ಬಳ್ಳಾರಿ: ಅನೈತಿಕ ಸಂಬಂಧದ ಶಂಕೆಯಿಂದ ಪತಿಯೊಬ್ಬ ತನ್ನ ಪತ್ನಿಯನ್ನೇ ಮಚ್ಚಿನಿಂದ ಕೊಚ್ಚಿ ಕೊಂದಿರುವ ಘಟನೆ ಕಂಪ್ಲಿ ತಾಲೂಕಿನ ಕೋಟೆಯ ದ್ಯಾವಮ್ಮ ಗುಡಿ ಪ್ರದೇಶ ಬಳಿ ನಡೆದಿದೆ.
ಹೇಮಾವತಿ (30) ಮೃತಪಟ್ಟ ದುರ್ದೈವಿ, ಪತಿ ದುರುಗಪ್ಪ(38) ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ದಂಪತಿಗೆ ಇಬ್ಬರು ಪುತ್ರರು, ಒಬ್ಬ ಪುತ್ರಿ ಇದ್ದಾರೆ.
ಹೆಂಡತಿಯನ್ನು ಕೊಲೆ ಮಾಡಿದ ನಂತರ ಅನೈತಿಕ ಸಂಬಂಧದ ಶಂಕೆಯಿಂದ ಕಾಯಿಗಡ್ಡೆ ರಾಜ ಎಂಬುವರ ಮನೆಗೆ ತೆರಳಿ, ಮಚ್ಚಿನಿಂದ ಹೊಡೆದಿದ್ದಾನೆ. ಗಾಯಗೊಂಡ ರಾಜ ಗಂಗಾವತಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನಾ ಸ್ಥಳಕ್ಕೆ ಹಂಪಿ ಡಿವೈಎಸ್ಪಿ ಎಸ್ಎಸ್.ಕಾಶಿ, ಸಿಪಿಐ ಸುರೇಶ್ ಹೆಚ್.ತಳವಾರ್, ಪಿಎಸ್ಐ ಮೌನೇಶ್ ಯು.ರಾಥೋಡ್ ಭೇಟಿ ನೀಡಿ ಪರಿಶೀಲಿಸಿದರು.
ಘಟನೆ ವಿವರ:
ಶುಕ್ರವಾರ ರಾತ್ರಿ 11.30 ಸುಮಾರಿಗೆ ಆರೋಪಿ ಪತಿ, ತನ್ನ ಪತ್ನಿಯ ತಲೆ ಮತ್ತು ಕತ್ತಿಗೆ ಮನಬಂದಂತೆ ಮಚ್ಚಿನಿಂದ ಕೊಚ್ಚಿದ್ದು, ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾಳೆ.