ETV Bharat / lifestyle

ಸಾವಿನ ಮನೆಗೆ ತಳ್ಳುವ ಕ್ಯಾನ್ಸರ್​ಗೆ ಆಯುರ್ವೇದದಲ್ಲಿ ಇದೆಯಂತೆ ಚಿಕಿತ್ಸೆ! - ಕ್ಯಾನ್ಸರ್ ಚಿಕಿತ್ಸೆ

ಹರ್ಬಲ್ ಥೆರಪಿ ಚಿಕಿತ್ಸೆ ನೀಡಿದ್ದರ ಪರಿಣಾಮವಾಗಿ ಹಲವು ಕ್ಯಾನ್ಸರ್​ ರೋಗಿಗಳು ಚೇತರಿಸಿಕೊಂಡಿದ್ದಾರೆ. ಹರ್ಬಲ್ ಥೆರಪಿ ರೋಗಿಗಳ ಮೇಲೆ ಯಾವುದೇ ಅಡ್ಡಪರಿಣಾಮ ಬೀರುವುದಿಲ್ಲ ಎನ್ನುತ್ತಾರೆ ನಗರದ ಗಾಂಧಿ ಬಜಾರ್​ನಲ್ಲಿರುವ ಕ್ಯಾನ್ಸರ್ ಹರ್ಬಲಿಸ್ಟ್ ಆಸ್ಪತ್ರೆಯ ಡಾ. ರಮೇಶ್.

Dr Ramesh
ಡಾ. ರಮೇಶ್
author img

By

Published : Jun 16, 2020, 10:25 PM IST

Updated : Jun 17, 2020, 12:11 PM IST

ಬೆಂಗಳೂರು: ನಗರದ ವೈದ್ಯರೊಬ್ಬರು ಆಯುರ್ವೇದ ಚಿಕಿತ್ಸೆಯ ಮೂಲಕ ಕ್ಯಾನ್ಸರ್ ಗುಣಪಡಿಸಬಹುದು ಎಂದು 'ಈಟಿವಿ ಭಾರತ'ಕ್ಕೆ ತಿಳಿಸಿದ್ದಾರೆ.

ಹರ್ಬಲ್ ಥೆರಪಿ ಚಿಕಿತ್ಸೆ ನೀಡಿದ್ದರ ಪರಿಣಾಮವಾಗಿ ಹಲವು ಕ್ಯಾನ್ಸರ್​ ರೋಗಿಗಳು ಚೇತರಿಸಿಕೊಂಡಿದ್ದಾರೆ. ಹರ್ಬಲ್ ಥೆರಪಿ ರೋಗಿಗಳ ಮೇಲೆ ಯಾವುದೇ ಅಡ್ಡಪರಿಣಾಮ ಬೀರುವುದಿಲ್ಲ ಎನ್ನುತ್ತಾರೆ ನಗರದ ಗಾಂಧಿ ಬಜಾರ್​ನಲ್ಲಿರುವ ಕ್ಯಾನ್ಸರ್ ಹರ್ಬಲಿಸ್ಟ್ ಆಸ್ಪತ್ರೆಯ ಡಾ. ರಮೇಶ್.

ಈ ಟಿವಿ ಭಾರತ ಜೊತೆ ಮಾತನಾಡಿದ ಅವರು, ಕ್ಯಾನ್ಸರ್ ಮೇಲೆ ಅಯುರ್ವೇದ ಚಿಕಿತ್ಸೆ ಪ್ರಭಾವ ಶಾಲಿಯಾಗಿದೆ. ಕ್ಯಾನ್ಸರ್‌ ಎಂದರೆ ದೊಡ್ಡ ಕಾಯಿಲೆ ಎಂಬ ಭ್ರಮೆಯಿಂದ ಜನತೆ ಹೊರಬರಬೇಕು. ಆಯುರ್ವೇದದ ಸುಲಭ ಚಿಕಿತ್ಸೆಯ ಮುಖೇನ ಸರಳವಾಗಿ ಕ್ಯಾನ್ಸರ್​ ಅನ್ನು ವಾಸಿಮಾಡಬಹುದು. ಕಿಮೋ ಥೆರಪಿ ಹಾಗೂ ರೆಡಿಯೋ ಥೆರಫಿ ಚಿಕಿತ್ಸೆಯಂತೆ ಅಯುರ್ವೇದ ಚಿಕಿತ್ಸೆ ಪಡೆದರೆ, ಯಾವುದೇ ಅಡ್ಡ ಪರಿಣಾಮ ಕೂಡ ಆಗುವುದಿಲ್ಲ ಎಂಬುದು ರಾಮೇಶ್ ಅವರ ವಿಶ್ವಾಸ.

ಕ್ಯಾನ್ಸರ್ ಹರ್ಬಲಿಸ್ಟ್ ಆಸ್ಪತ್ರೆಯ ಡಾ. ರಮೇಶ್

ಕಿಮೋ ಥೆರಫಿಯಿಂದಲೂ ವಾಸಿಯಾಗದ ಕ್ಯಾನ್ಸರ್​ ಆಯುರ್ವೇದದ ಹರ್ಬಲ್ ನ್ಯೂಟ್ರಿಷನ್ ಥೆರಪಿಯಿಂದ ಸಂಪೂರ್ಣ ಗುಣವಾಗುತ್ತೆ. ಜೊತೆಗೆ ಭವಿಷ್ಯದಲ್ಲಿ ಕ್ಯಾನರ್ ಬರದಂತೆ ತಡೆಯುತ್ತದೆ. ಕಿಮೋಥೆರಪಿಯಿಂದ ರೋಗಿಯ ದೇಹದಲ್ಲಿನ ಆರೋಗ್ಯವಂತ ಜೀವಕಣಗಳ ಮೇಲೂ ಅಡ್ಡ ಪರಿಣಾಮ ಉಂಟಾಗುತ್ತದೆ. ಇದರಿಂದ ಕ್ಯಾನ್ಸರ್ ರೋಗಿಗಳ ಆರೋಗ್ಯ ಮಟ್ಟ ಕುಗ್ಗುತ್ತದೆ. ಹರ್ಬಲ್ ಥೆರಪಿ ಕ್ಯಾನ್ಸರ್ ಸೆಲ್​ಗಳನ್ನು ಕೇಂದ್ರೀಕರಿಸಿ ಚಿಕಿತ್ಸೆ ನೀಡಲಾಗುತ್ತದೆ. ರೋಗಿಗೆ ಹೃದಯ ಮತ್ತು ಕಿಡ್ನಿ ದೌರ್ಬಲ್ಯ ಇದ್ದರೆ ಕಿಮೋಥೆರಪಿ ಚಿಕಿತ್ಸೆ ನೀಡಲು ಆಗುವುದಿಲ್ಲ ಎಂದರು.

ಹರ್ಬಲ್​ ಚಿಕಿತ್ಸೆಯಲ್ಲಿ ಹೃದಯ ಸಂಬಂಧ ಕಾಯಿಲೆ ಇದ್ದವರಿಗೂ ಚಿಕಿತ್ಸೆ ನೀಡಬಹುದು. ಈಗಾಗಲೇ ನಮ್ಮಲ್ಲಿ ಚಿಕಿತ್ಸೆ ನೀಡಿ ಯಶಸ್ವಿ ಆಗಿದ್ದೇವೆ. ಕ್ಯಾನ್ಸರ್ ಜೊತೆಗೆ ಹೃದಯ ಸಂಬಂಧಿ ಸಮಸ್ಯೆಗಳು ಸಹ ಹರ್ಬಲ್ ಚಿಕಿತ್ಸೆಯಿಂದ ದೂರಾಗಿವೆ ಎನ್ನುತ್ತಾರೆ ಡಾ. ರಮೇಶ್.

ತಜ್ಞರು ಹೇಳುವುದೇನು?

ಆಯುರ್ವೇದದಲ್ಲಿ ಕ್ಯಾನ್ಸರ್​ಗೆ ಸೂಕ್ತ ಚಿಕಿತ್ಸೆ ಇಲ್ಲ. ಆಯುರ್ವೇದದಲ್ಲಿ ಈ ರೋಗ ಚಿಕಿತ್ಸೆಯ ಬಗ್ಗೆ ಸಂಶೋಧನೆ ನಡೆದಿಲ್ಲ ಎಂದು ಕಿಮೋ ವೈದ್ಯಕೀಯ ತಜ್ಞರ ಸಂಘ 2019ರಲ್ಲಿ ಆಯೋಜಿಸಿದ್ದ ಲಿಂಪೋಕಾನ್ ವೈದ್ಯಕೀಯ ಸಮಾವೇಶದಲ್ಲಿ ರಾಜ್ಯದ ಪ್ರತಿಷ್ಠಿತ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ನಿರ್ದೇಶಕರಾದ ಡಾ. ಸಿ. ರಾಮಚಂದ್ರ ಹೇಳಿದ್ದರು.

ಬಾಯಿ, ಗಂಟಲು, ಶ್ವಾಸಕೋಶ ಅನ್ನನಾಳ, ಗರ್ಭಕೋಶದ ಕರಳು ಇತ್ಯಾದಿ ಅಂಗಗಳ ಕ್ಯಾನ್ಸರ್​ಗಳು ಬರಿಯ ವಿಕಿರಣ ಚಿಕಿತ್ಸೆಯಿಂದ ಗುಣವಾಗಬಲ್ಲ. ಇದಲ್ಲದೆ ಲ್ಯುಕಿಮಿಯಾ ಹಾಗೂ ಲಿಫೋಮಾ ಕ್ಯಾನ್ಸರ್‌ ಕೇವಲ ಕಿಮೋಥೆರಪಿಯಿಂದ ಗುಣವಾಗುವಂಥವು ಎಂಬುದು ವೈದ್ಯರ ವಾದ.

ನಿರ್ದಿಷ್ಟ ಕ್ಯಾನ್ಸರ್‌ಗೆ ನಿರ್ದಿಷ್ಟ ಔಷಧ ಎಂಬುದಾಗಿ ನಿಖರ ಪರಿಣಾಮದ ಯಾವುದೇ ಔಷಧ ಪರ್ಯಾಯ ಪದ್ಧತಿಗಳಿಂದ ಮಾರುಕಟ್ಟೆಗೆ ಬಂದಂತೆ ಕಾಣಿಸುತ್ತಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಆಧುನಿಕ ಪದ್ಧತಿ ಬಿಟ್ಟು ಪರ್ಯಾಯ ಚಿಕಿತ್ಸೆಗೆ ಮೊರೆ ಹೋಗುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ ಎಂಬ ಎಚ್ಚರಿಕೆಯನ್ನು ವೈದ್ಯರ ಕೊಡುತ್ತಾರೆ.

ಕ್ಯಾನ್ಸರ್ ರೋಗಿಗಳು ಹೆಚ್ಚಾಗಿ ಮಸಾಜ್ ಮತ್ತು ಅರೋಮಾ ಥೆರಪಿಯಂತಹ ಸ್ಪರ್ಶ ಚಿಕಿತ್ಸೆಯ ಮೊರೆ ಹೋಗುತ್ತಾರೆ. ಕ್ಯಾನ್ಸರ್ ಉತ್ತಮವಾಗಿ ನಿಭಾಯಿಸಲು ಈ ಚಿಕಿತ್ಸೆಗಳು ಸಹಾಯ ಮಾಡುತ್ತವೆ ಎಂದು ಅನೇಕ ಜನರು ಹೇಳುತ್ತಾರೆ ಎಂಬುದನ್ನು ಇಂಗ್ಲೆಂಡ್​ನ ಕ್ಯಾನ್ಸರ್ ಸಂಶೋಧನಾ ಕೇಂದ್ರ ಹೇಳುತ್ತದೆ.

ಆಯುರ್ವೇದ ಔಷಧದಲ್ಲಿ ಬಳಸುವ ಕೆಲವು ಗಿಡಮೂಲಿಕೆಗಳು ಅಥವಾ ಸಸ್ಯ ಚಿಕಿತ್ಸೆಗಳು ಕ್ಯಾನ್ಸರ್ ತಡೆಗಟ್ಟಲು ಅಥವಾ ಚಿಕಿತ್ಸೆ ನೀಡಲು ನೆರವಾಗಬಹುದು ಎಂದು ಸಂಶೋಧನೆಗಳು ಪರಿಶೀಲನೆ ನಡೆಸುತ್ತಿದೆ. ಆದರೆ, ಆಯುರ್ವೇದ ಔಷಧದ ಭಾಗವಾಗಿರುವ ಕೆಲವು ಚಿಕಿತ್ಸೆಗಳ ಬಗ್ಗೆ ನಮಗೆ ಹೆಚ್ಚಾಗಿ ತಿಳಿದಿಲ್ಲ. ವಿಶೇಷ ಆಹಾರ ಮತ್ತು ಗಿಡಮೂಲಿಕೆಗಳ ಪರಿಹಾರಗಳಂತಹ ಚಿಕಿತ್ಸೆಗಳು ಇವುಗಳಲ್ಲಿ ಸೇರಿವೆ ಎಂದಿದೆ.

ಆಯುರ್ವೇದದಲ್ಲಿನ ಚಿಕಿತ್ಸಾ ವಿಧಾನಗಳು (ಯುಕೆ ಕ್ಯಾನ್ಸರ್ ಸಂಶೋಧನಾ ಕೇಂದ್ರ)

  • ಆಹಾರ ಮತ್ತು ವಿಶೇಷ ಆಹಾರ ಪದ್ಧತಿಗಳ ಪಾಲನೆ
  • ನಿರ್ದಿಷ್ಟ ಆಯುರ್ವೇದ ಔಷಧಿಗಳ ಸೇವನೆ
  • ಗಿಡಮೂಲಿಕೆಗಳ ಔಷಧಿ
  • ಮಸಾಜ್
  • ಧ್ಯಾನ
  • ಯೋಗ, ಉಸಿರಾಟ ಮತ್ತು ವಿಶ್ರಾಂತಿ
  • ಕರುಳಿನ ಶುದ್ಧೀಕರಣ

Last Updated : Jun 17, 2020, 12:11 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.