ETV Bharat / jagte-raho

ಕಾಂಡೋಮ್​ ಬಳಸಿ ಎಂದಿದ್ದೇ ತಪ್ಪಾಯ್ತ? ಮುಂದೆ ಆಗಿದ್ದೇ ಬೇರೆ! - Bangalore crime news'

ಸುರಕ್ಷಿತ ಲೈಗಿಂಕ ಕ್ರಿಯೆಗೆ ಮಹಿಳೆ ಒತ್ತಾಯಿಸಿದಕ್ಕೆ ಒಪ್ಪದೇ ಗಲಾಟೆ ಮಾಡಿ ನಂತರ ಆಕೆಯ ಕತ್ತು ಕೊಯ್ದು ಕೊಲೆ ಮಾಡಿದ ಆರೋಪಿಯನ್ನು ಸುಬ್ರಹ್ಮಣ್ಯನಗರ ಪೊಲೀಸರು ಬಂಧಿಸಿದ್ದಾರೆ.

accused arrest
ಬಂಧಿತ ಆರೋಪಿ
author img

By

Published : Jan 23, 2020, 3:36 PM IST

Updated : Jan 23, 2020, 3:47 PM IST

ಬೆಂಗಳೂರು: ಸುರಕ್ಷಿತ ಲೈಗಿಂಕ ಕ್ರಿಯೆಗೆ ಮಹಿಳೆ ಒತ್ತಾಯಿಸಿದಕ್ಕೆ ಒಪ್ಪದೇ ಗಲಾಟೆ ಮಾಡಿ ನಂತರ ಆಕೆಯ ಕತ್ತು ಕೊಯ್ದು ಕೊಲೆ ಮಾಡಿದ ಆರೋಪಿಯನ್ನು ಸುಬ್ರಹ್ಮಣ್ಯನಗರ ಪೊಲೀಸರು ಬಂಧಿಸಿದ್ದಾರೆ.

ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ಸಂತೆಬಾಚನಹಳ್ಳಿಯ ಮುಕುಂದ್​​ (48) ಬಂಧಿತ. ಮಂಜುಳಾ (42) ಕೊಲೆಯಾದ ಮಹಿಳೆ. ಜ.11ರಂದು ಸುಬ್ರಮಣ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಮಂಜುಳಾ ಕೊಲೆಯಾಗಿತ್ತು. ಒಂಟಿಯಾಗಿ ವಾಸವಿದ್ದ ಆಕೆಯನ್ನು ದುಷ್ಕರ್ಮಿಗಳು ಕೊಲೆ ಮಾಡಿರಬಹುದೆಂಬ ಶಂಕೆಯ ಮೇರೆಗೆ ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು.

ಬಳಿಕ ತನಿಖೆಯಲ್ಲಿ ಅಸಲಿಯತ್ತು ಬೆಳಕಿಗೆ ಬಂದಿದೆ. ಮಂಜುಳಾ, ಗಂಡನೊಂದಿಗೆ ಗಲಾಟೆ ಮಾಡಿಕೊಂಡು ಮಗನ ಜೊತೆ ವಾಸವಿದ್ದಳು. ಆದರೆ, ಒಂಟಿ ಜೀವನ ಬೇಸತ್ತು ಮತ್ತು ಹೊಟ್ಟೆಪಾಡಿಗಾಗಿ ಪರ ಪುರುಷರ ಸಹವಾಸ ಹೊಂದುತ್ತಿದ್ದಳು. ಅದಕ್ಕಾಗಿ ಮೆಜೆಸ್ಟಿಕ್​ನಲ್ಲಿ ಗಿರಾಕಿಗಳಿಗೆ ಕಾಯುತ್ತಿದ್ದಳು.

ಆರೋಪಿಯನ್ನು ಬಂಧಿಸಿರುವ ಪೊಲೀಸರು

ಹೀಗಾಗಿ ಜ.11ರಂದು ಆರೋಪಿ ಮುಕುಂದ್​ನನ್ನು ಪರಿಚಯಿಸಿಕೊಂಡು ಮನೆಗೆ ಕರೆದುಕೊಂಡು ಬಂದಿದ್ದಾಳೆ. ಈ ವೇಳೆ ಮುಕುಂದ್​ ಕಾಂಡೋಮ್ ಬಳಸದೇ ಲೈಗಿಂಕ ಸಂಪರ್ಕಕ್ಕೆ ಮುಂದಾಗಿದ್ದಾನೆ, ಆಗ ಮಂಜುಳಾ ಕಾಂಡೋಮ್​ ಬಳಸಿ ಎಂದು ಹೇಳಿದ್ದಳಂತೆ. ಆದರೆ ಇದರಿಂದ ಕುಪಿತನಾದ ಮುಕುಂದ್​​ ನಿನಗೆ ನಾನು 1,500 ರೂಪಾಯಿ ಕೊಟ್ಟು ಬಂದಿದ್ದೇನೆ. ಹೇಳಿದ ಹಾಗೆ ಕೇಳಬೇಕು ಎಂದು ಬಲವಂತ ಲೈಂಗಿಕ ಕ್ರಿಯೆಗೆ ಪ್ರಯತ್ನಿಸಿದ. ಆಗ ಆಕೆ ಜೋರಾಗಿ ಕಿರುಚಿದ್ದಾಳೆ.

ಇದಕ್ಕೆ ಹೆದರಿದ ಮುಕುಂದ್​ ಮನೆಯಲ್ಲಿದ್ದ ಚಾಕುವಿನಿಂದ ಆಕೆ ಕತ್ತು ಕೊಯ್ದಿದ್ದಾನೆ. ಬಳಿಕ ಕತ್ತಿನಲ್ಲಿದ್ದ ಸರ, ಆಕೆ ಬಳಿಯಿದ್ದ ನಗದು, ಮೊಬೈಲ್ ತೆಗೆದುಕೊಂಡು ಪರಾರಿಯಾಗಿದ್ದಾನೆ. ಘಟನಾ ಸ್ಥಳದ ಸಿಸಿ.ಟಿ.ವಿ ಪರಿಶೀಲಿಸಿದಾಗ ಪರಾರಿಯಾಗುತ್ತಿರುವ ದೃಶ್ಯ ಸೆರೆಯಾಗಿದೆ. ತಲೆ ಮರೆಸಿಕೊಂಡಿದ್ದ ಆರೋಪಿಯನ್ನ ಬಂಧಿಸಿ ವಿಚಾರಣೆ ನಡೆದಿದಾಗ ತಪ್ಪೊಪ್ಪಿಕೊಂಡಿದ್ದಾನೆ‌. ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಜಿ-4 ಗ್ರೂಪ್​​ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿದ್ದ ಎಂಬುದು ತನಿಖೆಯಲ್ಲಿ ತಿಳಿದು ಬಂದಿದೆ.

Intro:ಸುರಕ್ಷಿತ ಲೈಗಿಂಕ ಕ್ರಿಯೆಗೆ ಒಪ್ಪದಿದಕ್ಕೆ ಕೊಲೆ ಮಾಡಿದ ಭೂಪ

ಸುರಕ್ಷಿತ ಲೈಗಿಂಕ ಕ್ರಿಯೆ ಮಾಡುವಂತೆ ಮಹಿಳೆ ಒತ್ತಾಯಿಸಿದಾಗ ಇದಕ್ಕೆ ಒಪ್ಪದೇ ಗಲಾಟೆ ಮಾಡಿ ನಂತ್ರ ಮಹಿಳೆಯ ಕತ್ತು ಕೊಯ್ದು ಕೊಲೆ ಮಾಡಿದ್ದ ಆರೋಪಿಯನ್ನು ಸುಬ್ರಹ್ಮಣ್ಯನಗರ ಪೊಲೀಸರು ಬಂಧಿಸಿದ್ದಾರೆ.ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕು ಸಂತೆಬಾಚನಹಳ್ಳಿಯ ಮುಕುಂದ(೪೮) ವರ್ಷ ಬಂಧಿತ ಅರೋಪಿ.

ಇದೇ ತಿಂಗಳ 11ನೇ ತಾರಿಕಿನಂದು ಸುಬ್ರಮಣ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಮಂಜುಳ 42ವರ್ಷ ಆಕೆಯನ್ನೊ ಯಾರೋ ದುಷ್ಕರ್ಮಿಗಳು ಕೊಲೆ ಮಾಡಿದ್ದರು. ಹೀಗಾಗಿ‌ ಮೊದಲು ಪೊಲಿಸರು ಕೊಲೆಯಾದ ಮಹಿಳೆ ಒಂಟಿಯಾಗಿ ವಾಸ ಮಾಡುವ ಕಾರಣ ಕೊಲೆ ಮಾಡಿದ್ದಾರೆಂಬ ಗುಮಾನಿ ಮೇರೆಗೆ ಆರೋಪಿ‌ ಪತ್ತೆಗೆ ಮುಂದಾಗಿದ್ರು.

ಆದ್ರೆ ಪೊಲಿಸರು ತನಿಖೆಗೆ ಇಳಿದಾಗ ಪೊಲೀಸರಿಗೆ ಮಹಿಳೆಯ ಅಸಲಿಯತ್ತು ಬೆಳಕಿಗೆ ಬಂದಿತ್ತು. ಮಂಜುಳ ಸುಬ್ರಮಣ್ಯ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದು ತನ್ನ ಗಂಡನ ಜೊತೆ ಗಲಾಟೆ ಮಾಡಿ ಗಂಡನ ಬಿಟ್ಟು ಮಗನ ಜೊತೆ ವಾಸಮಾಡ್ತಿದ್ಲು. ಆದರೆ ಒಂಟಿ ಜಿವನ ಬೇಸತ್ತು ಪರ ಪುರುಷರ ಸಹಾವಾಸ ಮಾಡ್ತಿದ್ಲು. ಇದಕ್ಕೆ ಅಂತಾನೆ ಮೆಜೆಸ್ಟಿಕ್ ಬಳಿ ಹೋಗಿ ಅಲ್ಲಿ ಬರುವ ಗಿರಾಕಿಗಳನ್ನ ಪರಿಚಯಿಸಿಕೊಂಡು ತನ್ನ ಆಸೆ ತೀರಿಸಿಕೊಳ್ತಿದ್ಲು.

ಹೀಗೆ ಇದೇ ಜನವರಿ 11ರಂದು ಆರೋಪಿ ಮುಕುಂದ ಪರಿಚವಾಗಿದ್ದಾನೆ. ನಂತ್ರ ಆತನನ್ನ ಮಂಜುಳ ಮನೆಗೆ ಕರೆದುಕೊಂಡು ಬಂದು ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಾಳೆ. ಆದರೆ ಈ ವೇಳೆ ಮುಕುಂದ ಸುರಕ್ಷತೆ ದೃಷ್ಟಿಯಿಂದ ಕಾಡೊಂಮ್ ಬಳಕೆ ಮಾಡದೆ ಮಂಜುಳಾ ಜತೆ ಲೈಗಿಂಕ ಸಂಪರ್ಕಕ್ಕೆ ಮುಂದಾಗಿದ್ದಾನೆ. ಇದಕ್ಕೆ ಒಪ್ಪದೇ ಮಂಜುಳಾ ಗಲಾಟೆ ಮಾಡಿದ್ದಾಳೆ. ಈ ವೇಳೆ ಮುಕುಂದಾ ನಿನಗೆ ನಾನು 1500 ಹಣ ಕೊಟ್ಟು ಬಂದಿದ್ದೆನೆ .ನೀನು ನಾನು ಹೇಳಿದಾ ಹಾಗೆ ಕೇಳಬೆಕೆಂದು ಬಲವಂತ ಮಾಡಿ ಲೈಗಿಂಕ ಕ್ರಿಯೆ ಮಾಡಿದಾಗ ಆಕೆ ನಿರಾಕರಿಸಿ ಗಲಾಟೆ ಮಾಡಿ ಕಿರುಚಿದ್ದಾಳೆ. ಇದರಿಂದ ಹೆದರಿದ ಮುಕುಂದ ಅಲ್ಲೆ ಮನೆಯಲ್ಲಿದ್ದ ಚಾಕುವಿನಿಂದ ಆಕೆಗೆ ಇರಿದು ಕೊಲೆ ಮಾಡಿ ಅಲ್ಲಿ ಯಾರಿಗು ಅನುಮಾನ ಬಾರದೇ ಇರುವ ರೀತಿ ಆಕೆಯ ಕತ್ತಿನಲ್ಲಿದ್ದ ಸರ ಹಾಗೂ ಪರ್ಸ್ ಮೊಬೈಲ್ ತೆಗೆದುಕೊಂಡು ಆರೋಪಿ ಆಟೋದಲ್ಲಿ ಎಸ್ಕೇಪ್ ಆಗಿದ್ದಾನೆ.

ಇನ್ನು ಈತ ಯಾರು ಅನ್ನೊದ್ರ ಬಗ್ಗೆ ಸ್ಥಳದ ಸಿಸಿಟಿವಿಯ ದೃಶ್ಯ ನೋಡಿದಾಗ ಆತ ಮನೆಯಲ್ಲಿ ಕೃತ್ಯ ನಡೆಸಿ ಎಸ್ಕೇಪ್ ಆಗಿತುವ ದೃಶ್ಯ ಸೆರೆಯಾಗಿತ್ತು. ಹಿಗಾಗಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನ ಬಂಧಿಸಿ ವಿಚಾರಣೆ ನಡೆದಿದಾಗ ತಪ್ಪೊಪ್ಪಿಕೊಂಡಿದ್ದಾನೆ‌. ಇನ್ನು ಈತ ಮೂಲತ: ಮಂಡ್ಯದವಾನಾಗಿದ್ದು ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಜಿ4 ಗ್ರೂಪ್ ನಲ್ಲಿ ಸೆಕ್ಯುರಿಟಿ ಕೆಲಸ ಮಾಡ್ತಿದ್ದ ಅನ್ನೋ ವಿಚಾರ ತನಿಖೆಯಲ್ಲಿ ತಿಳಿದು ಬಂದಿದೆ.

ಪೊಲೀಸರಿಗೆ ತಲೆನೊವಾಗಿದ್ದ ಪ್ರಕರಣವನ್ನ ಸುಬ್ರಮಣ್ಯನಗರ ಪಿಎಸ್ ಐ ಲತಾ ತಂಡ ಮಂಜುಳಾ ಹಿನ್ನೆಲೆ ಕಲೆ ಹಾಕಿ ಆರೋಪಿಯನ್ನ ಅಂದರ್ ಮಾಡುವಲ್ಲಿ ಯಶಸ್ವಿಯಾಗಿದ್ದು ಸದ್ಯ
ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಂಡಕ್ಕೆ ಭೇಷ್ ಅಂದಿದ್ದಾರೆ
Body:KN_BNG_NORTH_06_MURDER_7204498Conclusion:KN_BNG_NORTH_06_MURDER_7204498
Last Updated : Jan 23, 2020, 3:47 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.