ETV Bharat / international

ಉಕ್ರೇನ್ ಯುದ್ಧಕ್ಕೆ ಹೊಸ ಸಾರಥಿ: ಪುಟಿನ್‌ ಇವರನ್ನೇಕೆ ಆಯ್ಕೆ ಮಾಡಿದರು? - ಜನರಲ್​​ ಅಲೆಕ್ಸಾಂಡರ್ ಡ್ವೊರ್ನಿಕೋವ್

ಉಕ್ರೇನ್​ನಲ್ಲಿ ಸೇನಾ ಕಾರ್ಯಾಚರಣೆಗೆ ರಷ್ಯಾ, ಹೊಸ ಕಮಾಂಡರ್ ಆಗಿ ಅಲೆಕ್ಸಾಂಡರ್ ಡ್ವೊರ್ನಿಕೋವ್ ಅವರನ್ನು ನೇಮಿಸಿದೆ. ಆದರೆ, ಇವರನ್ನು ಕೇವಲ ಕಮಾಂಡರ್​ ಆಗಿ ರಷ್ಯಾದ ಅಧ್ಯಕ್ಷರ ಕಚೇರಿ ನೋಡುತ್ತಿಲ್ಲ. ಬದಲಿಗೆ ಜನರಲ್​ ಅಲೆಕ್ಸಾಂಡರ್ ನಾಯಕತ್ವದಲ್ಲಿ ಉಕ್ರೇನ್​ನಲ್ಲಿ ಒಟ್ಟಾರೆ ತನ್ನ ಹಿಡಿತ ಸಾಧಿಸುವ ನಿರೀಕ್ಷೆ ಹೊಂದಿದೆ.

ಉಕ್ರೇನ್​ನಲ್ಲಿ ಸೇನಾ ಕಾರ್ಯಾಚರಣೆಗಳಿಗೆ ಹೊಸ ಕಮಾಂಡರ್ ನೇಮಿಸಿದ ರಷ್ಯಾ

author img

By

Published : Apr 11, 2022, 6:01 PM IST

ಮಾಸ್ಕೋ (ರಷ್ಯಾ): ಉಕ್ರೇನ್​ ಮತ್ತು ರಷ್ಯಾ ನಡುವೆ ಭೀಕರ ಯುದ್ಧ ನಡೆಯುತ್ತಿರುವ ಮಧ್ಯೆಯೇ ಉಕ್ರೇನ್​ನಲ್ಲಿ ತನ್ನ ಸೇನೆ ಕಾರ್ಯಾಚರಣೆಗಳಿಗೆ ರಷ್ಯಾ ಹೊಸ ಕಮಾಂಡರ್​ ಆಗಿ ಜನರಲ್​​ ಅಲೆಕ್ಸಾಂಡರ್ ಡ್ವೊರ್ನಿಕೋವ್ ಅವರನ್ನು ನೇಮಿಸಿದೆ. ಸಿರಿಯಾದಲ್ಲಿ ನಡೆದ ರಷ್ಯಾದ ಕಾರ್ಯಾಚರಣೆಯ ಪರಿಣತಿಯನ್ನು ಹೊಸ ಕಮಾಂಡರ್​ ಹೊಂದಿದ್ದಾರೆ.

ಉಕ್ರೇನ್‌ನಲ್ಲಿ ಹಿಡಿತ ಸಾಧಿಸುವ ನಿರೀಕ್ಷೆ: ಅಲೆಕ್ಸಾಂಡರ್ ಡ್ವೊರ್ನಿಕೋವ್ ಅವರನ್ನು ಕೇವಲ ಕಮಾಂಡರ್​ ಆಗಿ ರಷ್ಯಾದ ಅಧ್ಯಕ್ಷ ಪುಟಿನ್​ ಕಚೇರಿ ನೋಡುತ್ತಿಲ್ಲ. ಬದಲಿಗೆ ಜನರಲ್​ ಅಲೆಕ್ಸಾಂಡರ್ ನಾಯಕತ್ವದಲ್ಲಿ ಉಕ್ರೇನ್​ನಲ್ಲಿ ಒಟ್ಟಾರೆ ತನ್ನ ಹಿಡಿತ ಸಾಧಿಸುವ ನಿರೀಕ್ಷೆ ಹೊಂದಿದೆ. ಮೇ 9ರೊಳಗೆ ಪೂರ್ವ ಉಕ್ರೇನ್​ನಲ್ಲಿ ಊಹೆಗೂ ಮೀರಿದ ಯಶಸ್ಸನ್ನು ರಷ್ಯಾ ನಿರೀಕ್ಷಿಸುತ್ತಿದೆ ಎಂದು ಹೇಳಲಾಗುತ್ತಿದೆ.

ಉಕ್ರೇನ್​ನಲ್ಲಿ ರಷ್ಯಾ ಸೇನಾ ಕಾರ್ಯಾಚರಣೆಗಳಿಗೆ ಹೊಸ ಕಮಾಂಡರ್ ನೇಮಕವಾದ ಅಲೆಕ್ಸಾಂಡರ್ ಡ್ವೊರ್ನಿಕೋವ್
ಅಲೆಕ್ಸಾಂಡರ್ ಡ್ವೊರ್ನಿಕೋವ್

ಪರಿಚಯ: ಹೊಸ ಕಮಾಂಡರ್​ ಅಲೆಕ್ಸಾಂಡರ್ ಡ್ವೊರ್ನಿಕೋವ್ ಮೇಲೆ ರಷ್ಯಾದ ಇಂತಹ ನಿರೀಕ್ಷೆಗೆ ಕಾರಣವೂ ಇವೆ. ಅದು ಇವರು ತಮ್ಮ ಸೇವಾವಧಿಯಲ್ಲಿ ತೋರಿರುವ ಅನೇಕ ರೀತಿಯ ಸಾಮರ್ಥ್ಯ. 1982ರಲ್ಲಿ ರಷ್ಯಾ ಸೇನೆಗೆ ಕಮಾಂಡರ್​ ಆಗಿ ಸೇರಿದ್ದ ಅಲೆಕ್ಸಾಂಡರ್ ಡ್ವೊರ್ನಿಕೋವ್ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ.

6ನೇ ಗಾರ್ಡ್ಸ್ ಮೋಟಾರ್ ರೈಫಲ್ ಬ್ರಿಗೇಡ್​ನಲ್ಲಿ ಬೆಟಾಲಿಯನ್ ಕಮಾಂಡರ್ ಮತ್ತು 1990ರಲ್ಲಿ 10ನೇ ಗಾರ್ಡ್ ಟ್ಯಾಂಕ್ ವಿಭಾಗ ಮತ್ತು 2ನೇ ಗಾರ್ಡ್ ಮೋಟಾರ್ ರೈಫಲ್ ವಿಭಾಗದಲ್ಲಿ ರೆಜಿಮೆಂಟ್‌ಗಳನ್ನು ಮುನ್ನಡೆಸಿದ ಅನುಭವವನ್ನು ಇವರು ಹೊಂದಿದ್ದಾರೆ. ಇದರ ಜೊತೆಗೆ ಉತ್ತರ ಕಾಕಸಸ್ ಸೇನೆಯಲ್ಲಿ ಸ್ಟಾಫ್​ ಆಫ್​ ಚೀಫ್​ ಮತ್ತು ಮೋಟಾರ್ ರೈಫಲ್​ನ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದಾರೆ. ನಂತರದಲ್ಲಿ 36ನೇ ಸೇನೆಯ ಉಪ ಕಮಾಂಡರ್​ ಹಾಗೂ 2008ರಲ್ಲಿ 5ನೇ ರೆಡ್​​ ಬ್ಯಾನರ್​ ಆರ್ಮಿಯ ಕಮಾಂಡರ್​ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ. ಮೇಲಾಗಿ, ಸಿರಿಯಾದಲ್ಲಿ ಈತನ ಕಣ್ಸನ್ನೆ ಮೇರೆಗೆ ರಷ್ಯಾ ವೈಮಾನಿಕ ದಾಳಿಗಳು ನಡೆದಿವೆ.

ಇತ್ತ, ಉಕ್ರೇನ್​ ಮೇಲೆ ರಷ್ಯಾ ಯುದ್ಧ ಸಾರಿ 47 ದಿನಗಳು ಆಗಿದೆ. ಇದುವರೆಗೆ 4.2 ಮಿಲಿಯನ್​ಗೂ ಅಧಿಕ ಜನರು ಉಕ್ರೇನ್​ನಿಂದ ಸ್ಥಳಾಂತರವಾಗಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆ ಹೇಳಿದೆ.

ಇದನ್ನೂ ಓದಿ: ಪಾಕ್​ ನೂತನ ಪ್ರಧಾನಿಯಾಗಿ ಶೆಹಬಾಜ್‌ ಷರೀಫ್‌ ಅವಿರೋಧ ಆಯ್ಕೆ: ಇಂದೇ ಪ್ರಮಾಣ ವಚನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.