂದ ಉತ್ತಮ ನಿದ್ರೆಯೂ ಬರುತ್ತದೆ. ಉತ್ತಮ ನಿದ್ರೆ ಬರುವುದರಿಂದ ತೂಕ ಹೆಚ್ಚಾಗುವ ಬೊಜ್ಜು ಅಥವಾ ಇನ್ನಿತರ ಸಮಸ್ಯೆಗಳಿಂದ ದೂರವಿರಬಹುದು' ಎಂಬುದು ಗಿನಾ ಸ್ಟೆವಾರ್ಟ್ಸ್ ಅನುಭವ.
ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ ಉಂಟಾಗುವ ಉಸಿರಾಟದ ಸಮಸ್ಯೆ, ರಕ್ತದೊತ್ತಡ ಹೆರಿಗೆ ನಂತರ ಅಪಾಯ ತರುತ್ತೆ: ಅಧ್ಯಯನ
ವ್ಯಾಲೆಂಟೈನ್ ಡೇ ದಿನದಂದು ಈ ಬಗ್ಗೆ ಗಿನಾ ಸ್ಟೆವಾರ್ಟ್ಸ್ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಮತ್ತೊಂದು ಪೋಸ್ಟ್ನಲ್ಲಿ ಇದೇ ಆ್ಯಂಟಿ ಏಜಿಂಗ್ ಹಾರ್ಮೋನ್ಗಳನ್ನು ನಗ್ನವಾಗಿ ಮಲಗುವ ಮೂಲಕ ಹೇಗೆ ಸೌಂದರ್ಯ ಕಾಪಾಡಿಕೊಳ್ಳಬಹುದು ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ.
ಸ್ಟೆವಾರ್ಟ್ ವಿರುದ್ಧ ಹರಿದಾಡಿದ್ದ ಗಾಳಿಸುದ್ದಿಗಳು: ಅಷ್ಟು ವಯಸ್ಸಾದರೂ ತುಂಬಾ ಹಾಟ್ ಹಾಟ್ ಆಗಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಪೋಸ್ಟ್ ಮಾಡುತ್ತಿದ್ದ ಗಿನಾ ಸ್ಟೆವಾರ್ಟ್ಸ್ ಅವರು ಫೋಟೋಶಾಪ್ ಮಾಡಿ, ಫೋಟೋಗಳನ್ನು ಹಂಚಿಕೊಳ್ಳುತ್ತಾರೆ ಎಂದು ಗಾಳಿಸುದ್ದಿಗಳನ್ನು 2018ರಲ್ಲಿ ಹರಿಬಿಡಲಾಗಿತ್ತು. ನಾಲ್ಕು ಮಕ್ಕಳ ತಾಯಿ ಇಷ್ಟು ಮೋಹಕವಾಗಿ ಕಾಣಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದೇ ಹೇಳಲಾಗುತ್ತಿತ್ತು.
ಗಿನಾ ತಮ್ಮ ಫಿಲ್ಟರ್ ಮಾಡದ ಫೋಟೋಗಳನ್ನು ಡೈಲಿ ಮೇಲ್ ಆಸ್ಟ್ರೇಲಿಯಾಗೆ ಹಂಚಿಕೊಂಡಾಗ ಆಕೆಯ ಇಳಿವಯಸ್ಸಿನ ಸೌಂದರ್ಯ ನಿಜವೆಂದು ಗೊತ್ತಾಯಿತು. ಕೆಲವೊಂದು ಟಿವಿಗಳಲ್ಲೂ ಆಕೆ ಕಾಣಿಸಿಕೊಂಡರು. ಕೆಲವರು ಟಿವಿಯಲ್ಲಿ ಇರುವುದಕ್ಕಿಂತ ಭಿನ್ನವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಗಿನಾ ಕಾಣಿಸಿಕೊಳ್ಳುತ್ತಾರೆ ಎಂದಿದ್ದರು. ಈಗಲೂ ಗಿನಾ ಆನ್ಲೈನ್ ಮಾಡೆಲಿಂಗ್ ಮತ್ತು ಸಾಮಾಜಿಕ ಜಾಲತಾಣಗಳನ್ನೇ ಬಳಸಿ ಸಂಪಾದನೆ ಮಾಡುತ್ತಿದ್ದಾರೆ.