ವಾಷಿಂಗ್ಟನ್: ಕೊರೊನಾ ಸೋಂಕು ಪೀಡಿತರನ್ನು ಸಂರಕ್ಷಿಸಲು ಪ್ರಾಯೋಗಿಕವಾಗಿ ಸಂಶೋಧಿಸಲಾದ ಲಸಿಕೆಯ ಕ್ಲಿನಿಕಲ್ ಟೆಸ್ಟ್ನಲ್ಲಿ ಪಾಲ್ಗೊಳ್ಳಲು ಮಹಿಳೆಯೊಬ್ಬರು ಸಿದ್ಧರಾಗಿದ್ದಾರೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ (ಎನ್‌ಐಹೆಚ್) ಸಿಯಾಟಲ್‌ನ ಕೈಸರ್ ಪರ್ಮನೆಂಟೆ ವಾಷಿಂಗ್ಟನ್ ಆರೋಗ್ಯ ಸಂಶೋಧನಾ ಸಂಸ್ಥೆಯಲ್ಲಿ ನಡೆಯುತ್ತಿರುವ ಪ್ರಯೋಗದಲ್ಲಿ ಓರ್ವ ಮಹಿಳೆ ಭಾಗಿ ಆಗಲಿದ್ದಾಳೆ. ಮೊದಲ ಪಾಲ್ಗೊಳ್ಳುವವರ ಯೋಜನೆಗಳನ್ನು ಬಹಿರಂಗಪಡಿಸಿದ ಅಧಿಕಾರಿ, ಅನಾಮಧೇಯತೆ ಕಾಪಾಡಲು ಆ ಮಹಿಳೆಯ ಹೆಸರನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿಲ್ಲ.
ಯಾವುದೇ ಸಂಭಾವ್ಯ ಲಸಿಕೆಯನ್ನು ಸಂಪೂರ್ಣವಾಗಿ ಮೌಲ್ಯೀಕರಿಸಲು ಒಂದು ವರ್ಷದಿಂದ 18 ತಿಂಗಳವರೆಗೆ ಸಮಯ ತೆಗೆದುಕೊಳ್ಳುತ್ತದೆ ಎಂದು ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಎನ್ಐಹೆಚ್ ಮತ್ತು ಮಾಡರ್ನಾ ಇಂಕ್ ಅಭಿವೃದ್ಧಿಪಡಿಸಿದ 45 ಯುವ ಹಾಗೂ ಆರೋಗ್ಯವಂತ ಸ್ವಯಂಸೇವಕರೊಂದಿಗೆ ಈ ಪರೀಕ್ಷೆಯು ಆರಂಭವಾಗುತ್ತಿದೆ. ಭಾಗವಹಿಸುವವರು ಸೋಂಕಿಗೆ ಒಳಗಾಗಲು ಯಾವುದೇ ಅವಕಾಶವಿಲ್ಲ. ಏಕೆಂದರೆ, ಅವರು ವೈರಸ್ ಅನ್ನು ಹೊಂದಿರುವುದಿಲ್ಲ. ಲಸಿಕೆಗಳು ಯಾವುದೇ ಆತಂಕಕಾರಿ ಅಡ್ಡಪರಿಣಾಮಗಳು ತೋರುವುದಿಲ್ಲ ಎಂಬುದು ಪರೀಕ್ಷಿಸುವುದೇ ಇದರ ಗುರಿಯಾಗಿದೆ. ಇದು ಯಶಸ್ವಿಯಾದರೇ ದೊಡ್ಡ ಪರೀಕ್ಷೆಗಳಿಗೆ ವೇದಿಕೆ ಆಗಲಿದೆ.
ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ವಿಶ್ವದಾದ್ಯಂತ ಡಜನ್ಗಟ್ಟಲೆ ಸಂಶೋಧನಾ ಗುಂಪುಗಳು ಮದ್ದು ಕಂಡುಹಿಡಿಯಲು ಅವಿರತ ಪ್ರಯತ್ನ ನಡೆಸುತ್ತಿವೆ. ಅವರೆಲ್ಲ ತಮ್ಮದೆಯಾದ ಶೈಲಿಯಲ್ಲಿ ವಿಭಿನ್ನ ರೀತಿಯ ಲಸಿಕೆಗಳನ್ನು ಪತ್ತೆ ಹಚ್ಚುತ್ತಿದ್ದಾರೆ.
ಹೊಸ ತಂತ್ರಜ್ಞಾನಗಳಿಂದ ಅಭಿವೃದ್ಧಿಪಡಿಸಿದ ಮದ್ದು ಸಾಂಪ್ರದಾಯಿಕ ಇನಾಕ್ಯುಲೇಶನ್‌ಗಳಿಗಿಂತ ವೇಗವಾಗಿ ಉತ್ಪಾದಿಸುವುದಲ್ಲದೇ ಹೆಚ್ಚು ಪ್ರಬಲವೆಂದು ಸಾಬೀತುಪಡಿಸಬಹುದು. ಕೆಲವು ಸಂಶೋಧಕರು ತಾತ್ಕಾಲಿಕ ಲಸಿಕೆಗಳನ್ನು ಸಹ ಗುರಿಯಾಗಿಸಿಕೊಂಡು ಸಂಶೋಧನಾ ನಿರತರಾಗಿದ್ದಾರೆ. ಉದಾಹರಣೆಗೆ: ಜನರ ಆರೋಗ್ಯವನ್ನು ಒಂದು ತಿಂಗಳು ಅಥವಾ ಎರಡು ಸಮಯದಲ್ಲಿ ಕಾಪಾಡುವಂತಹ ಮದ್ದು, ದೀರ್ಘಕಾಲೀನ ರಕ್ಷಣೆಗೆ ಅಭಿವೃದ್ಧಿಪಡಿಸಲಾಗುತ್ತದೆ.
ಇನೋವಿಯೊ ಫಾರ್ಮಾಸ್ಯುಟಿಕಲ್ಸ್, ತನ್ನ ಲಸಿಕೆ ಅಭ್ಯರ್ಥಿಯ ಸುರಕ್ಷತಾ ಪರೀಕ್ಷೆಗಳನ್ನು ಮುಂದಿನ ತಿಂಗಳು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಕೆಲವು ಡಜನ್ ಸ್ವಯಂಸೇವಕರ ಮತ್ತು ಮಿಸೌರಿಯ ಕಾನ್ಸಾಸ್ ಸಿಟಿಯಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ಆರಂಭಿಸುವ ಗುರಿ ಹೊಂದಿದೆ. ನಂತರ ಇದನ್ನು ಚೀನಾ ಮತ್ತು ದಕ್ಷಿಣ ಕೊರಿಯಾದಲ್ಲಿ ಇದೇ ಮಾದರಿಯಲ್ಲಿ ಅಧ್ಯಯನ ನಡೆಸಲಾಗುತ್ತದೆ.