ಮಂಗಳೂರು: ಮೀನು ಸಾಗಣೆ ಮಾಡುವ ಕಂಟೈನರ್ ಮೂಲಕ ಅಕ್ರಮವಾಗಿ ಗೋಮಾಂಸ ಸಾಗಣೆ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ ಬಜರಂಗದಳದ ಕಾರ್ಯಕರ್ತರು ಇಬ್ಬರು ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಇಂದು ಬೆಳ್ಳಂಬೆಳಗ್ಗೆ ಕಣ್ಣೂರಿನಿಂದ ವಾಹನವನ್ನು ಬೆನ್ನಟ್ಟಿದ ಇಬ್ಬರು ಬಜರಂಗದಳದ ಕಾರ್ಯಕರ್ತರು ಪಂಪ್ ವೆಲ್ ಬಳಿ ವಾಹನವನ್ನು ತಡೆದಿದ್ದಾರೆ. ಮೀನು ಸಾಗಣೆ ಮಾಡುತ್ತಿದ್ದ ವಾಹನದಲ್ಲಿ ಸುಮಾರು 2 ಟನ್ ಗಿಂತಲೂ ಅಧಿಕ ಅಕ್ರಮ ಗೋಮಾಂಸ ಪತ್ತೆಯಾಗಿದೆ.
ತಕ್ಷಣ ಕಾರ್ಯಪ್ರವೃತ್ತರಾದ ಕಂಕನಾಡಿ ನಗರ ಠಾಣಾ ಪೊಲೀಸರು ಗೋಮಾಂಸ ಸಹಿತ ವಾಹನ ಹಾಗೂ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.