ETV Bharat / international

ಗುಂಡಿನ ದಾಳಿ.. ಒಂದು ವರ್ಷದ ಮಗು ಸೇರಿ ನಾಲ್ವರು ಹತ - ಡಲ್ಲಾಸ್ ಕೌಂಟಿ ಪೊಲೀಸ್​

ಅಮೆರಿಕದಲ್ಲಿ ಮತ್ತೊಂದು ಗುಂಡಿನ ದಾಳಿ ಪ್ರಕರಣ ವರದಿಯಾಗಿದೆ. ಅಪರಿಚಿತ ನಡೆಸಿದ ಗುಂಡಿನಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

US shooting: 4 killed, including a 1-year-old boy, at a Dallas home
ಗುಂಡಿನ ದಾಳಿ.. ಒಂದು ವರ್ಷದ ಮಗು ಸೇರಿ ನಾಲ್ವರು ಹತ
author img

By ETV Bharat Karnataka Team

Published : Dec 5, 2023, 7:39 AM IST

Updated : Dec 5, 2023, 1:11 PM IST

ಡಲ್ಲಾಸ್ (ಅಮೆರಿಕ) : ಅಮೆರಿಕದಲ್ಲಿ ಗುಂಡಿನ ದಾಳಿಯ ಪಿಡುಗು ಕಡಿಮೆ ಆಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ದೇಶಾದ್ಯಂತ ಇಂತಹ ಭಯಾನಕ ದಾಳಿಗಳು ನಡೆಯುತ್ತಲೇ ಇವೆ. ಇದೀಗ ಡಲ್ಲಾಸ್​​​ನ ಮನೆಯೊಂದರಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಒಂದು ವರ್ಷದ ಬಾಲಕ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. 15 ವರ್ಷದ ಬಾಲಕಿ ಈ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದಾಳೆ ಎಂದು ಡಲ್ಲಾಸ್​ ಪೊಲೀಸರು ತಿಳಿಸಿದ್ದಾರೆ. ನಗರದ ಆಗ್ನೇಯ ಪ್ರದೇಶದಲ್ಲಿ ಭಾನುವಾರ ಮಧ್ಯಾಹ್ನ ಈ ದಾಳಿ ನಡೆದಿದೆ ಎಂದು ಅಮೆರಿಕದ ಪೊಲೀಸರು ಮಾಹಿತಿ ನೀಡಿದ್ದಾರೆ.

ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ವಯಸ್ಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 1 ವರ್ಷದ ಹುಡುಗ ಮತ್ತು 15 ವರ್ಷದ ಬಾಲಕಿ ಗುಂಡಿನ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಇದರಲ್ಲಿ ಒಂದು ವರ್ಷದ ಮಗು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದೆ. ಗಾಯಗೊಂಡ ಬಾಲಕಿಗೆ ಚಿಕಿತ್ಸೆ ಮುಂದುವರಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಗುಂಡಿನ ದಾಳಿ ನಡೆಸಿರುವ ಶಂಕಿತ ಪರಾರಿಯಾಗಿದ್ದು, ಆತನ ಬಂಧನಕ್ಕೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಎರಡು ಪ್ರತ್ಯೇಕ ಘಟನೆಗಳಲ್ಲಿ ಈ ಸಾವುಗಳಾಗಿವೆ ಎಂದು ಪೊಲೀಸರು ಶಂಕಿಸಿದ್ದಾರೆ.

ಡಲ್ಲಾಸ್ ಕೌಂಟಿ ಪೊಲೀಸರ ಪ್ರಕಾರ, ಕೊಲ್ಲಲ್ಪಟ್ಟವರನ್ನು ಲೋಗನ್ ಡಿ ಲಾ ಕ್ರೂಜ್, ವನೆಸ್ಸಾ ಡಿ ಲಾ ಕ್ರೂಜ್, ಕರೀನಾ ಲೋಪೆಜ್ ಮತ್ತು ಜೋಸ್ ಲೋಪೆಜ್ ಎಂದು ಗುರುತಿಸಲಾಗಿದೆ.

ಇದೇ ವರ್ಷದ ಅಕ್ಟೋಬರ್ ಕೊನೆಯ ವಾರದಲ್ಲಿ ಲೂಸಿಯಾನಾ ಹೌಸ್ ಪಾರ್ಟಿಯಲ್ಲಿ ಯುವಕರ ನಡುವೆ ವಾಗ್ವಾದ ತಾರಕಕ್ಕೇರಿ ಪರಸ್ಪರ ಗುಂಡಿನ ದಾಳಿ ನಡೆದಿತ್ತು. ಮೋಜು ಪಾರ್ಟಿಯಲ್ಲಿ ನಿರತರಾಗಿದ್ದವರಲ್ಲಿ ಯಾರೋ ಒಬ್ಬ ಬಂದೂಕು ಹೊರತೆಗೆದು ಮನಬಂದಂತೆ ಗುಂಡು ಹಾರಿಸಲು ಆರಂಭಿಸಿದ್ದ. ಈ ಘಟನೆಯಲ್ಲಿ ಆರು ಯುವಕರ ಮೇಲೆ ಗುಂಡಿನ ದಾಳಿ ಮಾಡಲಾಗಿತ್ತು. ಅಕ್ಟೋಬರ್ ಮೂರನೇ ವಾರ, 19 ವರ್ಷದ ವ್ಯಕ್ತಿಯೊಬ್ಬ ಮೂರು ಜನರನ್ನು ಗುಂಡಿಕ್ಕಿ ಕೊಂದ ಪ್ರಕರಣ ಅಮೆರಿಕದಲ್ಲಿ ನಡೆದಿತ್ತು. ಹೀಗೆ ಅಮೆರಿಕದಲ್ಲಿ ಸಾಲು ಸಾಲು ಇಂತಹ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ.

ಇಂತಹ ಗುಂಡಿನ ದಾಳಿ ಬಗ್ಗೆ ಅಲ್ಲಿನ ಅಧ್ಯಕ್ಷರು ಕಳವಳ ವ್ಯಕ್ತಪಡಿಸಿದ್ದಾರೆ. ಗುಂಡಿನ ದಾಳಿಗಳನ್ನು ತಡೆಗಟ್ಟುವ ಬಗ್ಗೆ ರಾಷ್ಟ್ರೀಯ ಚರ್ಚೆಯೂ ನಡೆದಿದೆ. ಆದರೂ ಇದಕ್ಕೆ ಕಡಿವಾಣ ಹಾಕುವಲ್ಲಿ ಅಮೆರಿಕದ ಸರ್ಕಾರಗಳು ವಿಫಲವಾಗಿವೆ.ಕದನ ವಿರಾಮ 7ನೇ ದಿನಕ್ಕೆ ವಿಸ್ತರಣೆ; ನಿತ್ಯ 10 ಇಸ್ರೇಲಿಗರನ್ನು ಬಿಡುಗಡೆ ಮಾಡಲಿದೆ ಹಮಾಸ್

ಇದನ್ನು ಓದಿ:ಕದನ ವಿರಾಮ 7ನೇ ದಿನಕ್ಕೆ ವಿಸ್ತರಣೆ; ನಿತ್ಯ 10 ಇಸ್ರೇಲಿಗರನ್ನು ಬಿಡುಗಡೆ ಮಾಡಲಿದೆ ಹಮಾಸ್

10 ಜನರನ್ನ ಕೊಂದು ಇಡೀ ಊರನ್ನೇ ಸುಟ್ಟು ಹಾಕಿದ ದಾಳಿಕೋರರು!!

Last Updated : Dec 5, 2023, 1:11 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.