ETV Bharat / lifestyle

ಕೊರೊನಾ ಸೋಂಕಿಗೆ ಸ್ವಯಂ ಚಿಕಿತ್ಸೆ; ವೈದ್ಯರು ಹೇಳುವುದೇನು? - ಕೊರೊನಾ ಇಂಜೆಕ್ಷನ್

ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಜನತೆ ಕೋವಿಡ್ ಚಿಕಿತ್ಸೆ ಹಾಗೂ ಸೋಂಕು ಬರದಂತೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಬಹಳಷ್ಟು ತಿಳಿದುಕೊಂಡಿದ್ದಾರೆ ಎಂಬುದು ಗಮನಾರ್ಹ. ಎಲೆಕ್ಟ್ರಾನಿಕ್ ಮೀಡಿಯಾ, ಸೋಷಿಯಲ್ ಮೀಡಿಯಾ, ಗೆಳೆಯರು ಹೀಗೆ ಹಲವಾರು ಮೂಲಗಳಿಂದ ಜನ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

self-medication-during-covid-is-alarming
ಕೊರೊನಾ ಸೋಂಕಿಗೆ ಸ್ವಯಂ ಚಿಕಿತ್ಸೆ; ವೈದ್ಯರು ಹೇಳುವುದೇನು?
author img

By

Published : May 26, 2021, 9:41 PM IST

ಹೈದರಾಬಾದ್: ಭಾರತ ದೇಶವು ಹಿಂದೆಂದೂ ಕಾಣದಂಥ ಸಾಂಕ್ರಾಮಿಕ ರೋಗದ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಎದುರಿಸುತ್ತಿದೆ. ವೈದ್ಯರು ಹಾಗೂ ವಿಜ್ಞಾನಿಗಳ ಸಮೂಹವು ಕೋವಿಡ್-19 ಸೋಂಕು ರೋಗದ ವಿರುದ್ಧ ಹಗಲು ರಾತ್ರಿ ಯುದ್ಧವನ್ನೇ ಮಾಡುತ್ತಿದ್ದಾರೆ. ಆದರೆ ಕೋವಿಡ್-19 ರೋಗಕ್ಕೆ ತುರ್ತಾಗಿ ಚಿಕಿತ್ಸೆ ಸಿಗದ ಕಾರಣ ಬಹಳಷ್ಟು ಜನ ಸ್ವಯಂ ಚಿಕಿತ್ಸೆಗೆ ಮುಂದಾಗುತ್ತಿರುವುದು ಈಗ ಚರ್ಚೆಯ ವಿಷಯವಾಗಿದೆ. ಸ್ವಯಂ ಚಿಕಿತ್ಸೆಯ ಬಗ್ಗೆ ಹಾಗೂ ಈ ಕುರಿತು ವೈದ್ಯರು ಏನು ಹೇಳುತ್ತಾರೆ ಎಂಬುದನ್ನು ತಿಳಿಯೋಣ.

ಸ್ವಯಂ ಚಿಕಿತ್ಸಾ ವಿಧಾನಗಳು

• ಮುಂಜಾಗ್ರತಾ ಚಿಕಿತ್ಸೆ

• ರೋಗಕ್ಕೆ ತಾವೇ ಚಿಕಿತ್ಸೆ ಮಾಡಿಕೊಳ್ಳುವುದು

• ವೈದ್ಯರು ಹೇಳಿದ ಔಷಧಿಗಳೊಂದಿಗೆ ತಮಗೆ ತಿಳಿದ ಔಷಧಗಳನ್ನೂ ತೆಗೆದುಕೊಳ್ಳುವುದು

• ಕೊರೊನಾ ಸೋಂಕಿಂನಿಂದ ಗುಣಮುಖರಾದ ನಂತರ 15 ದಿನಗಳಲ್ಲಿ ಮತ್ತೆ ಪಾಸಿಟಿವ್ ಬಂದಲ್ಲಿ ತಾವೇ ಔಷಧಿ ತೆಗೆದುಕೊಳ್ಳಲಾರಂಭಿಸುವುದು

ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಜನತೆ ಕೋವಿಡ್ ಚಿಕಿತ್ಸೆ ಹಾಗೂ ಸೋಂಕು ಬರದಂತೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಬಹಳಷ್ಟು ತಿಳಿದುಕೊಂಡಿದ್ದಾರೆ ಎಂಬುದು ಗಮನಾರ್ಹ. ಎಲೆಕ್ಟ್ರಾನಿಕ್ ಮೀಡಿಯಾ, ಸೋಷಿಯಲ್ ಮೀಡಿಯಾ, ಗೆಳೆಯರು ಹೀಗೆ ಹಲವಾರು ಮೂಲಗಳಿಂದ ಜನ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

ಇನ್ನು ಕೋವಿಡ್ ಸೋಂಕಿತರಿಗೆ ಆಕ್ಸಿಜನ್ ಸಿಗದಿರುವುದು, ಬೆಡ್ ಅಲಭ್ಯತೆ, ಔಷಧ ಕೊರತೆ ಹಾಗೂ ಸೋಂಕಿತರ ಸಾವುಗಳು ಈ ಎಲ್ಲವುಗಳಿಂದ ಜನ ಸಹಜವಾಗಿಯೇ ಆತಂಕಕ್ಕೀಡಾಗಿದ್ದಾರೆ.

ಇಂಥ ಸಮಯದಲ್ಲಿ ವ್ಯಕ್ತಿಯೊಬ್ಬ ಸೋಂಕಿನಿಂದ ಪಾಸಿಟಿವ್ ಟೆಸ್ಟ್ ಆದಾಗ ಆತನಿಗೆ ಸಹಜವಾಗಿಯೇ ಮನದಲ್ಲಿ ಭೀತಿ ಮೂಡುತ್ತದೆ ಹಾಗೂ ಆತ ತಾನು ಮೀಡಿಯಾಗಳಲ್ಲಿ ನೋಡಿದ, ತಿಳಿದ ಕೋವಿಡ್ ಚಿಕಿತ್ಸೆಗಳತ್ತ ಗಮನಹರಿಸಲಾರಂಭಿಸುತ್ತಾನೆ. ಅಲ್ಲದೆ ತನಗೆ ತಿಳಿದ ಔಷಧಿಗಳನ್ನು ತಂದು ತೆಗೆದುಕೊಳ್ಳಲಾರಂಭಿಸುತ್ತಾನೆ.

ಒಂದೇ ಚಿಕಿತ್ಸಾ ಪದ್ಧತಿ ಎಲ್ಲರಿಗೂ ಅನ್ವಯಿಸದು

ಆದರೆ ಸೋಷಿಯಲ್ ಮೀಡಿಯಾ ಹಾಗೂ ಇನ್ನಿತರ ಮೀಡಿಯಾಗಳಲ್ಲಿ ಹಂಚಿಕೊಳ್ಳಲಾಗುವ ಕೋವಿಡ್ ಚಿಕಿತ್ಸಾ ಕ್ರಮಗಳೆಲ್ಲವೂ ಸತ್ಯವಾಗಿರುವುದಿಲ್ಲ. ಯಾವುದೇ ಔಷಧಿ ತೆಗೆದುಕೊಳ್ಳಬೇಕಾದರೆ ಅದರ ಡೋಸ್ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ವಯಸ್ಸು, ರೋಗದ ತೀವ್ರತೆ, ಇನ್ನಿತರ ಹಿಂದಿನ ರೋಗಗಳು ಹೀಗೆ ಹಲವಾರು ಅಂಶಗಳನ್ನು ಆಧರಿಸಿ ರೋಗಿಗೆ ಔಷಧ ನೀಡಬೇಕಾಗುತ್ತದೆ. ಅಂದರೆ ಒಂದು ಚಿಕಿತ್ಸಾ ಪದ್ಧತಿ ಎಲ್ಲರಿಗೂ ಅನ್ವಯವಾಗುವುದಿಲ್ಲ.

ಇಂಜೆಕ್ಷನ್ ಚುಚ್ಚಿಕೊಳ್ಳಬೇಡಿ

ಆ್ಯಂಟಿವೈರಸ್ ಮಾತ್ರೆ ನುಂಗುವುದು, ತಾವಾಗಿಯೇ ರೆಮ್ಡೆಸಿವಿರ್​ನಂಥ ಔಷಧವನ್ನು ಇಂಜೆಕ್ಟ್ ಮಾಡಿಕೊಳ್ಳುವುದು, ಸ್ಟಿರಾಯ್ಡ್ ಚುಚ್ಚಿಕೊಳ್ಳುವುದು ಮಾಡುವುದರಿಂದ ಗಂಭೀರ ಅಡ್ಡ ಪರಿಣಾಮಗಳಾಗಬಹುದು. ಕೆಲ ಸಾಂಕ್ರಾಮಿಕ ರೋಗಗಳು ಸುಲಭವಾಗಿ ವಾಸಿಯಾಗುವುದಿಲ್ಲವಾದ್ದರಿಂದ ಸ್ವಯಂ ಚಿಕಿತ್ಸೆಯ ಅಡ್ಡಪರಿಣಾಮವಾಗಿ ಸ್ಥಿತಿ ಉಲ್ಬಣಿಸಬಹುದು ಅಥವಾ ಸಾವು ಸಂಭವಿಸಬಹುದು.

ಸೋಂಕಿನ ಆರಂಭದಲ್ಲಿಯೇ ಸ್ಟಿರಾಯ್ಡ್ ತೆಗೆದುಕೊಂಡಲ್ಲಿ ಅದರಿಂದ ದೇಹದಲ್ಲಿ ವೈರಸ್ ಬೆಳವಣಿಗೆ ಹೆಚ್ಚಾಗಿ, ಸಮಸ್ಯೆ ಉಲ್ಬಣಿಸಬಹುದು. ಇನ್ನು ಅತಿಯಾದ ಸ್ಟಿರಾಯ್ಡ್ ಬಳಕೆಯಿಂದ ಬ್ಲ್ಯಾಕ್ ಫಂಗಸ್ ಸೋಂಕು ತಗುಲಬಹುದು ಹಾಗೂ ಕೋವಿಡ್ನಿಂದ ಗುಣಮುಖರಾದರೂ ಸಾವು ಸಂಭವಿಸಬಹುದು. ಇನ್ನು ರೆಮ್ಡಿಸಿವಿರ್ ಇಂಜೆಕ್ಷನ್ ಕೊಡುವ ಮುನ್ನ ಆಸ್ಪತ್ರೆಯಲ್ಲಿ ವೈದ್ಯರು ರೋಗಿವ ಲಿವರ್ ಹಾಗೂ ಅನ್ನನಾಳಗಳ ಬಗ್ಗೆ ಟೆಸ್ಟ್ ಮಾಡುತ್ತಾರೆ. ಹೀಗಾಗಿ ಈ ಔಷಧಿಯನ್ನು ಆಸ್ಪತ್ರೆಗೆ ದಾಖಲಾಗಿದ್ದವರು ವೈದ್ಯರಿಂದಲೇ ಪಡೆಯಬೇಕಾಗುತ್ತದೆ.

ವೈದ್ಯರ ಸಲಹೆ ಪಡೆಯುವುದೇ ಸರಿ

ಕೋವಿಡ್ ಪಾಸಿಟಿವ್ ಟೆಸ್ಟ್ ಆಗುವ ಶೇ 80ಕ್ಕೂ ಹೆಚ್ಚು ಜನರಿಗೆ ಯಾವುದೇ ವಿಶೇಷ ಚಿಕಿತ್ಸೆಯೇ ಬೇಕಾಗುವುದಿಲ್ಲ ಎನ್ನುತ್ತಾರೆ ಪಿಜಿಐ ಚಂಡೀಗಢದ ಪ್ರೊಫೆಸರ್ ಪುರಿ. ಕೋವಿಡ್ ಸೋಂಕಿನಲ್ಲಿ ಶ್ವಾಸಕೋಶದ್ದೇ ಮುಖ್ಯ ಸಮಸ್ಯೆಯಾಗುತ್ತದೆ. ಇದರಿಂದ ಆಕ್ಸಿಜನ್ ಮಟ್ಟ ಕಡಿಮೆಯಾಗುತ್ತದೆ. ಇಂಥ ಸಮಯದಲ್ಲಿ ಆಕ್ಸಿಮೀಟರ್ ಬಳಸಿ ಆಕ್ಸಿಜನ್ ಮಟ್ಟವನ್ನು ಚೆಕ್ ಮಾಡುತ್ತಿರಬೇಕಾಗುತ್ತದೆ. ಒಂದೊಮ್ಮೆ ಆಕ್ಸಿಜನ್ ಮಟ್ಟವು ಕೆಳಗೆ ಹೋದಲ್ಲಿ ತಕ್ಷಣ ಗಾಬರಿಯಾಗಬೇಕಿಲ್ಲ. ಕೋವಿಡ್ ಪಾಸಿಟಿವ್ ಬಂದ ತಕ್ಷಣ ಅದು ಸೌಮ್ಯ ಅಥವಾ ಗಂಭೀರವಾಗಿದ್ದರೂ ಡಾಕ್ಟರ್ ಬಳಿಗೆ ಹೋಗಿ. ಇದರಿಂದ ಸೋಂಕಿನಿಂದ ಬೇಗ ಗುಣಮುಖರಾಗಬಹುದು. ಸದ್ಯಕ್ಕೆ ಇದನ್ನು ಸಂಪೂರ್ಣ ಗುಣಪಡಿಸುವ ಔಷಧಿ ಸಿಕ್ಕಿಲ್ಲವಾದ್ದರಿಂದ ವೈದ್ಯರು ಸೂಕ್ತ ಚಿಕಿತ್ಸೆಯ ಮೂಲಕ ಸೋಂಕನ್ನು ನಿಯಂತ್ರಿಸಿ, ವಾಸಿ ಮಾಡುತ್ತಾರೆ ಎನ್ನುತ್ತಾರೆ ಪ್ರೊಫೆಸರ್ ಪುರಿ.

ಹೀಗಾದರೆ ಎಚ್ಚರಿಕೆ ವಹಿಸಿ

ಮನೆಯಲ್ಲಿಯೇ ಐಸೋಲೇಟ್ ಆಗಿರುವವರು ಸಹ ಸದಾ ವೈದ್ಯರೊಂದಿಗೆ ಸಂಪರ್ಕದಲ್ಲಿರಬೇಕು. ಯಾವುದೇ ಔಷಧಿಯನ್ನು ಅವರ ಸಲಹೆ ಇಲ್ಲದೇ ತೆಗೆದುಕೊಳ್ಳಬಾರದು. ಆಕ್ಸಿಜನ್ ಮಟ್ಟ ಕಡಿಮೆಯಾಗುವುದು, ನಿರಂತರ ಕೆಮ್ಮು, ಉಸಿರಾಟ ಸಮಸ್ಯೆ, ನಿತ್ರಾಣವಾಗುವುದು ಮುಂತಾದ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಎಚ್ಚರಿಕೆ ವಹಿಸಬೇಕೆನ್ನುತ್ತಾರೆ ಪ್ರೊಫೆಸರ್ ಪುರಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.