ETV Bharat / jagte-raho

ವಿವಿಧ ಕಳ್ಳತನ ಪ್ರಕರಣ: ಶಿರಸಿಯಲ್ಲಿ 6 ಮಂದಿ ಆರೋಪಿಗಳ ಬಂಧನ - ಬನವಾಸಿ ಮಧುಕೇಶ್ವರ ದೇವಸ್ಥಾನ

ವಿವಿಧ ದೇವಸ್ಥಾನ ಕಳ್ಳತನ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಶಿರಸಿ ಪೊಲೀಸರು 6 ಮಂದಿ ಆರೋಪಿಗಳನ್ನು ಬಂಧಿಸಿದ್ದು, ಬಂಧಿತರಿಂದ ಲಕ್ಷಾಂತರ ಬೆಲೆಬಾಳುವ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿಗಳ ಬಂಧನ
author img

By

Published : Aug 2, 2019, 9:32 AM IST

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ವಿವಿಧ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ 6 ಜನ ಆರೋಪಿಗಳನ್ನು ಶಿರಸಿ ಪೊಲೀಸರು ಬಂಧಿಸಿದ್ದಾರೆ.

ಶಿರಸಿ ತಾಲೂಕಿನ ಕಲಗಾರಿನ ಮುನ್ನಾ ಸಾಬ (32), ಬದನಗೋಡಿನ ಸಂತೋಷ ಬೋವಿವಡ್ಡರ್ (22), ಗಡಳ್ಳಿ ಕ್ರಾಸಿನ ಮಹಮ್ಮದ್ (47), ಬನವಾಸಿಯ ಲಕ್ಷ್ಮೀಕಾಂತ ಒಡೆಯರ್ (30), ಹಾಡಲಗಿಯ ಮಂಜುನಾಥ ಕೊರವರ ಹಾಗೂ ಚಿಕ್ಕಬಳ್ಳಾಪುರದ ಇಮ್ರಾನ್ ಸಾಬ್ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳಿಂದ 25 ಕೆ.ಜಿ. ಪಂಚಲೋಹ ವಿಗ್ರಹ ಸೇರಿ 10 ಲಕ್ಷಕ್ಕೂ ಅಧಿಕ ಮೊತ್ತದ ಬಂಗಾರ, ಬೆಳ್ಳಿ ಆಭರಣಗಳು, ಕೃತ್ಯಕ್ಕೆ ಬಳಸಿದ ಮೂರು ಬೈಕ್ ಹಾಗೂ ಒಂದು ಕಾರನ್ನು ಜಪ್ತಿ ಮಾಡಲಾಗಿದೆ.

ಕಳೆದ ಅಕ್ಟೋಬರ್​​​ನಲ್ಲಿ ಶಿರಸಿ ಗ್ರಾಮೀಣ ಠಾಣೆ ವ್ಯಾಪ್ತಿಯ ಶಿಗೇಹಳ್ಳಿಯ ಒಂಟಿ ಮನೆಯ ಸಾವಿತ್ರಿ ಎಂಬ ಮಹಿಳೆಯ ಮೇಲಿನ ಹಲ್ಲೆ ಹಾಗೂ ಕಳ್ಳತನ, ಬನವಾಸಿ ಠಾಣಾ ವ್ಯಾಪ್ತಿಯ ಹಾಡಲಗಿಯಲ್ಲಿ ನಡೆದ ಕಳ್ಳತನ, ಅಜ್ಜರಣಿ ದೇವಸ್ಥಾನ ಕಳ್ಳತನದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಶಿರಸಿಯಲ್ಲಿ ಕಳ್ಳತನ ಆರೋಪಿಗಳ ಬಂಧನ

ಅಲ್ಲದೇ ಶಿರಸಿ ಹಾಗೂ ಬನವಾಸಿ ಸುತ್ತಮುತ್ತ ನಿಧಿಗಾಗಿ ದೇವಸ್ಥಾನದಲ್ಲಿ ಶೋಧ ನಡೆಸಿದ್ದರು. ಈ ಸಂಬಂಧ ಬನವಾಸಿಯ ಬ್ಯಾಗದ್ದೆಯ ಶಂಕರನಾರಾಯಣ ದೇವಸ್ಥಾನ, ಕಪ್ಪಗುಡ್ಡೆಯ ಈಶ್ವರ ದೇವಸ್ಥಾನ ಹಾಗೂ ಶಿರಸಿ ಗ್ರಾಮಾಂತರ ಪ್ರದೇಶದ ವಾಣಿ ವಿಘ್ನೇಶ್ವರ ದೇವಸ್ಥಾನ ಹಾಗೂ ಕೆ.ಎಚ್.ಬಿ.ಕಾಲೋನಿಯ ಸಿದ್ಧಿ ವಿನಾಯಕ ದೇವಸ್ಥಾನ ಕಳವು, ಬನವಾಸಿ ಮಧುಕೇಶ್ವರ ದೇವಸ್ಥಾನದ ಒಳಗಡೆಯಿಂದ ಭಾರೀ ಗಾತ್ರದ ಗಂಧದ ಮರವನ್ನು ಕಳವು ಮಾಡಿಕೊಂಡು ಹೋಗಿದ್ದರು.

Intro:ಶಿರಸಿ :
ಉತ್ತರ ಕನ್ನಡ ಜಿಲ್ಲೆಯ ವಿವಿಧ ಕಳವು ಪ್ರಕಣಗಳಲ್ಲಿ ಭಾಗಿಯಾಗಿದ್ದ ೬ ಆರೋಪಿಗಳನ್ನು ಶಿರಸಿ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ ೨೫ ಕೆ.ಜಿ. ಪಂಚಲೋಹ ವಿಗ್ರಹ ಸೇರಿ ೧೦ ಲಕ್ಷಕ್ಕೂ ಅಧಿಕ ಮೊತ್ತದ ಬಂಗಾರ, ಬೆಳ್ಳಿ ಆಭರಣಗಳು, ವಾಹನಗಳು ಹಾಗೂ ಕಳ್ಳತನಕ್ಕೆ ಬಳಸಿದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

Body:ಶಿರಸಿ ತಾಲೂಕಿನ ಕಲಗಾರಿನ ಮುನ್ನಾ ದಾವುದ್ ಸಾಬ (೩೨), ಬದನಗೋಡಿನ ಸಂತೋಷ ಬೋವಿವಡ್ಡರ್ (೨೨), ಗಡಳ್ಳಿ ಕ್ರಾಸಿನ ಮಹಮ್ಮದ್ ಶರೀಫ್ ಅಬ್ದುಲ್ ಖುದ್ದುಸ್ (೪೭), ಬನವಾಸಿಯ ಲಕ್ಷ್ಮೀಕಾಂತ ನಿರಂಜನ ಒಡೆಯರ್ (೩೦), ಹಾಡಲಗಿಯ ಮಂಜುನಾಥ ಕೊರವರ ಹಾಗೂ ಚಿಕ್ಕಬಳ್ಳಾಪುರದ ಗಾಂಧಿನಗರ ಚಿಂತಾಮಣಿಯ ಇಮ್ರಾನ್ ಪಾಶಾ ರಶೂಲ್ ಸಾಬ್ ಇವರನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿಗಳಿಂದ ೫ ಲಕ್ಷ ಬೆಲೆಬಾಳುವ ನಿಧಿ ಶೋಧನೆಗಾಗಿ ಬಳಸುವ ಮೆಟಲ್ ಡಿಕ್ಟೇಟರ್, ೨೫ ಕೆ.ಜಿ
ಪಂಚ ಲೋಹದ ವಿಗ್ರಹ, ೬.೫ ಲಕ್ಷ ರೂ. ಬೆಲೆ ಬಾಳುವ ಚಿನ್ನದ ಆಭರಣ ಹಾಗೂ ೯೦ ಸಾವಿರ ರೂ. ಮೌಲ್ಯದ ಬೆಳ್ಳಿ ಸಾಮಾನುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಕೃತ್ಯಕ್ಕೆ ಬಳಸಿದ ಮೂರು ಬೈಕ್ ಹಾಗೂ ಒಂದು ಕಾರನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಅಕ್ಟೋಬರ್ ನಲ್ಲಿ ಶಿರಸಿ ಗ್ರಾಮೀಣ ಠಾಣಾ ವ್ಯಾಪ್ತಿಯ ಶಿಗೇಹಳ್ಳಿಯ ಒಂಟಿ ಮನೆಯ ಸಾವಿತ್ರಿ ಎಂಬ ಮಹಿಳೆಯ ಮೇಲಿನ ಹಲ್ಲೆ ಹಾಗೂ ಕಳ್ಳತನ, ಬನವಾಸಿ ಠಾಣಾ ವ್ಯಾಪ್ತಿಯ ಹಾಡಲಗಿಯಲ್ಲಿ ನಡೆದ ಕಳ್ಳತನ, ಅಜ್ಜರಣಿ ದೇವಸ್ಥಾನ ಕಳ್ಳತನದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ ಶಿರಸಿ ಹಾಗೂ ಬನವಾಸಿ ಸುತ್ತಮುತ್ತ ನಿಧಿಗಾಗಿ ಅನೇಕ ದೇವಸ್ಥಾನದಲ್ಲಿ ಶೋಧನೆ ನಡೆಸಿದ್ದು, ಈ ಸಂಬಂಧ ಬನವಾಸಿಯ ಬ್ಯಾಗದ್ದೆಯ ಶ್ರೀ ಶಂಕರನಾರಾಯಣ ದೇವಸ್ಥಾನ, ಕಪ್ಪಗುಡ್ಡೆಯ ಈಶ್ವರ ದೇವಸ್ಥಾನ ಹಾಗೂ ಶಿರಸಿ ಗ್ರಾಮಾಂತರ ಪ್ರದೇಶದ ವಾಣಿ ವಿಘ್ನೇಶ್ವರ ದೇವಸ್ಥಾನ ಹಾಗೂ ಕೆ.ಎಚ್.ಬಿ.ಕಾಲೋನಿಯ ಸಿದ್ಧಿ ವಿನಾಯಕ ದೇವಸ್ಥಾನ ಕಳವು ಮಾಡಿದ್ದು, ಬನವಾಸಿ ಮಧುಕೇಶ್ವರ ದೇವಸ್ಥಾನದ ಒಳಗಡೆಯಿಂದ ಭಾರೀ ಗಾತ್ರದ ಗಂದದ ಮರವನ್ನು ಕಳವು ಮಾಡಿಕೊಂಡು ಹೋಗಿದ್ದರು.
..........
ಸಂದೇಶ ಭಟ್ ಶಿರಸಿ. Conclusion:null
ETV Bharat Logo

Copyright © 2025 Ushodaya Enterprises Pvt. Ltd., All Rights Reserved.