ETV Bharat / jagte-raho

ಬೈಕ್​ಗೆ ಡಿಕ್ಕಿ ಹೊಡೆದ ಬಸ್​​​: ಮಹಿಳೆ ಸಾವು - Woman death

ಬಸ್​ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬಳು ಕೆಳಗೆ ಬಿದ್ದಿದ್ದು, ಅದೇ ವೇಳೆ ಬೇರೊಂದು ಬಸ್​ ಅವಳ ಮೇಲೆ ​ ಹರಿದಿದೆ. ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಮೃತ ಮಹಿಳೆ ರೇಣುಕಾ
author img

By

Published : Apr 24, 2019, 11:19 PM IST

ಬೆಂಗಳೂರು: ಬೈಕ್​ಗೆ ಬಸ್​ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೋರ್ವಳು ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಂಗಳೂರು-ಹೊಸೂರು ಹೆದ್ದಾರಿಯ ಚಂದಾಪುರ ಫ್ಲೈ ಓವರ್​ ಬಳಿ ಸಂಭವಿಸಿದೆ.

ಮೃತ ಮಹಿಳೆಯನ್ನು ರೇಣುಕಾ (25) ಎಂದು ಗುರುತಿಸಲಾಗಿದೆ. ಹೊಸೂರಿನಿಂದ ಬೆಂಗಳೂರಿಗೆ ಹೊರಟಿದ್ದ ತಮಿಳುನಾಡಿಗೆ ಸೇರಿದ ಬಸ್​,​ ಮುಂದೆ ಹೋಗುತ್ತಿದ್ದ ಬೈಕ್​ಗೆ​ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್​ ಹಿಂಬದಿ ಕುಳಿತಿದ್ದ ಮಹಿಳೆ ಕೆಳಗೆ ಬಿದ್ದಿದ್ದು, ಅವಳ ಮೇಲೆ ಬೇರೊಂದು ಬಸ್​ ಹರಿದ ಪರಿಣಾಮ ಮಹಿಳೆಯ ತಲೆ ಛಿದ್ರಗೊಂಡಿದೆ.

ಇನ್ನು ಘಟನೆಯಲ್ಲಿ ಬೈಕ್​ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಮಹಿಳೆ ಮತ್ತು ಗಾಯಗೊಂಡ ವ್ಯಕ್ತಿ ಗಂಡ-ಹೆಂಡತಿಯಾಗಿದ್ದು ಹೆದ್ದಾರಿ ಪಕ್ಕದ ನೆರಳೂರಿನಲ್ಲಿ ವಾಸವಿದ್ದರು. ಆಂಧ್ರದ ಚಿತ್ತೂರು ಜಿಲ್ಲೆಯ ಮದನಪಲ್ಲಿ ಮೂಲದವರಾದ ದಂಪತಿ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರು ಮಕ್ಕಳನ್ನು ಅಗಲಿದ ತಾಯಿ ರೇಣುಕಾಳ ಸಂಬಂಧಿಕರ ಗೋಳು ಮುಗಿಲು ಮುಟ್ಟಿದೆ. ಸ್ಥಳಕ್ಕೆ ಸೂರ್ಯ ಸಿಟಿ ಪೊಲೀಸರು ಆಗಮಿಸಿ ಪರಿಶೀಲನೆ ಮಾಡಿದ್ದಾರೆ.

Intro:ಬಸ್ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಓಋವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಬೆಂಗಳೂರು-ಹೊಸೂರು ಹೆದ್ದಾರಿಯ ಚಂದಾಪುರ ಫ್ಲೈಓವರ್ ಬಳಿ ಅಪಘಾತ ನಡೆದಿದೆ.
ತಮಿಳುನಾಡಿಗೆ ಸೇರಿದ ಬಸ್,ಹೊಸೂರಿನಿಂದ ಬೆಂಗಳೂರಿಗೆ ಹೊರಟಿದ್ದ ಬಸ್ ಮುಂದೆ ಹೋಗುತ್ತಿದ್ದ ಬೈಕಿಗೆ ವೇಗವಾಗಿ ಡಿಕ್ಕಿ ಹೊಡೆದಿದೆ.Body:ಡಿಕ್ಕಿಯ ರಭಸಕ್ಕೆ ಬೈಕ್ ಕೆಳಗುರುಳಿದೆ. ಬೈಕಿನ ಹಿಂಬದಿ ಕುಳಿತಿದ್ದ ಮಹಿಳೆ ಕೆಳಗೆ ಬಿದ್ದಾಗ ಮಹಿಳೆ ತಲೆ ಮೇಲೆ ಬಸ್ ಹರಿದಿದೆ. ಸ್ಥಳದಲ್ಲಿಯೇ ಮಹಿಳೆ ಸಾವನ್ನಪ್ಪಿದ್ದಾಳೆ. ಬೈಕ್ ಸವಾರನ ಸ್ಥಿತಿ ಗಂಭೀರವಾಗಿದ್ದು ಹತ್ತಿರದ ಖಾಸಗೀ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಮಹಿಳೆಯನ್ನು ರೇಣುಕಾ(55) ಎಂದು ಗುರ್ತಿಸಲಾಗಿದೆ. ಗಂಡ ವೆಂಕಟರಮಣ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ.. ರೇಣುಕಾ ಮತ್ತು ವೆಂಕಟರಮಣ ಇಬ್ಬರು ಗಂಡ ಹೆಂಡತಿಯಾಗಿದ್ದು ಹೆದ್ದಾರಿ ಪಕ್ಕದ ನೆರಳೂರಿನಲ್ಲಿ ವಾಸವಿದ್ದರು. ಆಂದ್ರದ ಚಿತ್ತೂರು ಜಿಲ್ಲೆಯ ಮದನಪಲ್ಲಿ ಮೂಲದವರಾದ ದಂಪತಿಗಳಿಬ್ಬರು ಖಾಸಗೀ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿದ್ದರುConclusion:ಬೆಳಗ್ಗೆ ರೇಣುಕಾರನ್ನು ಬೊಮ್ಮಸಂದ್ರದ ಪ್ರಿಂಟ್ ಪಾಯಿಂಟ್ ನಲ್ಲಿ ಬಿಟ್ಟು ವೆಂಕಟರಮಣಪ್ಪ ಕಾಡಬಿಸನಹಳ್ಳಿಯ ಸಿಂಹಾದ್ರಿ ಎಲೆಕ್ಟರಿಕಲ್ಸ್ಗೆ ಕೆಲಸಕ್ಕೆ ಆಕ್ಟಿವಾ ಹೊಂಡಾದಲ್ಲಿ ತೆರಳುತ್ತಿದ್ದರು. ಇಬ್ಬರು ಮಕ್ಕಳನ್ನು ಅಗಲಿರುವ ತಾಯಿ ರೇಣುಕಾರ ಸಂಬಂದಿಗಳ ಗೋಳು ಮುಗಿಲು ಮುಟ್ಟಿದೆ. ಬಸ್ ಚಾಲಕ ಪರಾರಿಯಾಗಿದ್ದು, ಸ್ಥಳಕ್ಕೆ ಸೂರ್ಯಸಿಟಿ ಪೊಲೀಸರು ಆಗಮಿಸಿ ಪತಿಶೀಲನೆಯಲ್ಲಿ ತೊಡಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.