ETV Bharat / jagte-raho

ಕುಡಿದ ಮತ್ತಿನಲ್ಲಿ ಕಾರುಗಳ ಗ್ಲಾಸ್ ಒಡೆಯುತ್ತಿದ್ದ ಕಿಡಿಗೇಡಿ‌ ಬಂಧನ

author img

By

Published : Oct 4, 2020, 5:25 PM IST

ಕಾರುಗಳ‌ ಮಾಲೀಕರು ಕೆಂಗೇರಿ‌ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ‌‌ ಪೊಲೀಸರಿಗೆ ಆರೋಪಿ ಎಸಗಿರುವ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳು ದೊರಕಿದ್ದು, ಕಿಡಿಗೇಡಿಯನ್ನು ಬಂಧಿಸಿದ್ದಾರೆ.

accused-arrest-for-smashing-car-glass-in-drunken-bengaluru
ಕುಡಿದ ಮತ್ತಿನಲ್ಲಿ ಕಾರುಗಳ ಗ್ಲಾಸ್ ಹೊಡೆಯುತ್ತಿದ್ದ ಕಿಡಿಗೇಡಿ‌ ಬಂಧನ

ಬೆಂಗಳೂರು: ಕುಡಿದ ಮತ್ತಿನಲ್ಲಿ ರಾಡ್​ನಿಂದ ಕಾರುಗಳ ಗ್ಲಾಸ್ ಒಡೆದು‌ ಹುಚ್ಚಾಟ ನಡೆಸುತ್ತಿದ್ದ ಆರೋಪಿಯನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.

ಕೆಂಗೇರಿಯ ಅಶೋಕ್ ಬಂಧಿತ ಆರೋಪಿಯಾಗಿದ್ದು, ಆಟೋ ಚಾಲಕನಾಗಿದ್ದ ಈತ ರಾತ್ರಿ ವೇಳೆ ಕಂಠಪೂರ್ತಿ ಕುಡಿದು ನಡುರಸ್ತೆಯಲ್ಲಿ ಸೈಕೋಪಾತ್​ನಂತೆ ವರ್ತಿಸುತ್ತಿದ್ದ. ರಾಡ್ ಹಿಡಿದು ಮನೆ ಮುಂದೆ ಪಾರ್ಕ್ ಮಾಡಿದ್ದ ಕಾರಿನ ಗ್ಲಾಸ್ ಒಡೆದು ಪುಂಡಾಟ ನಡೆಸುತ್ತಿದ್ದ. ಇದೇ ರೀತಿ 8 ಕಾರುಗಳ ಗ್ಲಾಸ್ ಒಡೆದು ದುಷ್ಕೃತ್ಯ ಎಸಗಿದ್ದ.‌

ಕಾರುಗಳ‌ ಮಾಲೀಕರು ಕೆಂಗೇರಿ‌ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ‌‌ ಪೊಲೀಸರಿಗೆ ಆರೋಪಿ ಎಸಗಿರುವ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳು ದೊರಕಿದ್ದು, ಕಿಡಿಗೇಡಿಯನ್ನು ಬಂಧಿಸಿದ್ದಾರೆ.

ಬೆಂಗಳೂರು: ಕುಡಿದ ಮತ್ತಿನಲ್ಲಿ ರಾಡ್​ನಿಂದ ಕಾರುಗಳ ಗ್ಲಾಸ್ ಒಡೆದು‌ ಹುಚ್ಚಾಟ ನಡೆಸುತ್ತಿದ್ದ ಆರೋಪಿಯನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.

ಕೆಂಗೇರಿಯ ಅಶೋಕ್ ಬಂಧಿತ ಆರೋಪಿಯಾಗಿದ್ದು, ಆಟೋ ಚಾಲಕನಾಗಿದ್ದ ಈತ ರಾತ್ರಿ ವೇಳೆ ಕಂಠಪೂರ್ತಿ ಕುಡಿದು ನಡುರಸ್ತೆಯಲ್ಲಿ ಸೈಕೋಪಾತ್​ನಂತೆ ವರ್ತಿಸುತ್ತಿದ್ದ. ರಾಡ್ ಹಿಡಿದು ಮನೆ ಮುಂದೆ ಪಾರ್ಕ್ ಮಾಡಿದ್ದ ಕಾರಿನ ಗ್ಲಾಸ್ ಒಡೆದು ಪುಂಡಾಟ ನಡೆಸುತ್ತಿದ್ದ. ಇದೇ ರೀತಿ 8 ಕಾರುಗಳ ಗ್ಲಾಸ್ ಒಡೆದು ದುಷ್ಕೃತ್ಯ ಎಸಗಿದ್ದ.‌

ಕಾರುಗಳ‌ ಮಾಲೀಕರು ಕೆಂಗೇರಿ‌ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ‌‌ ಪೊಲೀಸರಿಗೆ ಆರೋಪಿ ಎಸಗಿರುವ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳು ದೊರಕಿದ್ದು, ಕಿಡಿಗೇಡಿಯನ್ನು ಬಂಧಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.