ETV Bharat / jagte-raho

50 ಸಾವಿರ ರೂ ಹಣಕ್ಕೆ 20 ಬಾರಿ ಇರಿದು ಬರ್ಬರವಾಗಿ ಕೊಲೆಗೈದರು! ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ - Bangalore shootout case

ಸುಪಾರಿ ಪಡೆದು 20 ಬಾರಿ ಇರಿದು‌ ಅತ್ಯಂತ ಬರ್ಬರವಾಗಿ ಕೊಲೆಗೈದ ಆರೋಪಿ ಕಾಲಿಗೆ ಗುಂಡು ಹೊಡೆದು ಮಹಾಲಕ್ಷ್ಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

Bangalore shootout case
Bangalore shootout case
author img

By

Published : Dec 24, 2019, 1:36 PM IST

ಬೆಂಗಳೂರು: ಸುಪಾರಿ ಪಡೆದು 20 ಬಾರಿ ಇರಿದು‌ ಕೊಲೆಗೈದ ಆರೋಪಿಗೆ ಗುಂಡು ಹೊಡೆದು ಮಹಾಲಕ್ಷ್ಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

ಡಿಸೆಂಬರ್‌ 11ರಂದು ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲಗ್ಗೆರೆ ಸೇತುವೆ ಬಳಿ ವೃತ್ತಿಯಲ್ಲಿ ಕ್ಯಾಬ್ ಹಾಗೂ ಆಟೋ ಓಡಿಸುತ್ತಿದ್ದ ರಘು ಎಂಬವರ ಕೊಲೆ ನಡೆದಿತ್ತು.

ಈ ಕೊಲೆ ಪ್ರಕರಣ ಭೇದಿಸಲು ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ಅವರು ಮಹಾಲಕ್ಷ್ಮಿ ಲೇಔಟ್​ ಹಾಗೂ ನಂದಿನಿ ಲೇಔಟ್​ ಪೋಲಿಸರ ವಿಶೇಷ ತಂಡಗಳನ್ನು ರಚಿಸಿದ್ದರು. ಇಂದು ಬೆಳಗ್ಗೆ ಆರೋಪಿ ಬಾಬು ಶಿವಕುಮಾರ್ ಜಾಲಹಳ್ಳಿಯ ಹೆಚ್​ಎಂಟಿ ನಿರ್ಜನ ಪ್ರದೇಶದಲ್ಲಿರುವ ಮಾಹಿತಿ ಮೇರೆಗೆ ಆರೋಪಿಯನ್ನು ಬಂಧಿಸಲು ಮಹಾಲಕ್ಷ್ಮಿ ಲೇಔಟ್​​​ ಠಾಣೆಯ ಪಿಎಸ್ಐ ವೆಂಕಟರಾಮು ನೇತೃತ್ವದಲ್ಲಿ ತಂಡ ತೆರಳಿದೆ.

ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಈ ವೇಳೆ ಶರಣಾಗುವಂತೆ ಪೊಲೀಸರು ಆರೋಪಿಗೆ ಸೂಚಿಸಿದ್ದಾರೆ. ಆತ ಪೊಲೀಸರ ಮಾತಿಗೆ ಕಿವಿಗೊಡದೆ ಪೊಲೀಸರ ಮೇಲೆಯೇ ಹಲ್ಲೆ ಮಾಡಲು ಮುಂದಾಗಿದ್ದಾನೆ. ಬಳಿಕ ಪಿಎಸ್ಐ ವೆಂಕಟರಾಮು ಅವರು ಗಾಳಿಯಲ್ಲಿ ಗುಂಡು ಹಾರಿಸಿದರು. ಆದರೂ ಲೆಕ್ಕಿಸದೆ ಮತ್ತೆ ಪೊಲೀಸರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಆಗ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಘು ಕೊಲೆಯ ಅಸಲಿಯತ್ತು:

ಕೊಲೆಯಾದ ರಘು ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದರು. ವೃತ್ತಿಯಲ್ಲಿ ಕ್ಯಾಬ್ ಹಾಗೂ ಆಟೋ ಚಾಲಕನಾಗಿದ್ದ. ಆದ್ರೆ, ಇತ್ತೀಚೆಗೆ ಕೊಲೆಯಾದ ರಘು ಅವರ ಮಾವ ಪ್ರಭಾಕರ್ ನಡುವೆ ಹಣಕಾಸಿನ ವಿಚಾರದಲ್ಲಿ ಜಗಳ ನಡೆದು ಗಲಾಟೆ ನಡೆದಿತ್ತು. ಹೀಗಾಗಿ ಇದೇ ಕೋಪಕ್ಕೆ ಪ್ರಭಾಕರ್ ತನ್ನ ಕುಟುಂಬಸ್ಥರಲ್ಲಿ ಒಬ್ಬರಾದ ನರಸಿಂಹಮೂರ್ತಿ ಅವರ ಜೊತೆ ಸೇರಿ ರಘು ಅವರನ್ನ ಕೊಲೆ ಮಾಡೋದಕ್ಕೆ ₹ 50 ಸಾವಿರ ಹಣ‌ವನ್ನು ಬಾಬು ಶಿವಕುಮಾರ್​​​​ಗೆ ಸುಪಾರಿ ನೀಡಿದ್ದ.

ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್

ಹೀಗಾಗಿ ಇದೇ ತಿಂಗಳ 11 ರಂದು ರಘು ಕ್ಯಾಬ್​​​​ನಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ದಾಳಿ ನಡೆಸಿದ ಆರೋಪಿಗಳು ರಘುಗೆ ಇಪ್ಪತ್ತು ಬಾರಿ ಇರಿದು ಕೊಲೆ ಮಾಡಿದ್ದರು. ಈ ಘಟನಾವಳಿ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Intro:ಇಪ್ಪತ್ತು ಬಾರಿ ಇರಿದು ಕೊಂದ
ಕೊಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಬೈಟ್ ಶಶಿಕುಮಾರ್ ಉತ್ತರ ವಿಭಾಗ ಡಿಸಿಪಿ
ಕೊಲೆಗೆ ಸುಪಾರಿ ಪಡೆದು ಇಪ್ಪಾತ್ತು ಬಾರಿ ಇರಿದು‌ಕೊಲೆ ಮಾಡಿದ ಆರೋಪಿ ಮೇಲೆ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಫೈರಿಂಗ್ ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ಇದೇ ತಿಂಗಳ 11 ರಂದು ನಂದಿಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲಗ್ಗೇರೆ ಸೇತುವೆ ಬಳಿ ವೃತ್ತಿಯಲ್ಲಿ ಕ್ಯಾಬ್ ಹಾಗೂ ಆಟೋ ಓಡಿಸ್ತಿದ್ದ ರಘು ಎಂಬ ವ್ಯಕ್ತಿಯ ಕೊಲೆಯಾಗಿತ್ತು.. ಹೀಗಾಗಿ ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ಮಹಾಲಕ್ಷ್ಮಿ ಲೇಔಟ್ ಹಾಗೂ ನಂದೀನಿಲೇಔಟ್ ಪೊಲೀಸರ ತಂಡ ರಚನೆ ಮಾಡಿದ್ದರು. ಇಂದು ಬೆಳಗ್ಗೆ ಆರೋಪಿ ಬಾಬು ಶಿವಕುಮಾರ್ ಜಾಲ ಹಳ್ಳಿ ಬಳಿಯ ಹೆಚ್ ಎಂಟಿ ನಿರ್ಜನ ಪ್ರದೇಶದಲ್ಲಿ ಇರುವ ಮಾಹಿತಿ ಮೇರೆಗೆ ಮಹಾಲಕ್ಷೀ ಲೇಔಟ್ ಠಾಣೆಯ ಪಿಎಸ್ಐ ವೆಂಕಟರಾಮು ಹಾಗೂ ಕಾನ್ಸ್ಟೇಬಲ್ ಗಳು ಆರೋಪಿಯನ್ನು ಬಂಧಿಸಲು ತೆರಳಿದ್ದಾರೆ.

ಈ ವೇಳೆ ಆರೋಪಿ ಪೊಲೀಸರ ಮೇಲೆ ಹಲ್ಲೆ ಮಾಡಲು ಮುಂದಾದಾಗ ಪಿಎಸ್ಐ ವೆಂಕಟರಾಮು ಶರಣಾಗುವಂತೆ ಆರೋಪಿಗೆ ಮೊದಲು ಹೇಳಿ ನಂತ್ರ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಈ ವೇಳೆ ಇದನ್ನ ಲೆಕ್ಕಿಸದೆ ಮತ್ತೆ ಪೊಲೀಸರ ಮೇಲೆ ಪ್ರತಿದಾಳಿ ಮಾಡುವ ವೇಳೆ ಪಿಎಸ್ಐ ವೆಂಕಟರಾಮು ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿ ಖಾಸಗಿ ಆಸ್ಪತ್ರೆ ಗೆ ದಾಖಲಿಸಿದ್ದಾರೆ. ಸದ್ಯ ಆರೋಪಿ‌ಹಾಗೂ ಘಟನೆಯಲ್ಲಿ ಗಾಯಗೊಂಡ ಪೊಲೀಸರಿಗೆ ಚಿಕಿತ್ಸೆ ನೀಡಲಾಗ್ತಿದ್ದು ತನಿಖೆ ಮುಂದುವರೆದಿದೆ.

ರಘು ಕೊಲೆಯ ಅಸಲಿಯತ್ತು....

ಕೊಲೆಯಾದ ರಘು ನಂದೀನಿಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದು ವೃತ್ತಿಯಲ್ಲಿ ಕ್ಯಾಬ್ ಹಾಗೂ ಆಟೋ ಚಾಲಕನಾಗಿದ್ದ. ಆದ್ರೆ ಇತ್ತಿಚ್ಚೆಗೆ ಕೊಲೆಯಾದ ರಘು ಮಾವ ಪ್ರಭಾಕರ್ ನಡುವೆ ಹಣಕಾಸಿನ ವಿಚಾರದಲ್ಲಿ ಜಗಳ ನಡೆದು ಗಲಾಟೆ ಯಾಗಿತ್ತು.

ಹೀಗಾಗಿ ಇದೇ ಕೋಪಕ್ಕೆ ಪ್ರಭಾಕರು ತನ್ನ ಕುಟುಂಬಸ್ಥರಲ್ಲಿ ಒಬ್ಬರಾದ ನರಸಿಂಹೂರ್ತಿ ಜೊತೆ ಸೇರಿ ರಘುವನ್ನ ಕೊಲೆ ಮಾಡೋದಕ್ಕೆ 50 ಸಾವಿರ ಹಣ‌ವನ್ನ ಬಾಬು ಶಿವಕುಮಾರ್ಗೆ ಸುಪಾರಿ ನೀಡಿದ್ದಾರೆ.
ಹಿಗಾಗಿ ಇದೇ ತಿಂಗಳ 11 ರಂದು ನಂದಿಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಘು ಕ್ಯಾಬ್ ನಲ್ಲಿ ಬರುತ್ತಿದ್ದ ವೇಳೆ ಏಕಾ ಏಕಿ ದಾಳಿ ನಡೆಸಿದ ಆರೋಪಿಗಳು ರಘುಗೆ ಇಪ್ಪತ್ತು ಭಾರಿ ಇರಿದು ಕೊಲೆ ಮಾಡಿದ್ದಾರೆ. ಸದ್ಯ ಈ ಘಟನಾವಾಳಿ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು. ಹೀಗಾಗಿ ಮೊದಲು ಪ್ರಭಾಕರ್ ಹಾಗೂ ನರಸಿಂಹ ಮೂರ್ತಿ ಬಂಧಿಸಿರುವ ಪೊಲೀಸರು ಇಂದು ಪ್ರಕರಣದಲ್ಲಿ ಸುಪಾರಿ ಪಡೆದದು ಬಾಬು ಶಿವಕುಮಾರ್ ಬಂಧಿಸಿ ತನಿಖೆ ಮುಂದುವರೆಸಿದ್ದಾರೆ Body:KN_BNG_SHOUTOUT_01_7204498Conclusion:KN_BNG_SHOUTOUT_01_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.