ಹುಬ್ಬಳ್ಳಿ: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬೆಂಡಿಗೇರಿ ಠಾಣೆ ಪೊಲೀಸರು ಬಂಧಿಸಿರುವ ಘಟನೆ ಇಂದು ನಡೆದಿದೆ.
ವಿನೋದ ಮೇಘರಾಜ್ ಹಬೀಬ (44 ) ಬಂಧಿತ ಆರೋಪಿಯಾಗಿದ್ದು, ಬಂಧಿತನಿಂದ 6,300 ಮೌಲ್ಯದ 300 ಗ್ರಾಂ ಗಾಂಜಾ ಮತ್ತು 300 ರೂ. ನಗದು ಹಣವನ್ನು ಜಪ್ತಿ ಮಾಡಲಾಗಿದೆ. ಹುಬ್ಬಳ್ಳಿ ಹಳೇ ಪಿ.ಬಿ.ರೋಡ್ ಬಿಡ್ನಾಳ ಕ್ರಾಸ್ ಹತ್ತಿರ ಈತ ಗಾಂಜಾ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇಲೆ ಇನ್ಸ್ ಪೆಕ್ಟರ್ ಅರುಣಕುಮಾರ್ ವಿ ಸಾಳುಂಕೆ ನೇತೃತ್ವದಲ್ಲಿ ದಾಳಿ ಮಾಡಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.