ETV Bharat / lifestyle

ಇನ್​ಸ್ಟಾಗ್ರಾಮ್ ಹೊಸ ಅಪ್ಡೇಟ್: ಬಳಕೆದಾರರಿಗೆ ಗುಡ್ ನ್ಯೂಸ್

ಇನ್​ಸ್ಟಾಗ್ರಾಮ್ ತನ್ನ ಬಳಕೆದಾರರಿಗೆ ಗುಡ್ ನ್ಯೂಸ್​ವೊಂದನ್ನು ನೀಡಿದೆ. ವಿಡಿಯೋಗಳಿಗೆ ಸ್ವಯಂ - ರಚಿತ ಶೀರ್ಷಿಕೆಗಳನ್ನ ಪರಿಚಯಿಸಿದೆ.

ಇನ್​ಸ್ಟಾಗ್ರಾಮ್
ಇನ್​ಸ್ಟಾಗ್ರಾಮ್
author img

By

Published : Mar 3, 2022, 11:23 AM IST

ನವದೆಹಲಿ: ನಿಮ್ಮ ಫೀಡ್‌ನಲ್ಲಿರುವ ವಿಡಿಯೋಗಳಿಗೆ ಕಂಪನಿಯು ಸ್ವಯಂ - ರಚಿತ ಶೀರ್ಷಿಕೆಗಳನ್ನು ಸೇರಿಸುತ್ತಿದೆ ಎಂದು ಇನ್​ಸ್ಟಾಗ್ರಾಮ್ ಮುಖ್ಯಸ್ಥ ಆಡಮ್ ಮೊಸ್ಸೆರಿ ಮಂಗಳವಾರ ಹೇಳಿದ್ದಾರೆ.

ಟಿಕ್‌ಟಾಕ್ ಕಳೆದ ಏಪ್ರಿಲ್‌ನಲ್ಲಿ ಸ್ವಯಂ-ಶೀರ್ಷಿಕೆಗಳನ್ನು ಪರಿಚಯಿಸಿತ್ತು. ಇದೀಗ ಸಾಮಾಜಿಕ ಜಾಲತಾಣವಾದ ಇನ್​ಸ್ಟಾಗ್ರಾಮ್ ಕೂಡ ಈ ರೀತಿಯ ಫೀಚರ್​ ಪರಿಚಯಿಸಿದ್ದು, ಶೀರ್ಷಿಕೆಗಳು ಡೀಫಾಲ್ಟ್ ಆಗಿ ಆನ್ ಆಗುತ್ತವೆ. ಪ್ರಾರಂಭದಲ್ಲಿ ಈ ಶೀರ್ಷಿಕೆಗಳು ಆಯ್ಕೆಯ ಭಾಷೆಗಳಲ್ಲಿ ಮಾತ್ರ ಲಭ್ಯವಿದ್ದು, ಮುಂಬರುವ ತಿಂಗಳುಗಳಲ್ಲಿ ಹೆಚ್ಚಿನ ಭಾಷೆಗಳಿಗೆ ಶೀರ್ಷಿಕೆಗಳನ್ನು ವಿಸ್ತರಿಸಲಾಗುತ್ತದೆ ಎಂದು ಮೊಸ್ಸೆರಿ ತಿಳಿಸಿದ್ದಾರೆ.

ಕಳೆದ ತಿಂಗಳು ಇನ್‌ಸ್ಟಾಗ್ರಾಮ್​ ಪ್ರೈವೇಟ್ ಸ್ಟೋರಿ ಲೈಕ್ಸ್ ಎಂಬ ಹೊಸ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿದೆ. ಇದು ಬಳಕೆದಾರರಿಗೆ ಡಿಎಂ ಕಳುಹಿಸದೆಯೇ ಇನ್‌ಸ್ಟಾ ಸ್ಟೋರಿಯನ್ನು ಲೈಕ್​ ಮಾಡಲು ಅನುವು ಮಾಡಿಕೊಡುತ್ತದೆ.

ಇದನ್ನೂ ಓದಿ: ಅಮರಾವತಿಯೇ ಆಂಧ್ರಪ್ರದೇಶದ ರಾಜಧಾನಿ: ಹೈಕೋರ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.