ಪ್ರಯತ್ನದಲ್ಲಿ ಫಲ ಇದೆ ಎಂಬ ಮಾತಿದೆ. ಅಂದರೆ ಸತತ ಪ್ರಯತ್ನ ಮಾಡಿದಲ್ಲಿ ಮಾತ್ರ ಜೀವನದಲ್ಲಿ ಯಶಸ್ಸು ಕಾಣಬಹುದಾಗಿದೆ. ಈ ಮಾತಿಗೆ ಪೂರಕ ಎಂಬಂತೆ ಮಹಿಳೆಯೊಬ್ಬರು ಡ್ರೈವಿಂಗ್ ಲೈಸೆನ್ಸ್‌ಗಾಗಿ ಬರೋಬ್ಬರಿ 960 ಬಾರಿ ಪರೀಕ್ಷೆ ನೀಡಿ ವಾಹನ ಚಾಲನೆ ಪರವಾನಗಿ ಪಡೆದುಕೊಂಡಿದ್ದಾರೆ.
ಹೌದು, ಇದು ಅಚ್ಚರಿಯಾದರೂ ಸತ್ಯ ಘಟನೆ. ದಕ್ಷಿಣ ಕೊರಿಯಾದ 69ರ ಪ್ರಾಯದ ಚಾ ಸಾ-ಸೂನ್ ಎಂಬ ವೃದ್ಧೆ ಏಪ್ರಿಲ್ 2005ರಲ್ಲಿ ಮೊದಲ ಬಾರಿಗೆ ಡ್ರೈವಿಂಗ್ ಲೈಸೆನ್ಸ್ನ ಲಿಖಿತ ಪರೀಕ್ಷೆಯನ್ನು ಬರೆದಿದ್ದರು. ಆದರೇ ಸೂನ್ ಅವರು ಮೊದಲ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದರು. ಹೇಗಾದರು ಮಾಡಿ ಡ್ರೈವಿಂಗ್ ಲೈಸೆನ್ಸ್ ಪಡೆದೇ ತೀರಬೇಕು ಎಂದು ನಿರ್ಧರಿಸಿದ ಅವರು ವಾರಕ್ಕೆ ಐದು ದಿನ ಡ್ರೈವಿಂಗ್ ಲೈಸೆನ್ಸ್ ಟೆಸ್ಟ್ ಪರೀಕ್ಷೆ ಬರೆಯಲು ಆರಂಭಿಸಿದರು. ಮೂರು ವರ್ಷಗಳ ಕಾಲ ವಾರಕ್ಕೆ ಐದು ದಿನ ನಿಯಮಿತವಾಗಿ ಪರೀಕ್ಷೆಗೆ ಹಾಜರಾಗಿದ್ದರು. ಮೂರು ವರ್ಷಗಳಲ್ಲಿ 780 ಪ್ರಯತ್ನಗಳನ್ನು ಮಾಡಿದ ಅವರಿಗೆ ಎಲ್ಲದರಲ್ಲೂ ಫಲಿತಾಂಶ ಫೇಲ್ ಎಂದೇ ಇರುತಿತ್ತು.
ಕೊನೆಗೂ ಸಿಕ್ಕಿತು ಲೈಸೆನ್ಸ್.. ಇವರ ಸ್ಥಾನದಲ್ಲಿ ಬೇರೆ ಯಾರಾದರೂ ಇದ್ದಿದ್ದರೇ ಬಹುಶಃ ಡ್ರೈವಿಂಗ್ ಲೈಸೆನ್ಸ್ನ ಸಹವಾಸವೇ ಬೇಡಪ್ಪ ಎಂದು ಸುಮ್ಮನಾಗುತ್ತಿದ್ದರು. ಆದರೆ ಸೂನ್ ಮಾತ್ರ ಡ್ರೈವಿಂಗ್ ಲೈಸೆನ್ಸ್ ಪರೀಕ್ಷೆ ಬರೆಯುವ ಪ್ರಯತ್ನವನ್ನು ನಿಲ್ಲಿಸಲಿಲ್ಲ. ಮೂರು ವರ್ಷಗಳ ನಂತರ ವಾರಕ್ಕೆ ಎರಡು ಬಾರಿ ಪರೀಕ್ಷೆಗೆ ಹೋಗತೊಡಗಿದರು. ದೀರ್ಘ ಕಾಲದಿಂದ ಪ್ರಯತ್ನಿಸುತ್ತಿದ್ದ ಅವರು ಅಂತಿಮವಾಗಿ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಪ್ರಾಯೋಗಿಕ ಪರೀಕ್ಷೆಗೆ ಆಯ್ಕೆಯಾದರು. ಪ್ರಾಯೋಗಿಕ ಪರೀಕ್ಷೆಯಲ್ಲೂ ಹತ್ತು ಬಾರಿ ಪ್ರಯತ್ನಿಸಿ ಯಶಸ್ವಿಯಾದರು. ಒಟ್ಟು 960 ಪ್ರಯತ್ನಗಳ ನಂತರ ಚಾ ಸಾ-ಡ್ರೈವಿಂಗ್ ಲೈಸೆನ್ಸ್ ಪಡೆದಿದ್ದಾರೆ.
ತರಕಾರಿ ಮಾರುವ ವ್ಯಾಪಾರ ನಡೆಸುತ್ತಿರುವ ಈ ವೃದ್ಧೆ ಡ್ರೈವಿಂಗ್ ಲೈಸೆನ್ಸ್‌ಗಾಗಿ ನಿರಂತರ ಪ್ರಯತ್ನಿಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ಅವರು ಸುಮಾರು 11 ಸಾವಿರ ಪೌಂಡ್ (11.16 ಲಕ್ಷ ರೂ.) ಖರ್ಚು ಮಾಡಿದ್ದರು. ಸತತ ಪ್ರಯತ್ನದಿಂದ ದೇಶಾದ್ಯಂತ ಸಾ ಸೂನ್ ಅವರು ಜನಪ್ರಿಯತೆ ಗಳಿಸಿದ್ದಾರೆ. ಅಲ್ಲದೇ ಹುಂಡೈ ಕಾರ್ ಜಾಹೀರಾತಿನಲ್ಲೂ ಅವರು ಕಾಣಿಸಿಕೊಂಡಿದ್ದಾರೆ. ಕಂಪನಿಯು ಚಾ ಸಾ-ಅವರಿಗೆ 11,640 ಪೌಂಡ್‌ಗಳ (ರೂ. 11.82 ಲಕ್ಷ) ಹೊಸ ಕಾರನ್ನು ಉಡುಗೊರೆಯಾಗಿ ನೀಡಿದೆ.
ವಾಸ್ತವವಾಗಿ, ಈ ಇದು 15 ವರ್ಷಗಳ ಹಿಂದೆ ನಡೆದಿದ್ದ ಸಂಘತಿ. ಇತ್ತೀಚೆಗೆ, ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ರೆಡ್ಡಿಟ್‌ನಲ್ಲಿ ಮತ್ತೆ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಈ ಹಿನ್ನೆಲೆ ಅದು ಮತ್ತೊಮ್ಮೆ ವೈರಲ್ ಆಗಿದೆ. ನೆಟಿಜನ್‌ಗಳೆಲ್ಲ ರಿಪೋಸ್ಟ್ ಮಾಡಿ ತಮ್ಮ ಅಭಿಪ್ರಾಯಗಳನ್ನು ನೀಡುತ್ತಿರುವುದರಿಂದ ಮತ್ತೆ ಈ ವಿಷಯ ಮುನ್ನೆಲೆಗೆ ಬಂದಿದೆ. ಈ ಬಗ್ಗೆ ನಟಿಜನ್ಗಳು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ನಾನು ಐದು ಬಾರಿ ವಿಫಲವಾಗಿದ್ದರೆ, ಅದರಿಂದ ಹಿಂದೆ ಸರೆಯುತ್ತಿದ್ದೆ ಎಂದು ಒಬ್ಬರು ಬರೆದಿದ್ದಾರೆ. ಇನ್ನೂ ಕೆಲವರು ಚಾ ಸಾ-ಸೂನ್ ಅವರ ಪರಿಶ್ರಮವನ್ನು ಕೊಂಡಾಡಿದ್ದಾರೆ. "ಇದೆಲ್ಲ ನಮಗೆ ಪಾಠವಾಗಬೇಕು. ಎಂದಿಗೂ ಬಿಟ್ಟುಕೊಡುವುದಿಲ್ಲ ಎಂಬ ಸಂದೇಶವನ್ನು ನಾವು ಅರ್ಥಮಾಡಿಕೊಳ್ಳಬೇಕು" ಎಂದು ಮತ್ತೊಬ್ಬರು ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಬೈಕ್ನಲ್ಲಿ 50ಕ್ಕೂ ಹೆಚ್ಚು ದೇಶ ಸುತ್ತಿ ದಾಖಲೆ ಬರೆದು ಕಣ್ಮರೆಯಾದ ಮಗನಿಗೆ ಸ್ಮಾರಕ ಕಟ್ಟಿದ ತಾಯಿ!