ವಿಜಯಪುರ: ಬಾವಿಯಲ್ಲಿ ಗೃಹಿಣಿಯ ಶವ ಪತ್ತೆಯಾದ ಘಟನೆ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಜೇವೂರ ಗ್ರಾಮದ ಜಮೀನೊಂದರಲ್ಲಿ ನಡೆದಿದೆ.
ಪ್ರೀತಿ ವಾಗ್ಮೋರೆ (24) ಮೃತ ಗೃಹಿಣಿ. ಪತಿ ರಾಜೇಂದ್ರ ಕೊಲೆ ಮಾಡಿ ಬಾವಿಯಲ್ಲಿ ಶವ ಬಿಸಾಡಿದ್ದಾನೆಂದು ಮೃತ ಪ್ರೀತಿಯ ಪೋಷಕರು ಆರೋಪಿಸಿದ್ದಾರೆ.
ಕಳೆದ 11 ತಿಂಗಳ ಹಿಂದಷ್ಟೇ ಇವರ ವಿವಾಹವಾಗಿತ್ತು. ಪತಿ ಹಾಗೂ ಪತ್ನಿ ನಡುವೆ ಜಗಳವಾಗುತ್ತಿತ್ತು ಎಂದು ಹೇಳಲಾಗಿದೆ. ಇಂಡಿ ತಾಲೂಕಿನ ಹಂಜಗಿ ಗ್ರಾಮದ ಪ್ರೀತಿಯನ್ನು ಇಂಡಿ ತಾಲೂಕಿನ ಜೇವೂರ ಗ್ರಾಮದ ರಾಜೇಂದ್ರನಿಗೆ ವಿವಾಹ ಮಾಡಿಕೊಡಲಾಗಿತ್ತು. ಘಟನೆ ಬಳಿಕ ಪತಿ ರಾಜೇಂದ್ರ ಪರಾರಿಯಾಗಿದ್ದಾನೆ. ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.