ETV Bharat / international

ಅಮೆರಿಕದ ಜೊತೆಗಿನ ರಷ್ಯಾ ಅಣು ಒಪ್ಪಂದ ಅಮಾನತು: ಉಕ್ರೇನ್​ ಮೇಲೆ ಪರಮಾಣು ಸಿಡಿತಲೆ ದಾಳಿ? - Russia Ukraine war

ಅಮೆರಿಕದೊಂದಿಗಿನ ಜೊತೆ ಅಣು ಒಪ್ಪಂದ ಅಮಾನತು- ರಷ್ಯಾ ಅಮೆರಿಕ ಅಣು ಒಪ್ಪಂದ- ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​- ಅಮೆರಿಕಕ್ಕೆ ಪುಟಿನ್​ ಅಣು ಸವಾಲು- ಉಕ್ರೇನ್​ ಯುದ್ಧಕ್ಕೆ ಒಂದು ವರ್ಷ

ಅಮೆರಿಕದ ಜೊತೆಗಿನ ರಷ್ಯಾ ಅಣು ಒಪ್ಪಂದ ಅಮಾನತು
ಅಮೆರಿಕದ ಜೊತೆಗಿನ ರಷ್ಯಾ ಅಣು ಒಪ್ಪಂದ ಅಮಾನತು
author img

By

Published : Feb 22, 2023, 7:54 AM IST

ಮಾಸ್ಕೋ: ಉಕ್ರೇನ್​ ಮೇಲೆ ಯುದ್ಧ ಸಾರಿ ಒಂದು ವರ್ಷ ಸಂಧಿಸುತ್ತಿರುವಾಗಲೇ ಅಮೆರಿಕದ ಜೊತೆ ಮಾಡಿಕೊಂಡಿದ್ದ ಅಣ್ವಸ್ತ್ರ ಒಪ್ಪಂದವನ್ನು ರಷ್ಯಾ ಅಮಾನತು ಮಾಡಿದೆ. ಇದನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಸ್ವತಃ ಘೋಷಿಸಿದ್ದಾರೆ. ಅದರಲ್ಲೂ ಜೋ ಬೈಡನ್​ ಅವರು ಎರಡು ದಿನಗಳ ಹಿಂದಷ್ಟೇ ಉಕ್ರೇನ್​ಗೆ ಭೇಟಿ ನೀಡಿದ ಬೆನ್ನಲ್ಲೇ ಒಪ್ಪಂದವನ್ನು ಸಸ್ಪೆಂಡ್​ ಮಾಡಿದ್ದು ಮಹತ್ವ ಪಡೆದುಕೊಂಡಿದೆ.

ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ವ್ಲಾಡಿಮಿರ್​ ಪುಟಿನ್​ ಅವರು, ಅಮೆರಿಕದೊಂದಿಗೆ ಮಾಡಿಕೊಂಡಿದ್ದ ಅಣ್ವಸ್ತ್ರ ಒಪ್ಪಂದವನ್ನು ಸದ್ಯಕ್ಕೆ ಅಮಾನತು ಮಾಡಲಾಗುವುದು. ನಾವು ಅದನ್ನು ರದ್ದು ಮಾಡುತ್ತಿಲ್ಲ. ಇನ್ನೂ ಒಪ್ಪಂದದಿಂದ ಸಂಪೂರ್ಣವಾಗಿ ಹಿಂದೆ ಸರಿದಿಲ್ಲ. ಒಂದು ವೇಳೆ ಅಮೆರಿಕ ಅಣ್ವಸ್ತ್ರ ಪರೀಕ್ಷೆ ನಡೆಸಿದರೆ, ರಷ್ಯಾ ಕೂಡ ದಿಟ್ಟ ನಡೆ ಇಡಲಿದೆ ಎಂದು ಎಚ್ಚರಿಕೆಯ ಮಾತನ್ನಾಡಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ರಷ್ಯಾದ ಅಸ್ತಿತ್ವಕ್ಕಾಗಿ ಯುದ್ಧ: ಉಕ್ರೇನ್​ ಮೇಲಿನ ಯುದ್ಧ ನಮ್ಮ ಸ್ಥಳೀಯ ಸಂಘವರ್ಷವಾಗಿದೆ. ಅದನ್ನು ಪಾಶ್ಚಿಮಾತ್ಯ ಗಣ್ಯರು ಜಾಗತಿಕ ಸಮಸ್ಯೆಯಾಗಿ ಬಿಂಬಿಸಿದ್ದಾರೆ. ತಮ್ಮ ಗುರಿ ಸಾಧನೆಗಾಗಿ ಅವರು ನಮ್ಮ ಮೇಲೆ ಒತ್ತಡ ತರುತ್ತಿದ್ದಾರೆ. ಯುದ್ಧವನ್ನು ಪ್ರಾರಂಭಿಸಿದ್ದೇ ಪಾಶ್ಚಿಮಾತ್ಯ ಗಣ್ಯರು. ಅದನ್ನು ಕೊನೆಗೊಳಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ನಮ್ಮ ಅಸ್ತಿತ್ವಕ್ಕಾಗಿ ಯುದ್ಧ ಮಾಡುತ್ತಿದ್ದೇವೆ ಎಂದು ಪುಟಿನ್ ಹೇಳಿದರು.

ಉಕ್ರೇನ್​ ಜನರೊಂದಿಗೆ ನಮ್ಮ ಹೋರಾಟವಿಲ್ಲ. ನಾವು ಅವರೊಂದಿಗೆ ಯುದ್ಧ ಮಾಡುತ್ತಿಲ್ಲ. ಉಕ್ರೇನ್ ಸರ್ಕಾರ ಪಾಶ್ಚಿಮಾತ್ಯ ರಾಷ್ಟ್ರಗಳ ಒತ್ತೆಯಾಳಾಗಿ ಮಾರ್ಪಟ್ಟಿದೆ. ಅವರು ಆ ದೇಶವನ್ನು ಆಕ್ರಮಿಸಿಕೊಂಡಿದ್ದಾರೆ. ಪಾಶ್ಚಿಮಾತ್ಯ ದೇಶಗಳು ರಷ್ಯಾಕ್ಕೆ ಬೆದರಿಕೆ ಹಾಕುತ್ತಿವೆ ಎಂದು ಆರೋಪಿಸಿರುವ ಪುಟಿನ್, ಉಕ್ರೇನ್ ಮೇಲಿನ ಆಕ್ರಮಣವನ್ನು ಸಮರ್ಥಿಸಿಕೊಂಡರು.

"ಯುದ್ಧಭೂಮಿಯಲ್ಲಿ ರಷ್ಯಾವನ್ನು ಸೋಲಿಸುವುದು ಅಸಾಧ್ಯ ಎಂದು ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಗೊತ್ತಿದೆ. ಹೀಗಾಗಿ ಅವುಗಳು ನಮ್ಮ ಮೇಲೆ ಆರ್ಥಿಕ ದಿಗ್ಬಂಧನ ಹಾಕಿವೆ. ಆದರೂ ಅದರಲ್ಲಿ ಅವರು ಗೆಲ್ಲಲು ಸಾಧ್ಯವಾಗಿಲ್ಲ. ಪಾಶ್ಚಾತ್ಯ ರಾಷ್ಟ್ರಗಳು ರಷ್ಯಾದ ಸಂಸ್ಕೃತಿ, ಧರ್ಮ ಮತ್ತು ಮೌಲ್ಯಗಳ ಮೇಲೆ ದಾಳಿ ಮಾಡುವ ಮೂಲಕ ಯುದ್ಧಕ್ಕೆ ಇನ್ನಷ್ಟು ಪ್ರೇರಣೆ ನೀಡುತ್ತಿವೆ ಎಂದು ದೂಷಿಸಿದರು.

ಏನಿದು ಅಣ್ವಸ್ತ್ರ ಒಪ್ಪಂದ: ಎರಡು ಬಲಿಷ್ಠ ಪರಮಾಣು ರಾಷ್ಟ್ರಗಳಾದ ಅಮೆರಿಕ ಮತ್ತು ರಷ್ಯಾ 2010 ರಲ್ಲಿ ಒಪ್ಪಂದ ಮಾಡಿಕೊಂಡಿವೆ. ಅಮೆರಿಕದ ಅಧ್ಯಕ್ಷ ಬರಾಕ್​ ಒಬಾಮಾ ಹಾಗೂ ರಷ್ಯಾ ಅಧ್ಯಕ್ಷ ಡಿಮಿಟ್ರಿ ಮೆಡ್ವದೇವ್​ ಅವರು "ಸ್ಟಾರ್ಟ್​ ಟ್ರೀಟಿ" ಹೆಸರಿನಲ್ಲಿ ಅಣ್ವಸ್ತ್ರ ಒಪ್ಪಂದಕ್ಕೆ ಸಹಿ ಹಾಕಿದರು. ಅದರಂತೆ ಪ್ರತಿ ದೇಶವು 1550 ಕ್ಕಿಂತ ಹೆಚ್ಚು ಅಣ್ವಸ್ತ್ರ ಸಿಡಿತಲೆಗಳು ಹೊಂದಕೂಡದು ಹಾಗೂ 700 ಕ್ಕಿಂತ ಅಧಿಕ ಅಣ್ವಸ್ತ್ರ ಸಜ್ಜಿತ ಕ್ಷಿಪಣಿ / ಬಾಂಬರ್​ ಇಟ್ಟುಕೊಳ್ಳಬಾರದು ಎಂಬುದು ಒಪ್ಪಂದದ ಪ್ರಮುಖ ಅಂಶವಾಗಿತ್ತು.

ಇದೀಗ ರಷ್ಯಾ ಅಧ್ಯಕ್ಷರಾಗಿರುವ ಪುಟಿನ್​ ಈ ಒಪ್ಪಂದವನ್ನು ಅಮಾನತು ಮಾಡಿದ್ದು, ಶೀತಲಸಮರದ ವೇಳೆ ಅಣ್ವಸ್ತ್ರದ ಮೇಲಿನ ನಿಯಂತ್ರಣವನ್ನು ತೆರವು ಮಾಡಿದಂತಾಗಿದ್ದು, ಅವುಗಳ ಬಳಕೆಯ ಮೇಲೆ ಅನುಮಾನ ಮೂಡಿಸಿದೆ.

ಓದಿ: ರಾಷ್ಟ್ರವನ್ನುದ್ದೇಶಿಸಿ ಇಂದು ರಷ್ಯಾ ಅಧ್ಯಕ್ಷ ಪುಟಿನ್​ ಭಾಷಣ: ವಿದೇಶಿ ಮಾಧ್ಯಮಗಳಿಗೆ ನಿರ್ಬಂಧ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.