ಕ್ಯಾಲಿಫೋರ್ನಿಯಾ: ಕೋವಿಡ್-19 ಲಸಿಕೆ ಕುರಿತು ತಪ್ಪು ಮಾಹಿತಿ, ಅನುಮಾನಗಳು, ವದಂತಿಗಳು ಹರಡಲು ಸಾಮಾಜಿಕ ಮಾಧ್ಯಮಗಳ ಬಳಕೆದಾರರೇ ಕಾರಣರಾಗಿದ್ದಾರೆ ಎಂದು ಫೇಸ್‌ಬುಕ್ ತಿಳಿಸಿದೆ.
ಶೀಘ್ರದಲ್ಲೇ ಪ್ರಪಂಚದಾದ್ಯಂತ ಕೊರೊನಾ ಲಸಿಕೆಗಳು ಲಭ್ಯವಾಗಲಿದೆ ಎಂಬ ಸುದ್ದಿ ಕೇಳುತ್ತಿದ್ದಂತೆಯೇ ಫೇಸ್‌ಬುಕ್ ಕ್ರಮ ಕೈಗೊಳ್ಳಲು ಮುಂದಾಗಿತ್ತು. ಕಳೆದ ಅಕ್ಟೋಬರ್ನಲ್ಲೇ ಸರ್ಕಾರದ ಲಸಿಕೆ ನೀತಿ ಸಂಬಂಧಿತ ಜಾಹೀರಾತುಗಳನ್ನು ಹೊರತು ಪಡಿಸಿ ಇತರ ವ್ಯಾಕ್ಸಿನೇಷನ್‌ಗಳ ಜಾಹೀರಾತುಗಳನ್ನು ತನ್ನ ವೇದಿಕೆಯಲ್ಲಿ ನಿಷೇಧಿಸಿತ್ತು. ಡಿಸೆಂಬರ್ನಲ್ಲಿ ಲಸಿಕೆ ಬಗೆಗಿನ ತಪ್ಪು ಮಾಹಿತಿಯುಳ್ಳ ಪೋಸ್ಟ್ಗಳನ್ನು ತೆಗೆದು ಹಾಕಲು ಪ್ರಾರಂಭಿಸಿತು.
ಇದನ್ನೂ ಓದಿ: ಭಾರತೀಯ ಜನಸಂಖ್ಯೆಯ ಶೇ 1 ಕ್ಕಿಂತಲೂ ಕಡಿಮೆ ಜನರಿಗೆ ಲಸಿಕೆ: ಗೃಹ ವ್ಯವಹಾರಗಳ ಸಂಸದೀಯ ಸಮಿತಿ ಕಳವಳ
ಇದೀಗ ಫೇಸ್‌ಬುಕ್ ನಡೆಸಿದ ಅಧ್ಯಯನದಲ್ಲಿ ಸೋಷಿಯಲ್ ಮೀಡಿಯಾದ ಕೆಲವೇ ಬಳಕೆದಾರರು 'ಲಸಿಕಾ ವಿರೋಧಿ' ಮಾಹಿತಿಗಳನ್ನು ಹರಡಿದ್ದಾರೆ ಎಂಬುದನ್ನು ಪತ್ತೆ ಮಾಡಿದೆ.