ETV Bharat / jagte-raho

ಕುಟುಂಬಸ್ಥರ ಎದುರೇ ವ್ಯಕ್ತಿಯ ಬರ್ಬರ ಹತ್ಯೆ: ಬೆಚ್ಚಿಬಿದ್ದ ಮಂಡ್ಯ ಜನತೆ - ಬುಂಡಾರಾಮ್ ಪತ್ನಿ ಮತ್ತು ಮಕ್ಕಳನ್ನು ಕಟ್ಟಿ ರೂಮ್ ಗೆ ಕೂಡಿ ಹಾಕಿದ್ದಾರೆ

ಮನೆಯಲ್ಲಿದ್ದವರನ್ನು ಕಟ್ಟಿಹಾಕಿ ವ್ಯಕ್ತಿಯ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ವಿದ್ಯಾನಗರದ 2ನೇ ಕ್ರಾಸ್​​ನಲ್ಲಿ ನಡೆದಿದ್ದು, ಘಟನೆಯಿಂದ ಸ್ಥಳೀಯ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ.

kn_mnd_01_murder_av_7202530
ಕುಟುಂಬಸ್ಥರ ಎದುರೇ ವ್ಯಕ್ತಿಯ ಬರ್ಬರ ಹತ್ಯೆ: ಬೆಚ್ಚಿ ಬಿದ್ದ ಮಂಡ್ಯ ಜನತೆ
author img

By

Published : Jan 21, 2020, 11:49 AM IST

ಮಂಡ್ಯ: ಮನೆಯಲ್ಲಿದ್ದವರನ್ನು ಕಟ್ಟಿಹಾಕಿ ವ್ಯಕ್ತಿಯ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ವಿದ್ಯಾನಗರದ 2ನೇ ಕ್ರಾಸ್​​ನಲ್ಲಿ ನಡೆದಿದ್ದು, ಘಟನೆಯಿಂದ ಸ್ಥಳೀಯ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ.

ವಿದ್ಯಾನಗರದ 2ನೇ ಕ್ರಾಸ್​ನಲ್ಲಿ ರಾಜಸ್ಥಾನ ಮೂಲದ ಬುಂಡಾರಾಮ್ ಎಂಬಾತನನ್ನು ಆತನ ಕುಟುಂಬಸ್ಥರ ಎದುರೇ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಇರಿದು ಕೊಲೆ ಮಾಡಿದ್ದಾರೆ. ಗುತ್ತಲ ರಸ್ತೆಯಲ್ಲಿ ಬುಂಡಾರಾಮ್​ ಹಾರ್ಡ್​ವೇರ್ ಅಂಗಡಿ ಹೊಂದಿದ್ದರು. ಮಧ್ಯರಾತ್ರಿ ಮನೆಗೆ ಆಗಮಿಸಿದ ನಾಲ್ಕು ಮಂದಿ ದುಷ್ಕರ್ಮಿಗಳು, ಮೊದಲು ಫೋನ್ ಕರೆ ಮಾಡಿ ಕೆಳಗೆ ಕರೆಸಿಕೊಂಡಿದ್ದಾರೆ. ನಂತರ ಆತನಿಗೆ ಗನ್ ತೋರಿಸಿ ಮನೆಯೊಳಗೆ ಕರೆದುಕೊಂಡು ಹೋಗಿ ಕತ್ತು ಸೀಳಿ ಕೊಲೆ ಮಾಡಿದ್ದಾರೆ. ಕೊಲೆಗೂ ಮೊದಲೇ ಬುಂಡಾರಾಮ್ ಪತ್ನಿ ಮತ್ತು ಮಕ್ಕಳನ್ನು ಕಟ್ಟಿ ರೂಮ್​ನಲ್ಲಿ ಕೂಡಿಹಾಕಿದ್ದಾರೆ ಎನ್ನಲಾಗಿದೆ.

ಕುಟುಂಬಸ್ಥರ ಎದುರೇ ವ್ಯಕ್ತಿಯ ಬರ್ಬರ ಹತ್ಯೆ: ಬೆಚ್ಚಿಬಿದ್ದ ಮಂಡ್ಯ ಜನತೆ

ಕೊಲೆ ನಂತರ ಪತ್ನಿಯ ಮೈಮೇಲೆ ಇದ್ದ ಆಭರಣಗಳನ್ನು ದುಷ್ಕರ್ಮಿಗಳು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಕನ್ನಡದಲ್ಲೇ ಮಾತನಾಡುತ್ತಿದ್ದ ದುಷ್ಕರ್ಮಿಗಳ ಬಗ್ಗೆ ಬುಂಡಾರಾಮ್​ ಪತ್ನಿ ಮಾಹಿತಿ ನೀಡಿದ್ದಾರೆ. ಪಶ್ಚಿಮ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Intro:ಮಂಡ್ಯ: ಮನೆಯಲ್ಲಿದ್ದವರನ್ನು ಕಟ್ಟಿ ಹಾಕಿ ವ್ಯಕ್ತಿಯನ್ನು ಕೊಲೆ ಮಾಡಿದ ಘಟನೆ ನಗರದಲ್ಲಿ ನಡೆದಿದ್ದು, ಘಟನೆಯಿಂದ ವಾಸಿಗಳು ಬೆಚ್ಚಿ ಬಿದ್ದಿದ್ದಾರೆ.
ವಿದ್ಯಾನಗರದ 2ನೇ ಕ್ರಾಸ್ ನಲ್ಲಿ ರಾಜಸ್ಥಾನ್ ಮೂಲದ ವ್ಯಕ್ತಿಯನ್ನು ಕುಟುಂಬದ ಎದುರೇ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಇರಿದು ಕೊಲೆ ಮಾಡಿದ್ದು, ರಾಜಸ್ಥಾನ ಮೂಲದ ಬುಂಡಾರಾಮ್ ಕೊಲೆಯಾದ ವ್ಯಕ್ತಿಯಾಗಿದ್ದಾನೆ.
ಗುತ್ತಲ ರಸ್ತೆಯಲ್ಲಿ ಹಾರ್ಡ್ ವೇರ್ ಅಂಗಡಿಯನ್ನು ಬುಂಡಾರಾಮ್ ಹೊಂದಿದ್ದರು. ಮಧ್ಯರಾತ್ರಿ ಮನೆಗೆ ಆಗಮಿಸಿದ ನಾಲ್ಕು ಮಂದಿ ದುಷ್ಕರ್ಮಿಗಳು ಮೊದಲು ಬುಂಡಾರಾಮ್ ಗೆ ಫೊನ್ ಕರೆ ಮಾಡಿ ಕೆಳಗೆ ಕರೆಸಿಕೊಂಡಿದ್ದಾರೆ. ನಂತರ ಆತನಿಗೆ ಗನ್ ತೋರಿಸಿ ಮನೆಯೊಳಗೆ ಕರೆದುಕೊಂಡು ಹೋಗಿ ಕತ್ತು ಸೀಳಿ ಕೊಲೆ ಮಾಡಿದ್ದು, ಕೊಲೆಗೂ ಮೊದಲೇ ಬುಂಡಾರಾಮ್ ಪತ್ನಿ ಮತ್ತು ಮಕ್ಕಳನ್ನು ಕಟ್ಟಿಹಾಕಿ ರೂಮ್ ಗೆ ಕೂಡಿ ಹಾಕಿದ್ದಾರೆ.
ಕೊಲೆ ನಂತರ ಪತ್ನಿಯ ಮೈಮೇಲೆ ಇದ್ದ ಆಭರಣಗಳನ್ನು ದುಷ್ಕರ್ಮಿಗಳು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಪಶ್ಚಿಮ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ. ಕನ್ನಡದಲ್ಲೇ ಮಾತನಾಡುತ್ತಿದ್ದ ಬಗ್ಗೆ ದುಷ್ಕರ್ಮಿಗಳ ಬಗ್ಗೆ ಪತ್ನಿ ಮಾಹಿತಿ ನೀಡಿದ್ದಾರೆ.
Body:ಯತೀಶ್ ಬಾಬು, ಈಟಿವಿ ಭಾರತ್, ಮಂಡ್ಯ.Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.