ಮುಂಬೈ: ಭಾರತದ ಪ್ರಮುಖ ಇ-ಕಾಮರ್ಸ್ ಮಾರುಕಟ್ಟೆಯಲ್ಲೊಂದಾದ ಟಾಟಾ ಕ್ಲಿಕ್ ಆಪಲ್ ಗ್ರಾಹಕರಿಗೆ ಸರ್ಪ್ರೈಸ್ ನೀಡಿದ್ದು, ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಹೊಸ ಐಫೋನ್ 13 ಅವನ್ನು ಗ್ರಾಹಕರಿಗೆ ತಲುಪಿಸುತ್ತಿರುವ ಮೊದಲ ಸಂಸ್ಥೆಯಾಗಿದೆ.
ನಿನ್ನೆ ಬೆಳಗ್ಗೆ 8.01ಕ್ಕೆ ಟಾಟಾ ಕ್ಲಿಕ್ ಬಹುನಿರೀಕ್ಷಿತ ಫೋನ್ ಅನ್ನು ಅದೃಷ್ಟವಂತ ಗ್ರಾಹಕರಿಗೆ ವಿಶೇಷವಾಗಿ ಕಪ್ಪು ಪೆಟ್ಟಿಗೆಗಳಲ್ಲಿ ಹಸ್ತಾಂತರಿಸಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಟಾಟಾ ಕ್ಲಿಕ್‌ನ ಮುಖ್ಯ ಪೂರೈಕೆ ಅಧಿಕಾರಿ ಸಂದೀಪ್ ಕುಲಕರ್ಣಿ, ನಿರಂತರವಾಗಿ ಮೊದಲು ಗ್ರಾಹಕರ ಅನುಭವವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದೇವೆ. ಹೊಸ ಫೋನ್‌ಗಳೊಂದಿಗೆ ನಮ್ಮ ಗ್ರಾಹಕರ ಮುಖದಲ್ಲಿ ನಗು ಮೂಡಿಸುವ ಇನ್ನೊಂದು ಪ್ರಯತ್ನವಾಗಿದೆ ಎಂದು ಹೇಳಿದರು.
ಗ್ರಾಹಕ ಸಲಾಮ್ ಶೇಖ್, ಬೆಳ್ಳಂ ಬೆಳಗ್ಗೆಯೇ ಹೊಸ ಐಫೋನ್ -13 ಅನ್ನು ಮೊದಲ ಬಾರಿಗೆ ಪಡೆದಿದ್ದು ಖುಷಿ ತಂದಿದೆ. ಇದು ನಿಜಕ್ಕೂ ನನ್ನ ದಿನವಾಗಿದೆ. ಟಾಟಾ ಕ್ಲಿಕ್‌ಗೆ ಧನ್ಯವಾದಗಳು. ನನ್ನ ಕುಟುಂಬ ಮತ್ತು ನನಗೆ ಇದು ಅತ್ಯಂತ ಸ್ಮರಣೀಯವಾಗಿದೆ ಎಂದಿದ್ದಾರೆ.
ಟಾಟಾ ಕ್ಲಿಕ್ ಬ್ರಾಂಡ್‌ಗಳಿಗೆ ಮೊದಲ ಆದ್ಯತೆ ನೀಡುತ್ತಿರುವ ಭಾರತದ ವೇಗವಾಗಿ ಬೆಳೆಯುತ್ತಿರುವ ತಾಣವಾಗಿದೆ. ಮುಂಬರುವ ಹಬ್ಬದ ದಿನಗಳಲ್ಲಿ ( 2021ರ ಅಕ್ಟೋಬರ್ 5 ರಿಂದ 12ರವರೆಗೆ) ತಮ್ಮ ಗ್ರಾಹಕರಿಗೆ ಫ್ಯಾಷನ್, ಎಲೆಕ್ಟ್ರಾನಿಕ್ಸ್, ಬ್ಯೂಟಿ ಮತ್ತು ಗೃಹ ಉತ್ಪನ್ನಗಳ ವಿಭಾಗಗಳಲ್ಲಿ ಉತ್ತಮ ಕೊಡುಗೆಗಳನ್ನು ನೀಡುತ್ತಿದೆ.
ಇದನ್ನೂ ಓದಿ: ಐಫೋನ್ -13 ಬಿಡುಗಡೆ; ಸೆ.24ಕ್ಕೆ ಮಾರುಕಟ್ಟೆಗೆ ಲಗ್ಗೆ.. ಏನಿದರ ವಿಶೇಷತೆ?