ETV Bharat / jagte-raho

ದೊಡ್ಡ ಬೇಟೆ​: 7 ದಿನಗಳ ಬಳಿಕ ಮೋಸ್ಟ್​ ವಾಂಟೆಡ್​​​​​ ಕ್ರಿಮಿನಲ್​​ ವಿಕಾಸ್​ ದುಬೆ ಅರೆಸ್ಟ್​ - ವಿಕಾಸ್​ ದುಬೆ ಅರೆಸ್ಟ್​

ಕಾನ್ಪುರ​ ಎನ್​ಕೌಂಟರ್​ನ ಪ್ರಮುಖ ಆರೋಪಿ ರೌಡಿಶೀಟರ್​ ವಿಕಾಸ್​ ದುಬೆಯನ್ನು ಮಧ್ಯ ಪ್ರದೇಶದ ಉಜ್ಜೈನಿಯಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ಮಧ್ಯ ಪ್ರದೇಶ ಗೃಹ ಸಚಿವ ನರೋತ್ತಮ್​ ಮಿಶ್ರಾ ಸ್ಪಷ್ಟಪಡಿಸಿದ್ದಾರೆ.

Vikas Dubey arrested in Madhya Pradesh's Ujjain
ವಿಕಾಸ್​ ದುಬೆ ಅರೆಸ್ಟ್​
author img

By

Published : Jul 9, 2020, 10:14 AM IST

Updated : Jul 9, 2020, 10:30 AM IST

ಉಜ್ಜೈನಿ (ಮಧ್ಯ ಪ್ರದೇಶ): ಎಂಟು ಪೊಲೀಸರ ಹತ್ಯೆಗೆ ಕಾರಣವಾಗಿದ್ದ ಕಾನ್ಪುರ​ ಎನ್​ಕೌಂಟರ್​ನ ಪ್ರಮುಖ ಆರೋಪಿ ರೌಡಿಶೀಟರ್​ ವಿಕಾಸ್​ ದುಬೆಯನ್ನು ಕೊನೆಗೂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಾಂಟೆಡ್​​​​​ ಕ್ರಿಮಿನಲ್​​ ವಿಕಾಸ್​ ದುಬೆ ಅರೆಸ್ಟ್​

ಮಧ್ಯ ಪ್ರದೇಶದ ಉಜ್ಜೈನಿಯಲ್ಲಿ ಇಂದು ಬೆಳಗ್ಗೆ ವಿಕಾಸ್​ ದುಬೆಯನ್ನು ಅರೆಸ್ಟ್​ ಮಾಡಲಾಗಿದ್ದು, ಕಸ್ಟಡಿಯಲ್ಲಿರಿಸಲಾಗಿದೆ ಎಂದು ಮಧ್ಯ ಪ್ರದೇಶ ಗೃಹ ಸಚಿವ ನರೋತ್ತಮ್​ ಮಿಶ್ರಾ ಸ್ಪಷ್ಟಪಡಿಸಿದ್ದಾರೆ. ಆತನನ್ನು ಬಂಧಿಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಜುಲೈ 3 ರಂದು ಉತ್ತರ ಪ್ರದೇಶದ ಕಾನ್ಪುರದ ಬಿಕ್ರು ಗ್ರಾಮದಲ್ಲಿ ವಿಕಾಸ ದುಬೆ ಬಂಧನಕ್ಕೆ ತೆರಳಿದ್ದ ವೇಳೆ, ಆತ ಹಾಗೂ ಆತನ ಸಹಚರರು ಪೊಲೀಸರ ಮೇಲೆ ದಾಳಿ ನಡೆಸಿ 8 ಸಿಬ್ಬಂದಿಯನ್ನ ಹತ್ಯೆ ಮಾಡಿದ್ದರು. ಘಟನೆ ನಡೆದ 7 ದಿನಗಳ ಬಳಿಕ ದುಬೆ ಸೆರೆ ಸಿಕ್ಕಿದ್ದಾನೆ.

ಬಿಕ್ರು ಗ್ರಾಮದ ನಿವಾಸಿಯಾಗಿರುವ ವಿಕಾಸ್​ ದುಬೆ ವಿರುದ್ಧ ಕೊಲೆ, ದರೋಡೆ ಮತ್ತು ಅಪಹರಣ ಸೇರಿ 60ಕ್ಕೂ ಹೆಚ್ಚು ಕ್ರಿಮಿನಲ್ ಕೇಸ್​ಗಳು ದಾಖಲಾಗಿವೆ. 2001 ರಲ್ಲಿ ಬಿಜೆಪಿ ನಾಯಕ ಸಂತೋಷ್ ಶುಕ್ಲಾ ಅವರನ್ನು ಹತ್ಯೆ ಮಾಡಿದ ಆರೋಪ ಕೂಡ ದುಬೆ ಮೇಲಿದೆ.

Last Updated : Jul 9, 2020, 10:30 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.