ದೊಡ್ಡಬಳ್ಳಾಪುರ: ತಾಲೂಕಿನ ಲಿಂಗನಹಳ್ಳಿಯ ಚರಂಡಿಯಲ್ಲಿ ಸಾವನ್ನಪಿರುವ ನವಜಾತ ಹೆಣ್ಣು ಶಿಶು ಪತ್ತೆಯಾಗಿದೆ.
ತಾಯಿಯೊಬ್ಬಳು ಆಗ ತಾನೇ ಜನಿಸಿದ ನವಜಾತ ಹೆಣ್ಣು ಶಿಶುವನ್ನು ಚರಂಡಿಯಲ್ಲಿ ಬಿಸಾಕಿ ಹೋಗಿದ್ದು, ಲಿಂಗನಹಳ್ಳಿ ಗ್ರಾಮದ ಚರಂಡಿಯಲ್ಲಿ ಶವವಾಗಿ ಪತ್ತೆಯಾಗಿದೆ. ರತ್ನಮ್ಮ ಎಂಬುವವರು ಕಸ ಹಾಕಲೆಂದು ಹೋದಾಗ ಚರಂಡಿಯಲ್ಲಿನ ಶಿಶುವಿನ ಶವ ಅವರ ಕಣ್ಣಿಗೆ ಬಿದ್ದಿದೆ.
ಶಿಶು ಶವದ ಬಗ್ಗೆ ಗ್ರಾಮಸ್ಥರು ತಕ್ಷಣವೇ ಮಕ್ಕಳ ಸಹಾಯ ವಾಣಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಮತ್ತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಪರಿಶೀಲನೆ ನಡೆಸಿದರು.