ETV Bharat / international

ಪ್ರಧಾನಿ ಮೋದಿ, ಭಾರತದ ವಿದೇಶಾಂಗ ನೀತಿ ಹಾಡಿ ಹೊಗಳಿದ ಪುಟಿನ್​.. ಚೀನಾಕ್ಕೂ ಬೆಂಬಲ, ಅಮೆರಿಕ ವಿರುದ್ಧ ಕಿಡಿ - putin on russia india relation

ಯಾವುದೇ ಒತ್ತಡಗಳ ನಡುವೆಯೂ ತನ್ನ ರಾಷ್ಟ್ರದ ಹಿತಾಸಕ್ತಿಗಾಗಿ ಸ್ವತಂತ್ರ ವಿದೇಶಾಂಗ ನೀತಿಯನ್ನು ಹೊಂದಿರುವ ಹಾಗೂ ಅದನ್ನು ಯಶಸ್ವಿಯಾಗಿ ಮುನ್ನಡೆಸುವ ವಿಶ್ವದ ಅಗ್ರಗಣ್ಯ ನಾಯಕರಲ್ಲಿ ಪ್ರಧಾನಿ ಮೋದಿ ಒಬ್ಬರು ಎಂದು ಪುಟಿನ್​ ಶಹಬ್ಬಾಷ್​ಗಿರಿ ನೀಡಿದ್ದಾರೆ.

We have a special relationship with India Russian President Vladimir Putin
ಪ್ರಧಾನಿ ಮೋದಿ ಮತ್ತು ಭಾರತದ ವಿದೇಶಾಂಗ ನೀತಿ ಹಾಡಿ ಹೊಗಳಿದ ಪುಟಿನ್
author img

By

Published : Oct 28, 2022, 7:08 AM IST

Updated : Oct 28, 2022, 10:43 AM IST

ಮಾಸ್ಕೋ( ರಷ್ಯಾ): ಮಾಸ್ಕೋದಲ್ಲಿ ನಡೆದ ವಾರ್ಷಿಕ ವಾಲ್ಡೈ ಚರ್ಚೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪಾಲ್ಗೊಂಡು ಹಲವಾರು ವಿಚಾರಗಳ ಬಗ್ಗೆ ಮಾತನಾಡಿದರು. ಇದೇ ವೇಳೆ ಭಾರತದ ವಿದೇಶಾಂಗ ನೀತಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ ಬಗ್ಗೆ ರಷ್ಯಾ ಅಧ್ಯಕ್ಷ ಪುಟಿನ್​ ಗುಣಗಾನ ಮಾಡಿದ್ದಾರೆ.

ಯಾವುದೇ ಒತ್ತಡಗಳ ನಡುವೆಯೂ ತನ್ನ ರಾಷ್ಟ್ರದ ಹಿತಾಸಕ್ತಿಗಾಗಿ ಸ್ವತಂತ್ರ ವಿದೇಶಾಂಗ ನೀತಿಯನ್ನು ಹೊಂದಿರುವ ಹಾಗೂ ಅದನ್ನು ಯಶಸ್ವಿಯಾಗಿ ಮುನ್ನಡೆಸುವ ವಿಶ್ವದ ಅಗ್ರಗಣ್ಯ ನಾಯಕರಲ್ಲಿ ಪ್ರಧಾನಿ ಮೋದಿ ಒಬ್ಬರು ಎಂದು ಪುಟಿನ್​ ಶಹಬ್ಬಾಷ್​ಗಿರಿ ನೀಡಿದ್ದಾರೆ.

ಭಾರತಕ್ಕೆ ಉತ್ತಮ ಭವಿಷ್ಯವಿದೆ ಮತ್ತು ಜಾಗತಿಕ ವ್ಯವಹಾರಗಳಲ್ಲಿ ಭಾರತದ ಪಾತ್ರ ಹೆಚ್ಚುತ್ತಿದೆ. ಈ ಬಗ್ಗೆ ನನಗೆ ಖಾತ್ರಿಯಿದೆ ಎಂದು ಮಾಸ್ಕೋದಲ್ಲಿ ನಡೆದ ವಾರ್ಷಿಕ ವಾಲ್ಡೈ ಚರ್ಚೆಯಲ್ಲಿ ಭಾಗವಹಿಸಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಈ ಮಾತು ಹೇಳಿದ್ದಾರೆ.

ಭಾರತದೊಂದಿಗೆ ರಷ್ಯಾ ಉತ್ತಮ ಬಾಂಧವ್ಯ: ಭಾರತದ ಜೊತೆ ಆರ್ಥಿಕ ಸಹಕಾರ ಹೆಚ್ಚುತ್ತಿದೆ. ನಾವು ವ್ಯಾಪಾರದ ಪ್ರಮಾಣವನ್ನು ಹೆಚ್ಚಿಸಿದ್ದೇವೆ. ಭಾರತದ ಕೃಷಿಗೆ ಬಹಳ ಮುಖ್ಯವಾದ ರಸಗೊಬ್ಬರಗಳ ಪೂರೈಕೆಯನ್ನು ಹೆಚ್ಚಿಸಲು ಪ್ರಧಾನಿ ಮೋದಿ ನನ್ನ ಬಳಿ ಕೇಳಿದ್ದಾರೆ. ನಾವು ಈ ಪ್ರಮಾಣವನ್ನು 7.6 ಪಟ್ಟು ಹೆಚ್ಚಿಸಿದ್ದೇವೆ. ಕೃಷಿಯಲ್ಲಿ ಉಭಯ ರಾಷ್ಟ್ರಗಳ ನಡುವಣ ವ್ಯಾಪಾರ ದ್ವಿಗುಣಗೊಂಡಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.

ಇದನ್ನು ಓದಿ: ರಷ್ಯಾ ಇಲ್ಲಿಯವರೆಗೆ 400 ಇರಾನಿನ ಡ್ರೋನ್‌ಗಳೊಂದಿಗೆ ದಾಳಿ ಮಾಡಿದೆ: ಉಕ್ರೇನ್​ ಅಧ್ಯಕ್ಷರ ಆರೋಪ

ಭಾರತದೊಂದಿಗೆ ನಮಗೆ ವಿಶೇಷ ಸಂಬಂಧವಿದೆ. ಇದು ಹಲವು ದಶಕಗಳ ನಿಕಟ ಮಿತ್ರತ್ವಕ್ಕೆ ಸಾಕ್ಷಿಯಾಗಿದೆ. ನಾವು ಯಾವತ್ತೂ ಯಾವುದೇ ಕಷ್ಟಕರವಾದ ಸಮಸ್ಯೆಗಳನ್ನು ಎದುರಿಸಿಲ್ಲ ಮತ್ತು ಪರಸ್ಪರ ಬೆಂಬಲಿಸಿದ್ದೇವೆ ಮತ್ತು ಅದು ಈಗಲೂ ಮುಂದುವರೆದಿದೆ. ಭವಿಷ್ಯದಲ್ಲೂ ನಮ್ಮ ರಾಷ್ಟ್ರಗಳ ಬಾಂಧವ್ಯ ಹೀಗೆ ಮುಂದುವರೆಯುತ್ತದೆ ಎಂಬ ಖಾತ್ರಿಯಿದೆ ಎಂದು ಪುಟಿನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೇಕ್​ ಇನ್​ ಇಂಡಿಯಾ ಗುಣಗಾನ: ಪ್ರಧಾನಿ ಮೋದಿ ನೇತೃತ್ವದಲ್ಲಿ ಸಾಕಷ್ಟು ಕೆಲಸ ಮಾಡಲಾಗಿದೆ. ಅವರೊಬ್ಬ ದೇಶದ ದೇಶಭಕ್ತ. ಅವರ 'ಮೇಕ್ ಇನ್ ಇಂಡಿಯಾ' ಕಲ್ಪನೆಯು ಒಂದು ರಾಷ್ಟ್ರ ಆರ್ಥಿಕವಾಗಿ ಸದೃಢವಾಗಲು ಇರಬೇಕಾದ ಪ್ರಮುಖ ನೀತಿಗಳಲ್ಲಿ ಒಂದಾಗಿದೆ ಎಂದು ಪುಟಿನ್​ ಹೇಳಿದ್ದಾರೆ. ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಇದು ಹೆಮ್ಮೆಯ ವಿಷಯ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗುಣಗಾನ ಮಾಡಿದ್ದಾರೆ.

We have a special relationship with India Russian President Vladimir Putin
ಪ್ರಧಾನಿ ಮೋದಿ ಮತ್ತು ಭಾರತದ ವಿದೇಶಾಂಗ ನೀತಿ ಹಾಡಿ ಹೊಗಳಿದ ಪುಟಿನ್​.. ಚೀನಾಕ್ಕೂ ಬೆಂಬಲ, ಅಮೆರಿಕ ವಿರುದ್ಧ ಕಿಡಿ

ಭಾರತವು ಬ್ರಿಟಿಷ್ ವಸಾಹತುಶಾಹಿಯಿಂದ ಆಧುನಿಕ ರಾಜ್ಯಕ್ಕೆ ತನ್ನ ಅಭಿವೃದ್ಧಿಯಲ್ಲಿ ಮಹತ್ತರವಾದ ಪ್ರಗತಿಯನ್ನು ಸಾಧಿಸಿದೆ. ಸುಮಾರು 1.5 ಶತಕೋಟಿ ಜನರು ಮತ್ತು ಸ್ಪಷ್ಟವಾದ ಅಭಿವೃದ್ಧಿ ಫಲಿತಾಂಶಗಳು ಭಾರತದ ಬಗ್ಗೆ ಪ್ರತಿಯೊಬ್ಬರ ಗೌರವ ಮತ್ತು ಮೆಚ್ಚುಗೆ ವ್ಯಕ್ತಪಡಿಸಲು ಕಾರಣವಾಗಿದೆ ಎಂದು ಪುಟಿನ್​ ಹೇಳಿದ್ದಾರೆ.

ಚೀನಾಗೂ ಬೆಂಬಲ ವ್ಯಕ್ತಪಡಿಸಿದ ಪುಟಿನ್​: ತೈವಾನ್ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಅಂತರ್ಗತ ಭಾಗವಾಗಿದೆ. ಚೀನಾದ ನಿಲುವಿಗೆ ನಮ್ಮ ಬೆಂಬಲ ಇದೆ. ಅಮೆರಿಕದ ಅತ್ಯುನ್ನತ ನಾಯಕರು ತೈವಾನ್‌ಗೆ ಭೇಟಿ ನೀಡುವಂತಹ ಎಲ್ಲ ವಿಚಾರಗಳು ಪ್ರಚೋದನೆಯಲ್ಲದೆ ಬೇರೇನೂ ಅಲ್ಲ ಎಂದು ಪುಟಿನ್​ ಹೇಳಿದ್ದು, ಅಮೆರಿಕದ ನೀತಿಯನ್ನು ಅವರು ಖಂಡಿಸಿದ್ದಾರೆ.

ಇದನ್ನು ಓದಿ: ರಿಷಿ ಸುನಕ್ ಜೊತೆ ಪ್ರಧಾನಿ ಮೋದಿ ಮೊದಲ ಮಾತುಕತೆ: ಮುಕ್ತ ವ್ಯಾಪಾರ ಒಪ್ಪಂದ ಬಗ್ಗೆ ಚರ್ಚೆ

Last Updated : Oct 28, 2022, 10:43 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.