ETV Bharat / jagte-raho

ಗಣಿನಾಡಿನಲ್ಲಿ ವ್ಯಕ್ತಿಯ ತಲೆ ಹೊಡೆದು 12 ಲಕ್ಷ ರೂಪಾಯಿ ದೋಚಿದ ದರೋಡೆಕೋರರು! - ದರೋಡೆಕೋರರು ಅಶೋಕ್ ತಲೆಗೆ ಹೊಡೆದು ಸ್ಕೂಟರ್ ಕಸಿದುಕೊಂಡು ಪರಾರಿ

ಸ್ಕೂಟರ್​ನಲ್ಲಿ ತೆರಳುತ್ತಿದ್ದ ವೇಳೆ ದುಷ್ಕರ್ಮಿಗಳ ತಂಡವೊಂದು ಅಡ್ಡಗಟ್ಟಿ ವ್ಯಕ್ತಿಯ ತಲೆ ಹೊಡೆದು ಹಣ ದೋಚಿರುವ ಘಟನೆ ನಗರದಲ್ಲಿ ನಡೆದಿದೆ.

kn_04_bly_040220_crimenews_ka10007
ಗಣಿನಾಡಿನಲ್ಲಿ, ವ್ಯಕ್ತಿಯ ತಲೆ ಹೊಡೆದು 12 ಲಕ್ಷ ರೂಪಾಯಿ ದೋಚಿದ ದರೋಡೆ ಕೋರರು
author img

By

Published : Feb 5, 2020, 6:18 AM IST

ಬಳ್ಳಾರಿ: ಸ್ಕೂಟರ್​ನಲ್ಲಿ ತೆರಳುತ್ತಿದ್ದ ವೇಳೆ ದುಷ್ಕರ್ಮಿಗಳ ತಂಡವೊಂದು ಅಡ್ಡಗಟ್ಟಿ ವ್ಯಕ್ತಿಯ ತಲೆ ಹೊಡೆದು ಸುಮಾರು 12 ಲಕ್ಷ ಹಣ ದೋಚಿರುವ ಘಟನೆ ನಗರದಲ್ಲಿ ನಡೆದಿದೆ.

ನಗರದ ಜಿಲ್ಲಾ ಕ್ರೀಡಾಂಗಣ ರಸ್ತೆಯಲ್ಲಿ ಅಶೋಕ್ ಭೂತಡ ಅವರು ಬಂಡಿ‌ ಮೋಟ್ ಪ್ರದೇಶದಲ್ಲಿರುವ ರವಿರಾಜ್ ಎಂಬುವವರ ಕಚೇರಿಯಿಂದ 12 ಲಕ್ಷ ಹಣ ಪಡೆದು ಸ್ಕೂಟರ್​ನಲ್ಲಿ‌ ಇಟ್ಟುಕೊಂಡು ಹೋಗುವಾಗ ಈ ಘಟನೆ ನಡೆದಿದೆ.

ಫ್ಯಾಷನ್ ಡಿಸೈನ್ ಕಾಲೇಜು ಸಮೀಪದ ಹಿಂಬದಿಯಿಂದ ಬಂದ ದರೋಡೆಕೋರರು ಅಶೋಕ್ ತಲೆಗೆ ಹೊಡೆದು ಸ್ಕೂಟರ್ ಕಸಿದುಕೊಂಡು ಪರಾರಿಯಾಗಿದ್ದಾರೆ. ಅಶೋಕ್ ಅವರು ಪೊಲೀಸರಿಗೆ ದೂರು‌ಕೊಡಲು ಹೋದಾಗ ನಗರದ ನಲ್ಲಚೆರವು ಪ್ರದೇಶದಲ್ಲಿ ಸ್ಕೂಟರ್ ಪತ್ತೆಯಾಗಿದೆ ಆದ್ರೇ ಅದರಲ್ಲಿ ಹಣವಿರಲಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾರೆ.

ಈ ಸಂಬಂಧ ನಗರದ ಕೌಲ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.