ETV Bharat / jagte-raho

ಲೈಂಗಿಕ ಕಿರುಕುಳ ಆರೋಪ: 'ಗಲ್ಲಿ ಬಾಯ್'​​ ನಟನ ಬಂಧನ - ಇತ್ತೀಚಿನ ಬಾಲಿವುಡ್ ಸುದ್ದಿ

ತನ್ನ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಗಲ್ಲಿ ಬಾಯ್ ನಟ ವಿಜಯ್​ ರಾಜ್​ರನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ.

Vijay Raaz
ವಿಜಯ್​ ರಾಜ್
author img

By

Published : Nov 3, 2020, 4:45 PM IST

ಗೊಂಡಿಯಾ (ಮಹಾರಾಷ್ಟ್ರ): ತನ್ನ ಬಳಿ ಕೆಲಸ ಮಾಡುತ್ತಿದ್ದ ಮಹಿಳಾ ಸಿಬ್ಬಂದಿಗೆ ಕಿರುಕುಳ ನೀಡಿದ ಆರೋಪದಲ್ಲಿ ನಟ ಹಾಗೂ ನಿರ್ದೇಶಕ ವಿಜಯ್ ರಾಜ್ ಬಂಧಿತರಾಗಿದ್ದು, ಮಹಾರಾಷ್ಟ್ರ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಗಲ್ಲಿ ಬಾಯ್​​ ಎಂಬ ಬಾಲಿವುಡ್ ಚಿತ್ರದಲ್ಲಿ ನಟಿಸಿದ್ದ ವಿಜಯ್ ರಾಜ್ ವಿರುದ್ಧ ಮಹಿಳಾ ಸಿಬ್ಬಂದಿ ಗೊಂಡಿಯಾ ಜಿಲ್ಲೆಯ ರಾಮಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ಆರೋಪಿಯನ್ನು ಇಂದು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲು ಸಿದ್ಧತೆ ನಡೆಸಲಾಗಿದ್ದು, ಹೆಚ್ಚಿನ ಮಾಹಿತಿಯನ್ನು ಪೊಲೀಸರು ಬಹಿರಂಗಪಡಿಸುತ್ತಿಲ್ಲ. ಸದ್ಯಕ್ಕೆ ವಿಜಯ್ ರಾಜ್ ತಂಗಿದ್ದ ಹೋಟೆಲ್​ಗೆ ಮಾಧ್ಯಮಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.

ವಿಜಯ್ ರಾಜ್ ಇತ್ತೀಚೆಗೆ ವಿದ್ಯಾ ಬಾಲನ್ ಅವರ ಶೆರಾನಿ ಚಿತ್ರದಲ್ಲಿ ಪಾಲ್ಗೊಂಡಿದ್ದರು. ಈ ಚಿತ್ರದ ಚಿತ್ರೀಕರಣಕ್ಕಾಗಿ ಮಧ್ಯಪ್ರದೇಶದ ಬಾಲಘಾಟ್​ಗೆ ಭೇಟಿ ನೀಡಿದ್ದರು. ಸಿನಿಮಾದ ಎಲ್ಲಾ ಸಿಬ್ಬಂದಿ ಗೊಂಡಿಯಾದ ಗೇಟ್​ವೇ ಹೋಟೆಲ್​​ನಲ್ಲಿ ಉಳಿದುಕೊಂಡು ಚಿತ್ರೀಕರಣಕ್ಕೆ ತೆರಳುತ್ತಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.