ಕೊಳ್ಳೇಗಾಲ (ಚಾಮರಾಜನಗರ): ಕೆಲವು ವರ್ಷಗಳಿಂದ ದೇಹದ ಆರೋಗ್ಯಸ್ಥಿತಿ ಸರಿಯಿಲ್ಲದ ಕಾರಣ ಬೇಸತ್ತ ಮಹಿಳೆಯೊಬ್ಬರು ಸಮೀಪದ ಕಾವೇರಿ ನದಿಗೆ ಹಾರಿ ಪ್ರಾಣಬಿಟ್ಟಿದ್ದಾರೆ. ಪಟ್ಟಣದ ಆದರ್ಶ ಬಡಾವಣೆಯ ನಿವಾಸಿ ನಿಂಗರಾಜಮ್ಮ (60) ಸಾವನ್ನಪ್ಪಿರುವ ಮಹಿಳೆ.
ಕಳೆದ 16 ವರ್ಷಗಳಿಂದ ಮಧುಮೇಹ, ರಕ್ತದೊತ್ತಡ ಖಾಯಿಲೆಯಿಂದ ಬಳಲುತ್ತಿದ್ದ ನಿಂಗರಾಜಮ್ಮ ತನ್ನ ಆರೋಗ್ಯ ಸ್ಥಿತಿಯಿಂದ ಬೇಸತ್ತಿದ್ದರು. ನಿನ್ನೆ ಭೀಮನಗರದಲ್ಲಿರುವ ತನ್ನ ತಾಯಿಮನೆಗೆ ಹೋಗಿ ಬರುವುದಾಗಿ ತಿಳಿಸಿ ಮನೆಯಿಂದ ತೆರಳಿದವರು ಇಂದು ಸರಗೂರು ಗ್ರಾಮದ ಕಾವೇರಿ ನದಿ ದಡದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಸದ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಾರಸುದಾರರಿಗೆ ಮರಣೋತ್ತರ ಪರೀಕ್ಷೆಯ ಬಳಿಕ ಶವ ಹಸ್ತಾಂತರಿಸಲಾಗಿದೆ.