ETV Bharat / jagte-raho

ಬೆಟ್ಟಿಂಗ್​ ದಂಧೆ: ನಾಲ್ವರ ಬಂಧನ, 2 ಕೋಟಿ ರೂ. ವಶ - ಕ್ರಿಕೆಟ್​ ಬೆಟ್ಟಿಂಗ್

ವಿವಿಧ ಮೊಬೈಲ್​ ಸಂಖ್ಯೆ ಬಳಸಿ ಕ್ರಿಕೆಟ್​ ಬೆಟ್ಟಿಂಗ್​ನಲ್ಲಿ ತೊಡಗಿದ್ದ ನಾಲ್ವರು ಆರೋಪಿಗಳನ್ನು ಕಾನ್ಪುರ ಪೊಲೀಸರು ಬಂಧಿಸಿದ್ದಾರೆ.

Kanpur Police busted a betting racket and arrested 4 person
ಬೆಟ್ಟಿಂಗ್​ ದಂಧೆ
author img

By

Published : Dec 31, 2020, 10:50 AM IST

ಕಾನ್ಪುರ (ಉತ್ತರ ಪ್ರದೇಶ): ಬೆಟ್ಟಿಂಗ್ ಅಡ್ಡೆ ಮೇಲೆ ದಾಳಿ ನಡೆಸಿರುವ ಕಾನ್ಪುರ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, 2 ಕೋಟಿ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳನ್ನು ಅನಿಲ್​ ಗುಪ್ತಾ, ವಿನಯ್​ ಮಿಶ್ರಾ, ವಿನಯ್​ ಕುಮಾರ್ ಹಾಗೂ ವಿಕ್ಕಿ​ ಎಂದು ಗುರುತಿಸಲಾಗಿದೆ. ಇವರು ವಿವಿಧ ಮೊಬೈಲ್​ ಸಂಖ್ಯೆ ಬಳಸಿ ಕ್ರಿಕೆಟ್​ ಬೆಟ್ಟಿಂಗ್​ನಲ್ಲಿ ತೊಡಗಿದ್ದ ನಿಖರ ಮಾಹಿತಿ ಮೇರೆಗೆ ಕಾನ್ಪುರದ ಮೂರು ಠಾಣೆಯ ಪೊಲೀಸರು ಜಂಟಿ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಓದಿ: ಏಳು ವಾಹನಗಳ ನಡುವೆ ಸರಣಿ ರಸ್ತೆ ಅಪಘಾತ: ಮೂವರ ದುರ್ಮರಣ

ಆರೋಪಿಗಳಿಂದ ನಗದು ಜೊತೆ 1 ಕೆ.ಜಿ ಚರಾಸ್ (ಒಂದು ಬಗೆಯ ಡ್ರಗ್​​) ಅನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು, ದಂಧೆಯಲ್ಲಿ ಭಾಗಿಯಾಗಿರುವ ಇತರರನ್ನು ಹುಡುಕಲು ತನಿಖೆ ಆರಂಭಿಸಿದ್ದೇವೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.