ETV Bharat / jagte-raho

ಕೌಟುಂಬಿಕ ಕಲಹ: ದೊಣ್ಣೆಯಿಂದ ಹೊಡೆದು ಅಣ್ಣನನ್ನು ಕೊಂದ ತಮ್ಮ - Seeke village of Balehonnur in Chikkamagalur district

ತಂದೆ ಮೇಲೆ ಹಲ್ಲೆ ಮಾಡುತ್ತಿದ್ದ ಅಣ್ಣನನ್ನು ತಮ್ಮನೇ ಕೊಲೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಬಳಿ ನಡೆದಿದೆ.

sdd
ಅಣ್ಣನನ್ನು ಕೊಂದ ತಮ್ಮ
author img

By

Published : Jan 8, 2021, 3:39 PM IST

Updated : Jan 8, 2021, 9:32 PM IST

ಚಿಕ್ಕಮಗಳೂರು: ಕೌಟುಂಬಿಕ ಕಲಹದ ಹಿನ್ನೆಲೆ ತಮ್ಮನೇ ಅಣ್ಣನ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಎನ್ಆರ್ ಪುರ ತಾಲೂಕಿನ ಬಾಳೆಹೊನ್ನೂರಿನ ಸೀಕೆ ಗ್ರಾಮದಲ್ಲಿ ನಡೆದಿದೆ.

ದರ್ಶನ್ (26) ಮೃತ ವ್ಯಕ್ತಿ. ದರ್ಶನ್ ಕುಡಿದ ಮತ್ತಿನಲ್ಲಿ ತಂದೆ ಅಣ್ಣೇಗೌಡನ ಮೇಲೆ ಹಲ್ಲೆ ನಡೆಸುತ್ತಿದ್ದ. ಈ ವೇಳೆ ತಮ್ಮ ಹರ್ಷನ್ ತಡೆಯಲು ಮುಂದಾಗಿದ್ದಾನೆ. ಇದರಿಂದ ಕೋಪಗೊಂಡ ದರ್ಶನ್, ಸಹೋದರ ಹರ್ಷನ್ ಮೇಲೆ ಕತ್ತಿ ಬೀಸಿದ್ದಾನೆ. ಅದರಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಹರ್ಷನ್ ದೊಣ್ಣೆ ಬೀಸಿದ್ದಾನೆ.

ಈ ವೇಳೆ ದರ್ಶನ್‌ಗೆ ಪೆಟ್ಟು ಬಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಅಣ್ಣೇಗೌಡ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಆರೋಪಿ ಹರ್ಷನ್​ನನ್ನು ಬಂಧಿಸಿದ್ದಾರೆ.

Last Updated : Jan 8, 2021, 9:32 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.