ನವದೆಹಲಿ: ಭಾರತಕ್ಕೆ ಚಿನ್ನ ಹಾಗೂ ಸಿಗರೇಟ್ ಕಳ್ಳಸಾಗಣೆ ಮಾಡಲು ದುಬೈನಿಂದ ಬಂದ ಆರು ಆರೋಪಿಗಳನ್ನು ಕಸ್ಟಮ್ಸ್ ಅಧಿಕಾರಿಗಳು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ಶುಕ್ರವಾರ ದುಬೈನಿಂದ ಆಗಮಿಸಿದ ಹತ್ತು ಪ್ರಯಾಣಿಕರನ್ನು ಅಧಿಕಾರಿಗಳು ತಡೆದಿದ್ದರು. ಇವರ ಲಗೇಜ್ ಬ್ಯಾಗ್ಗಳನ್ನು ನೋಡಿದಾಗ ಆರು ಮಂದಿಯ ಬಳಿ ದೊರೆತ 64 ಲಕ್ಷ ರೂ. ಮೌಲ್ಯದ 1.26 ಕೆಜಿ ಚಿನ್ನ, 1.79 ಕೋಟಿ ರೂ. ಮೌಲ್ಯದ ಸಿಗರೇಟ್ ಅನ್ನು ವಶಪಡಿಸಿಕೊಂಡಿದ್ದಾರೆ. ವಿವಿಧ ಬ್ರಾಂಡ್‌ಗಳ ವಿದೇಶಿ ಸಿಗರೇಟ್ ಇವಾಗಿದ್ದು, 7.52 ಲಕ್ಷ ಸ್ಟಿಕ್‌ಗಳು ಸಿಕ್ಕಿವೆ.
ಇದನ್ನೂ ಓದಿ: ಚೆನ್ನೈ ವಿಮಾನ ನಿಲ್ದಾಣದಲ್ಲಿ 1.8 ಕೆಜಿ ಚಿನ್ನ ವಶಪಡಿಸಿಕೊಂಡ ಕಸ್ಟಮ್ಸ್ ಅಧಿಕಾರಿಗಳು
ಆರೋಪಿಗಳು ಈ ಹಿಂದೆ ಸುಮಾರು 2.41 ಕೋಟಿ ರೂ.ಗಳ ಮೌಲ್ಯದ 18 ಲಕ್ಷ ಸಿಗರೇಟ್ ಸ್ಟಿಕ್‌ಗಳನ್ನು ಕಳ್ಳಸಾಗಣೆ ಮಾಡಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.