ETV Bharat / jagte-raho

ಕೋರ್ಟ್​ ಆವರಣದಲ್ಲೇ ಪತ್ನಿಗೆ ತಲಾಖ್​ ನೀಡಿದ ಭೂಪ! - ತ್ರಿವಳಿ ತಲಾಖ್ ನಿಷೇಧ

ಉತ್ತರ ಪ್ರದೇಶದ ರಾಂಪುರ ನ್ಯಾಯಾಲಯದ ಆವರಣದಲ್ಲೇ ವ್ಯಕ್ತಿವೋರ್ವ ತನ್ನ ಪತ್ನಿಗೆ ತಲಾಖ್​ ನೀಡಿ ಪರಾರಿಯಾಗಿದ್ದಾನೆ.

husband gives triple talaq to wife in rampur court campus
ಕೋರ್ಟ್​ ಆವರಣದಲ್ಲೇ ಪತ್ನಿಗೆ ತಲಾಖ್​ ನೀಡಿದ ಭೂಪ
author img

By

Published : Jan 24, 2021, 7:31 AM IST

ರಾಂಪುರ (ಉತ್ತರ ಪ್ರದೇಶ): ತ್ರಿವಳಿ ತಲಾಖ್ ಕಾನೂನು ಬಾಹಿರವಾಗಿದ್ದರೂ ಕೂಡ ಉತ್ತರ ಪ್ರದೇಶದ ರಾಂಪುರ ನ್ಯಾಯಾಲಯದ ಆವರಣದಲ್ಲೇ ವ್ಯಕ್ತಿವೋರ್ವ ತನ್ನ ಪತ್ನಿಗೆ ತಲಾಖ್​ ನೀಡಿದ್ದಾನೆ.

ಅಜೀಂ ನಗರ ನಿವಾಸಿ ಶಯರೂಲ್​​ ಅವರ ವಿವಾಹ ತಾಂಡಾ ನಿವಾಸಿ ಅನೀಶ್ ಜೊತೆ ಆಗಿತ್ತು. ಮದುವೆಯಾದ ಕೆಲವು ದಿನಗಳ ನಂತರ ಪತಿ ಹಾಗೂ ಆತನ ಕುಟುಂಬಸ್ಥರು ವರದಕ್ಷಿಣೆ ನೀಡುವಂತೆ ಕಿರುಕುಳ ನೀಡಲಾರಂಭಿಸಿದ್ದಾರೆ. ನೊಂದ ಮಹಿಳೆ ಈ ಸಂಬಂಧ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ರಾಂಪುರ ಜಿಲ್ಲಾ ನ್ಯಾಯಾಲಯದಲ್ಲಿ ಈ ಸಂಬಂಧ ವಿಚಾರಣೆ ನಡೆಯುತ್ತಿದ್ದು, ಹೇಳಿಕೆಗಳನ್ನು ದಾಖಲಿಸಲು ಶಯರೂಲ್ ಕೋರ್ಟ್​ಗೆ ಬಂದ ವೇಳೆ ಅನೀಶ್ ತ್ರಿವಳಿ ತಲಾಖ್ ನೀಡಿ ಪರಾರಿಯಾಗಿದ್ದಾನೆ.

ಇದನ್ನೂ ಓದಿ: ಪೌಲ್​ ದಿನಕರನ್ ನಿವಾಸದ ಮೇಲೆ ಐಟಿ ದಾಳಿ: 4.7 ಕೆಜಿ ಚಿನ್ನದ ಬಾರ್​ಗಳು ವಶಕ್ಕೆ

2019ರ ಆಗಸ್ಟ್ 1 ರಂದು ತ್ರಿವಳಿ ತಲಾಖ್ ಅನ್ನು ನಿಷೇಧ ಮಾಡಲಾಗಿದ್ದು, ತನ್ನ ಹೆಂಡತಿಗೆ ಮೂರು ಬಾರಿ ತಲಾಖ್ ಎಂದು ಉಚ್ಚರಿಸುವ ಯಾವುದೇ ಮುಸ್ಲಿಂ ವ್ಯಕ್ತಿಗೆ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸುವ ಕಾನೂನು ಜಾರಿಯಲ್ಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.