ETV Bharat / lifestyle

ಹೊಸ ಮಾದರಿ ಟಿವಿ ಮಾರುಕಟ್ಟೆಗೆ ತರಲು ಸ್ಯಾಮ್​​​ಸಂಗ್ ಸನ್ನದ್ಧ: ಏನೆಲ್ಲ ಹೊಸತು? - ಕ್ರಿಸ್ಟಲ್ 4 ಕೆ ಯುಹೆಚ್‌ಡಿ

2020 ರ ಸ್ಮಾರ್ಟ್ ಟಿವಿ ಲೈನ್ - ಅಪ್ ಅನ್ನು ಬಿಡುಗಡೆ ಮಾಡುವ ಬಗ್ಗೆ ಸ್ಯಾಮ್‌ಸಂಗ್ ಟ್ವೀಟ್ ಮಾಡಿದೆ. ಕ್ರಿಸ್ಟಲ್ 4 ಕೆ ಯುಹೆಚ್‌ಡಿ, ಹಾಗೂ ಅನ್​​ಬಾಕ್ಸ್ ಮ್ಯಾಜಿಕ್ 3.0 ಶ್ರೇಣಿಯ ಟಿವಿ ಗಳನ್ನು ಭಾರತದಲ್ಲಿ ಹೊರ ತರುತ್ತಿದೆ.

ಸ್ಯಾಮ್​​​ಸಂಗ್​​
ಸ್ಯಾಮ್​​​ಸಂಗ್​​
author img

By

Published : Jul 9, 2020, 7:58 AM IST

ನವದೆಹಲಿ: ಸ್ಯಾಮ್​​​ಸಂಗ್​​ ಕಂಪನಿ ಟಿವಿ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದು, ಈಗ ಹೊಸ ಪ್ಯೂಚರ್​ನೊಂದಿಗೆ ಟಿವಿಗಳನ್ನು ಮಾರುಕಟ್ಟೆಗೆ ತರಲು ಸಿದ್ದವಾಗಿದೆ. 2020 ರ ಸ್ಮಾರ್ಟ್ ಟಿವಿ ಲೈನ್ - ಅಪ್ ಅನ್ನು ಬಿಡುಗಡೆ ಮಾಡುವ ಬಗ್ಗೆ ಸ್ಯಾಮ್‌ಸಂಗ್ ಟ್ವೀಟ್ ಮಾಡಿದೆ.

ಕ್ರಿಸ್ಟಲ್ 4 ಕೆ ಯುಹೆಚ್‌ಡಿ 43 ಇಂಚಿನ ಟಿವಿ 44,400 ರೂ., 50 ಇಂಚಿನ ಆವೃತ್ತಿಗೆ 60,900 ರೂ ಹಾಗೂ 55 ಇಂಚಿನ ಆವೃತ್ತಿಗೆ 67,900 ರೂ., 65 ಇಂಚಿನ ಆವೃತ್ತಿಗೆ 1,32,900 ರೂ., ಮತ್ತು 2,37,900 ರೂ.ಗೆ 75 ಇಂಚಿನ ಮಾದರಿಗಳನ್ನು ಸ್ಯಾಮ್‌ಸಂಗ್ ಪರಿಚಯಿಸುತ್ತಿದೆ. ಈ ಟಿವಿಗಳು ಮಾರುಕಟ್ಟೆಯ ಎಲ್ಲ ಟಿವಿ ಅಂಗಡಿಗಳಲ್ಲೂ ಲಭ್ಯವಾಗಲಿವೆ.

ಇದರ ಜೊತೆ ಅನ್​​ಬಾಕ್ಸ್ ಮ್ಯಾಜಿಕ್ 3.0 ಶ್ರೇಣಿಯ ಟಿವಿಗಳು 32 - ಇಂಚಿನ ಟಿವಿ 20,900 ರೂ.ಗಳ ಆರಂಭಿಕ ಬೆಲೆಯನ್ನು ಹೊಂದಿದೆ. ಮತ್ತು 43-ಇಂಚಿನ ಟಿವಿ ಬೆಲೆ 41,900 ರೂ. ಈ ಎರಡು ಮಾದರಿಯ ಟಿವಿಗಳನ್ನು ಹೊರ ತರುತ್ತಿದೆ.

ಗ್ರಾಹಕರು 'ಮೈ ಸ್ಯಾಮ್‌ಸಂಗ್ ಮೈ ಇಎಂಐ' ಆಫರ್ ಅನ್ನು ಸಹ ಪಡೆಬಹುದಾಗಿದೆ. 32 ಇಂಚಿನ ಸ್ಮಾರ್ಟ್ ಟಿವಿಗಳಿಗೆ 990 ರೂ., 43 ಇಂಚಿನ ಸ್ಮಾರ್ಟ್ ಟಿವಿಗಳಿಗೆ 1,190 ರೂ. ಮತ್ತು 49 ಇಂಚಿನ ಮತ್ತು ಮೇಲಿನ ಸ್ಮಾರ್ಟ್ ಟಿವಿ ಮಾದರಿಗಳಿಗೆ 1,990 ರೂ. ಇಎಂಐ ಆಫರ್​​ ಪಡೆಯಬಹುದು. ಇದಲ್ಲದೇ, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಫೆಡರಲ್ ಬ್ಯಾಂಕ್, ಎಸ್‌ಬಿಐ ಕಾರ್ಡ್‌ಗಳಲ್ಲಿ ಶೇ. 10 ರಷ್ಟು ಕ್ಯಾಶ್‌ಬ್ಯಾಕ್ ಸಹ ಎಲ್ಲ ಮಾದರಿ ಟಿವಿಗಳ ಮೇಲೆ ಲಭ್ಯವಿದೆ ಎಂದು ಕಂಪನಿ ತಿಳಿಸಿದೆ.

2020 ಸ್ಮಾರ್ಟ್ ಟಿವಿ ಶ್ರೇಣಿಯು ಗ್ರಾಹಕರಿಗೆ ಯೂಟ್ಯೂಬ್, ಅಮೆಜಾನ್ ಪ್ರೈಮ್, ನೆಟ್‌ಫ್ಲಿಕ್ಸ್, ಡಿಸ್ನಿ + ಹಾಟ್‌ಸ್ಟಾರ್, ಜಿ- 5, ಇರೋಸ್ ನೌ, ಸೋನಿಲೈವ್, ವೂಟ್ ಮುಂತಾದ ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ಆಯ್ಕೆ ಮಾಡುವ ಆಯ್ಕೆಯನ್ನು ಒದಗಿಸುತ್ತದೆ. ಹೊಸ ಮಾದರಿಗಳು ಹೊಸ ಮಾದರಿಯ ರಿಮೋಟ್‌ನೊಂದಿಗೆ ಬರುತ್ತಿವೆ. ಇದು ಜನಪ್ರಿಯ ಒಟಿಟಿ ಪ್ಲಾಟ್‌ಫಾರ್ಮ್‌ಗಳಾದ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಜಿ- 5 ಗಾಗಿ ಪ್ರತ್ಯೆಕ ಕೀಗಳನ್ನು ಮೀಸಲಿಟ್ಟಿದೆ.

ಹೊಸ ಶ್ರೇಣಿಯ ಸ್ಮಾರ್ಟ್ ಟಿವಿಗಳಿಗೆ ಎರಡು ವರ್ಷ ವಾರಂಟಿ ನೀಡಲಾಗಿದೆ. ಈ ಹೊಸ ಮಾದರಿಯ ಟಿವಿಗಳನ್ನ ನೀವು ಕಂಪ್ಯೂಟರ್ ​ ಆಗಿ ಕೂಡ ಬಳಸಬಹುದಾಗಿದೆ. ಮತ್ತು ಇದರಲ್ಲಿ ಬ್ಲೂಟೂತ್​​ ಕೂಡಾ ಹೊಂದಿದ್ದು, ತಮಗೆ ಬೇಕಾದ ವಿಷಯಗಳನ್ನು, ಚಾನಲ್​ಗಳನ್ನು ಬದಲಾಯಿಸಬಹುದಾಗಿದೆ. ಹಾಗೆಯೇ ಯೂಟ್ಯೂಬ್​ ಕೂಡ ಲಭ್ಯವಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.