ರಾಜ್ಕೋಟ್ (ಗುಜರಾತ್): ವಿಧವೆ ಸಹೋದರಿಯ ಮೇಲೆ ವ್ಯಕ್ತಿಯೋರ್ವ ಪದೇ ಪದೇ ಅತ್ಯಾಚಾರವೆಸಗಿ ಪ್ರಾಣ ಬೆದರಿಕೆವೊಡ್ಡಿರುವ ಘಟನೆ ಗುಜರಾತ್ನ ರಾಜ್ಕೋಟ್ ಜಿಲ್ಲೆಯ ಗೋಕುಲ್ಧಾಮ್ ಬಳಿಯ ಗೋಕುಲ್ನಗರದಲ್ಲಿ ನಡೆದಿದೆ.
ಸುಮಾರು 16 ವರ್ಷಗಳಿಂದ ಸಹೋದರನೇ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಜೊತೆಗೆ ಅತ್ಯಾಚಾರದ ಸುದ್ದಿಯನ್ನು ಬಾಯ್ಬಿಟ್ಟರೇ ಸಹೋದರಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆ ದೂರು ನೀಡಿದ್ದಾರೆ.
ರಾಜ್ಕೋಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ದೂರನ್ನು ಆಧರಿಸಿ, ಧೋಲಾಕಿಯಾ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
16 ವರ್ಷಗಳ ಹಿಂದೆ ಸಂತ್ರಸ್ತೆಯ ಪತಿ ಸಾವನ್ನಪ್ಪಿದ್ದು, ಇದನ್ನೇ ನೆಪವಾಗಿಸಿಕೊಂಡ ಆಕೆಯ ಸಹೋದರ ಅತ್ಯಾಚಾರ ನಡೆಸಿದ್ದಾನೆ ಎಂದು ಹೇಳಲಾಗುತ್ತಿದೆ. ಸದ್ಯಕ್ಕೆ ಆರೋಪಿ ವಿರುದ್ಧ ಐಪಿಸಿ 376, 506(2), 323ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.