ನ್ಯೂಯಾರ್ಕ್: ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಷನ್, ಕೋವಿಡ್-19 ವೈರಸ್ನ ಆರು ಹೊಸ ರೋಗಲಕ್ಷಣಗಳನ್ನು ಸೇರಿಸಿದೆ.
ಈ ಹಿಂದೆ ಅದು ಜ್ವರ, ಕೆಮ್ಮು ಮತ್ತು ಉಸಿರಾಟದ ತೊಂದರೆಯಂತಹ ಕೇವಲ ಮೂರು ಲಕ್ಷಣಗಳನ್ನು ಪಟ್ಟಿ ಮಾಡಿತ್ತು. ಈಗ ಸಿಡಿಸಿಯು ನಡುಕ, ಸ್ನಾಯು ನೋವು, ತಲೆನೋವು, ಗಂಟಲು ಹುಣ್ಣು ಮತ್ತು ಹಠಾತ್ ರುಚಿ ಅಥವಾ ವಾಸನೆ ಕಳೆದುಕೊಳ್ಳುವುದು ಕೂಡ ಕೊರೊನಾ ವೈರಸ್ನ ಸಾಮಾನ್ಯ ಸೂಚಕಗಳಾಗಿವೆ ಎಂದು ಸೇರ್ಪಡೆ ಮಾಡಿದೆ.
ವಿಶ್ವ ಆರೋಗ್ಯ ಸಂಸ್ಥೆ ತನ್ನ ವೆಬ್‌ಪುಟದಲ್ಲಿ ಜ್ವರ, ಒಣ ಕೆಮ್ಮು, ಆಯಾಸ, ಅಲರ್ಜಿ, ನೋವು, ಗಂಟಲು ಉರಿಯಂತಹ ಲಕ್ಷಣಗಳನ್ನು ಪಟ್ಟಿ ಮಾಡಿತ್ತು. ಈಗ ಅಮೆರಿಕದ ಆರೋಗ್ಯ ಸಂಸ್ಥೆ ಈ ಪಟ್ಟಿಗೆ ಮತ್ತಷ್ಟು ಲಕ್ಷಣಗಳನ್ನು ಸೇರಿಸಿದೆ.
ಸಿಡಿಸಿಯ ಪ್ರಕಾರ, ತುರ್ತು ಎಚ್ಚರಿಕೆಯ ಚಿಹ್ನೆಗಳ ಪಟ್ಟಿಯಲ್ಲಿ ಉಸಿರಾಟದ ತೊಂದರೆ, ನಿರಂತರ ನೋವು ಅಥವಾ ಎದೆಯಲ್ಲಿ ಒತ್ತಡ, ಗೊಂದಲ ಅಥವಾ ಕೆರಳಿಸುವ ಅಸಮರ್ಥತೆ, ನೀಲಿ ತುಟಿಗಳು ಈ ರೋಗಲಕ್ಷಣಗಳು ಕಂಡುಬರುವ ಜನರು ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು ಎಂದು ಸೂಚಿಸಿದೆ.