ETV Bharat / jagte-raho

ಬೆಂಕಿ ನಂದಿಸುವ ವೇಳೆ ಸಿಲಿಂಡರ್​ ಸ್ಫೋಟ: ಅಗ್ನಿಶಾಮಕ ಸಿಬ್ಬಂದಿ ಸೇರಿ 7 ಮಂದಿಗೆ ಗಾಯ - as cylinder explosion after a fire at a shop in Maharashtra's Thane city

ಆಟೋ ಮೊಬೈಲ್​ ಅಂಗಡಿಯಲ್ಲಿ ಅಗ್ನಿ ಅವಘಡ ಸಂಭವಿಸಿ, ಸಿಲಿಂಡರ್​ ಬ್ಲಾಸ್ಟ್​​ ಆಗಿ 7 ಮಂದಿ ಗಾಯಗೊಂಡಿದ್ದಾರೆ. ಅಂಗಡಿ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಎರಡು ಮನೆಗಳಿಗೆ ತೀವ್ರ ಹಾನಿಯಾಗಿದೆ.

as cylinder explosion after a fire at a shop in Maharashtra's Thane city
ಬೆಂಕಿ ನಂದಿಸುವ ವೇಳೆ ಸಿಲಿಂಡರ್​ ಸ್ಫೋಟ
author img

By

Published : Jan 10, 2021, 11:46 AM IST

ಥಾಣೆ (ಮಹಾರಾಷ್ಟ್ರ): ಬೆಂಕಿ ನಂದಿಸುವ ಕಾರ್ಯಾಚರಣೆ ವೇಳೆ ಗ್ಯಾಸ್​ ಸಿಲಿಂಡರ್​ ಸ್ಫೋಟಗೊಂಡು ಇಬ್ಬರು ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ ಏಳು ಮಂದಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಥಾಣೆಯ ಆಟೋ ಮೊಬೈಲ್​ ಅಂಗಡಿಯೊಂದರಲ್ಲಿ ನಡೆದಿದೆ.

ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ವಾಗ್ಲೆ ಎಸ್ಟೇಟ್ ಪ್ರದೇಶದಲ್ಲಿನ ಅಂಗಡಿಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಸಮೀಪವಿದ್ದ ಎರಡು ಮನೆಗಳಿಗೂ ಬೆಂಕಿ ಆವರಿಸಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಪ್ರಾದೇಶಿಕ ವಿಪತ್ತು ನಿರ್ವಹಣಾ ಘಟಕ (ಆರ್​ಡಿಎಂಸಿ)ದ ಸಿಬ್ಬಂದಿ ದೌಡಾಯಿಸಿದ್ದಾರೆ.

ಆದರೆ ಕಾರ್ಯಾಚರಣೆ ವೇಳೆ ಗ್ಯಾಸ್​ ಸಿಲಿಂಡರ್ ಬ್ಲಾಸ್ಟ್​ ಆಗಿದ್ದು, ಇಬ್ಬರು ಅಗ್ನಿಶಾಮಕ ಸಿಬ್ಬಂದಿ, ತುರ್ತು ಸ್ಪಂದನಾ ವಾಹನದ ಚಾಲಕ ಹಾಗೂ ನಾಲ್ವರು ಸ್ಥಳೀಯರು ಗಾಯಗೊಂಡಿದ್ದಾರೆ ಎಂದು ಆರ್​ಡಿಎಂಸಿ ಮುಖ್ಯಸ್ಥ ಸಂತೋಷ್​ ಕದಮ್​ ಹೇಳಿದ್ದಾರೆ.

ಇದನ್ನೂ ಓದಿ: ಮುರುಡೇಶ್ವರದಲ್ಲಿ ಮೀನುಗಾರರು-ಗೂಡಂಗಡಿಕಾರರ ಮಧ್ಯೆ ಬಿಗ್​ ಫೈಟ್​! ವಿಡಿಯೋ...

ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತಡರಾತ್ರಿ 2.30ರ ವೇಳೆಗೆ ಬೆಂಕಿ ನಂದಿಸಲಾಗಿದೆ. ಆಟೋ ಮೊಬೈಲ್​ ಅಂಗಡಿ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಮನೆಗಳಿಗೆ ತೀವ್ರ ಹಾನಿಯಾಗಿದೆ. ಅಗ್ನಿ ಅವಘಡಕ್ಕೆ ಕಾರಣ ತಿಳಿದು ಬಂದಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.