ETV Bharat / jagte-raho

ಕೇಕ್‌ನಲ್ಲಿ ಡ್ರಗ್ಸ್‌ ಬೆರೆಸಿ ಗೆಳತಿ ಮೇಲೆ ಅತ್ಯಾಚಾರ: ಆರೋಪಿಗಳು ಅರೆಸ್ಟ್​ - Hyderabad crime latest news

ಹೈದರಾಬಾದ್​ನ ಜ್ಯುಬಿಲಿ ಹಿಲ್ಸ್ ಪ್ರದೇಶದಲ್ಲಿ ವಿದ್ಯಾರ್ಥಿನಿ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Hyderabad gangrape case
ಗೆಳತಿಯನ್ನೇ ರೇಪ್​ ಮಾಡಿದ್ದ ಆರೋಪಿಗಳು ಅರೆಸ್ಟ್​
author img

By

Published : Oct 17, 2020, 1:38 PM IST

ಹೈದರಾಬಾದ್: ಸ್ನೇಹಿತೆಯನ್ನು ಲಾಡ್ಜ್​ಗೆ ಕರೆದೊಯ್ದು, ಕೇಕ್​ನಲ್ಲಿ ಡ್ರಗ್ಸ್​ ಬೆರೆಸಿ ಕೊಟ್ಟು ಅತ್ಯಾಚಾರ ಎಸಗಿದ್ದ ಮೂವರು ಆರೋಪಿಗಳನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತೆಯ ಸ್ನೇಹಿತರು ಹಾಗೂ ನೆರೆಹೊರೆಯವರೂ ಆಗಿರುವ ಜೋಸೆಫ್​, ನವೀನ್​ ರೆಡ್ಡಿ ಮತ್ತು ರಾಮು ಬಂಧಿತ ಆರೋಪಿಗಳು.

ತೆಲಂಗಾಣದ ಹೈದರಾಬಾದ್​ನ ಜ್ಯುಬಿಲಿ ಹಿಲ್ಸ್ ಪ್ರದೇಶದಲ್ಲಿ ಅಕ್ಟೋಬರ್​ 5 ರಂದು ಕಾಲೇಜು ಶುಲ್ಕ ಪಾವತಿಸಲೆಂದು ಕಾಲೇಜಿಗೆ ತೆರಳಿದ್ದ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಶುಲ್ಕ ಪಾವತಿಸಿ ಹಿಂದಿರುಗುವ ವೇಳೆ ಆರೋಪಿಗಳು ಬರ್ತ್‌ಡೇ ಪಾರ್ಟಿ ಇದೆ ಎಂದು ಆಕೆಯನ್ನು ಲಾಡ್ಜ್​ಗೆ ಕರೆದೊಯ್ದು, ಕೇಕ್​ನಲ್ಲಿ ಡ್ರಗ್ಸ್​ ಬೆರೆಸಿ ಕೊಟ್ಟು ಕೃತ್ಯ ಎಸಗಿದ್ದರು.

ಘಟನೆ ಬಳಿಕ ಈ ಬಗ್ಗೆ ಹೊರಗಡೆ ಬಾಯ್ಬಿಟ್ಟರೆ ಕೊಲೆ ಮಾಡುವುದಾಗಿ ಕೂಡ ಬೆದರಿಕೆ ಹಾಕಿದ್ದರು. ಆದರೆ ಎರಡು ದಿನಗಳ ಬಳಿಕ ಆಕೆಗೆ ಆರೋಗ್ಯದಲ್ಲಿ ಏರುಪೇರಾಗಿ ಕುಸಿದು ಬಿದ್ದಿದ್ದು, ಆಸ್ಪತ್ರೆಗೆ ಕರೆದೊಯ್ದಾಗ ಈ ವಿಚಾರ ಬೆಳಕಿಗೆ ಬಂದಿತ್ತು. ಈ ಸಂಬಂಧ ಸಂತ್ರಸ್ತೆಯ ಪೋಷಕರು ಜ್ಯುಬಿಲಿ ಹಿಲ್ಸ್ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.