ಧಾರವಾಡ: ಗಣೇಶ ಹಬ್ಬ ಹಾಗೂ ಮೊಹರಂ ಹಬ್ಬದ ಮುಂಜಾಗೃತ ಕ್ರಮವಾಗಿ ಜಿಲ್ಲೆಯ ಮೂವರು ರೌಡಿಶೀಟರ್‌ಗಳನ್ನು ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ
ಇರ್ಫಾನ್ ಸೈಯ್ಯದ್ ಹಂಚಿನಾಳ, ಮುಕ್ತುಂ ಸೊಗಲದ ಹಾಗೂ ಮಹಮ್ಮದ ಹ್ಯಾರಿಷ್ ಪಠಾಣ್ ಬಂಧಿತ ರೌಡಿಗಳಾಗಿದ್ದು, ಸಿವಿಲ್ ವ್ಯಾಜ್ಯ, ವಿವಾದಿತ ಕಟ್ಟಡ ಹಾಗೂ ಭೂ ವ್ಯಾಜ್ಯಗಳ ವಿಚಾರದಲ್ಲಿ ಭಾಗಿಯಾಗಿ ಸಂಬಂಧಪಟ್ಟವರಿಗೆ ಆರೋಪಿಗಳು ಭಯ ಹುಟ್ಟಿಸುತ್ತಿದ್ದರು ಎನ್ನಲಾಗಿದೆ.
ಈ ಮೂವರನ್ನು ಸೆಪ್ಟೆಂಬರ್ 5ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.