ಮುಂಬೈ: ರಷ್ಯಾ, ಥೈಲ್ಯಾಂಡ್, ಉಜ್ಬೇಕಿಸ್ತಾನ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಬಾಕ್ಸಿಂಗ್ ಸ್ಪರ್ಧೆಗಳಲ್ಲಿ ಚಿನ್ನದ ಪದಕ ಗೆದ್ದ ಇಬ್ಬರನ್ನು ಕಳ್ಳತನದ ಆರೋಪದಡಿ ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರದ ನಾಸಿಕ್ ಮೂಲದ ವಿಶಾಲ್ ಕುಮಾರ್ ಮತ್ತು ಚಿರಾಗ್ ಚೌಧರಿ ಬಂಧಿತ ಆರೋಪಿಗಳು. ಬಾಕ್ಸಿಂಗ್‌ನಲ್ಲಿ ಚಿನ್ನದ ಪದಕ ಗೆದ್ದ ನಂತರ ಇವರಿಬ್ಬರಿಗೆ ಕ್ರೀಡಾ ಕೋಟಾದಡಿ ಭಾರತೀಯ ಸೇನೆಯಲ್ಲಿ ಕೆಲಸ ಸಿಕ್ಕಿತ್ತು. ಆದರೆ ಶಿಬಿರದಲ್ಲಿ ತರಬೇತಿ ಪಡೆಯುವ ವೇಳೆಯಲ್ಲೇ ಎಡವಟ್ಟು ಮಾಡಿಕೊಂಡು ಪೊಲೀಸರ ಅತಿಥಿಯಾಗಿದ್ದಾರೆ.
ಶಿಬಿರದಲ್ಲಿ ಪರಿಚಯನಾದ ಸ್ನೇಹಿತನೊಬ್ಬನ ಮನೆಗೆ ನುಗ್ಗಿ 8 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು 37 ಸಾವಿರ ನಗದನ್ನು ಎಗರಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ವಿಶಾಲ್ ಕುಮಾರ್ ಮತ್ತು ಚಿರಾಗ್ ಚೌಧರಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.