ETV Bharat / international

ಯುಎಸ್​ ಅಧ್ಯಕ್ಷೀಯ ಚುನಾವಣಾ ಸಮೀಕ್ಷೆ: ಬೈಡನ್​ರನ್ನು 4 ಅಂಕಗಳಿಂದ ಹಿಂದಿಕ್ಕಿದ ನಿಕ್ಕಿ ಹ್ಯಾಲೆ - ಈಟಿವಿ ಭಾರತ ಕನ್ನಡ

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಹಿನ್ನೆಲೆಯಲ್ಲಿ ಇತ್ತೀಚೆಗೆ ನಡೆಸಲಾದ ಸಮೀಕ್ಷೆಯ ಪ್ರಕಾರ ನಿಕ್ಕಿ ಹ್ಯಾಲೆ ಬೈಡನ್ ಅವರಿಗಿಂತ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದಾರೆ.

Indian-American Nikki Haley beats Biden by 4 points in new poll

author img

By ETV Bharat Karnataka Team

Published : Oct 13, 2023, 2:45 PM IST

ನ್ಯೂಯಾರ್ಕ್ (ಅಮೆರಿಕ): ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಗಳಾದ ನಿಕ್ಕಿ ಹ್ಯಾಲೆ ಮತ್ತು ರಾನ್ ಡೆಸಾಂಟಿಸ್ ವಿರುದ್ಧ ಸೋಲು ಕಾಣಲಿದ್ದಾರೆ ಮತ್ತು 2024 ರ ಚುನಾವಣೆ ಈಗ ನಡೆದರೆ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗಿಂತ ಕೊಂಚ ಮುನ್ನಡೆ ಸಾಧಿಸಬಹುದು ಎಂದು ಹೊಸ ಸಮೀಕ್ಷೆಯೊಂದು ತಿಳಿಸಿದೆ.

ಕಾಲ್ಪನಿಕ ಮುಖಾಮುಖಿ ಸ್ಪರ್ಧೆಯಲ್ಲಿ ಬೈಡನ್ ಟ್ರಂಪ್ (49 ಪ್ರತಿಶತದಿಂದ 48 ಪ್ರತಿಶತ) ಗಿಂತ ಒಂದು ಪಾಯಿಂಟ್ ಮುನ್ನಡೆ ಸಾಧಿಸಿದರೆ, ಹ್ಯಾಲೆ ಬೈಡನ್ ಅವರಿಗಿಂತ ನಾಲ್ಕು ಅಂಕಗಳಿಂದ (49 ರಿಂದ 45 ಪ್ರತಿಶತ) ಮತ್ತು ಡೆಸಾಂಟಿಸ್ ಅವರಿಗಿಂತ ಎರಡು ಅಂಕಗಳಿಂದ ಹಿಂದುಳಿದಿದ್ದಾರೆ ಎಂದು ಫಾಕ್ಸ್ ನ್ಯೂಸ್ ಸಮೀಕ್ಷೆ ತಿಳಿಸಿದೆ.

ಅಕ್ಟೋಬರ್ 6-9 ರ ನಡುವೆ ನಡೆಸಲಾದ ಸಮೀಕ್ಷಾ ವರದಿಯ ಪ್ರಕಾರ, ಭಾರತೀಯ-ಅಮೆರಿಕನ್ ಮಾಜಿ ದಕ್ಷಿಣ ಕೆರೊಲಿನಾ ಗವರ್ನರ್ ನಿಕ್ಕಿ ಹ್ಯಾಲೆ ಸೆಪ್ಟೆಂಬರ್​ನಿಂದ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದ್ದು, ಶೇಕಡಾ 10 ರಷ್ಟು ಬೆಂಬಲದೊಂದಿಗೆ ತಮ್ಮ ಜನಪ್ರಿಯತೆಯನ್ನು ದ್ವಿಗುಣಗೊಳಿಸಿಕೊಂಡಿದ್ದಾರೆ ಎಂದು ತೋರಿಸಿದೆ. ಹ್ಯಾಲೆ ಡೆಮೋಕ್ರಾಟ್​ಗಳಲ್ಲಿ ಅತಿ ಹೆಚ್ಚು ಪಕ್ಷಾಂತರಗಳನ್ನು ಕಂಡಿದ್ದಾರೆ ಎಂದು ವರದಿ ಹೇಳಿದೆ.

2024 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಬೈಡನ್ ಅವರನ್ನು ಸೋಲಿಸಬಲ್ಲ ಏಕೈಕ ರಿಪಬ್ಲಿಕನ್ ಅಭ್ಯರ್ಥಿ ಹ್ಯಾಲೆ ಎಂದು ಸಿಎನ್ಎನ್ ಸಮೀಕ್ಷೆ ಕಳೆದ ತಿಂಗಳು ತೋರಿಸಿದೆ. "ಹ್ಯಾಲೆ ಬೈಡನ್ ವಿರುದ್ಧ ಮುನ್ನಡೆ ಸಾಧಿಸಿದ ಏಕೈಕ ರಿಪಬ್ಲಿಕನ್ ಅಭ್ಯರ್ಥಿಯಾಗಿದ್ದಾರೆ, ಇಬ್ಬರ ನಡುವಿನ ಕಾಲ್ಪನಿಕ ಸ್ಪರ್ಧೆಯಲ್ಲಿ ಬೈಡನ್ 49 ಪ್ರತಿಶತ ಮತ್ತು ಬೈಡನ್ 43 ಪ್ರತಿಶತದಷ್ಟು ಮತಗಳನ್ನು ಪಡೆದಿದ್ದಾರೆ" ಎಂದು ಸಿಎನ್ಎನ್ ವರದಿ ಮಾಡಿದೆ.

ಹಲವಾರು ಕಾನೂನು ಮೊಕದ್ದಮೆಗಳನ್ನು ಎದುರಿಸುತ್ತಿದ್ದರೂ ಮಾಜಿ ಅಧ್ಯಕ್ಷ ಟ್ರಂಪ್ ರಿಪಬ್ಲಿಕನ್ ಅಧ್ಯಕ್ಷೀಯ ಸ್ಪರ್ಧೆಯಲ್ಲಿ ತಮ್ಮ ಮುನ್ನಡೆಯನ್ನು ಉಳಿಸಿಕೊಂಡಿದ್ದಾರೆ ಎಂದು ಫಾಕ್ಸ್ ನ್ಯೂಸ್ ಸಮೀಕ್ಷೆ ತೋರಿಸಿದೆ. ರಿಪಬ್ಲಿಕನ್ ಪ್ರಾಥಮಿಕ ಮತದಾರರಲ್ಲಿ ಟ್ರಂಪ್ ಶೇಕಡಾ 59 ರಷ್ಟು ಬೆಂಬಲ ಪಡೆದಿದ್ದಾರೆ. ಸೆಪ್ಟೆಂಬರ್​ನಲ್ಲಿ ಅವರ ಬೆಂಬಲದ ಪ್ರಮಾಣ ದಾಖಲೆಯ ಶೇಕಡಾ 60 ಕ್ಕೆ ತಲುಪಿದೆ.

ಆಗಸ್ಟ್ ಕೊನೆಯಲ್ಲಿ ತನ್ನ ಮೊದಲ ರಿಪಬ್ಲಿಕನ್ ಪ್ರಾಥಮಿಕ ಚರ್ಚೆಯ ನಂತರ ಮಾತನಾಡಿದ್ದ ಹ್ಯಾಲೆ, 2024 ರ ಅಧ್ಯಕ್ಷೀಯ ಚುನಾವಣೆಗೆ ಟ್ರಂಪ್ ಪಕ್ಷದ ಅಭ್ಯರ್ಥಿಯಾಗುವುದಿಲ್ಲ ಎಂದು ಹೇಳಿದ್ದರು. ಟ್ರಂಪ್ ತನ್ನನ್ನು 'ಬರ್ಡ್ ಬ್ರೈನ್' ಎಂದು ಕರೆದಿದ್ದಾರೆ ಎಂದು ಹ್ಯಾಲೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು. ಅಲ್ಲದೆ ಟ್ರಂಪ್ ನನಗೆ ಪಕ್ಷಿಯ ಪಂಜರವೊಂದನ್ನು ಪಾರ್ಸಲ್ ಕಳುಹಿಸಿದ್ದಾರೆ ಎಂದು ಹ್ಯಾಲೆ ಅದರ ಚಿತ್ರವನ್ನು ಶೇರ್ ಮಾಡಿದ್ದರು.

ಇದನ್ನೂ ಓದಿ: 24 ಗಂಟೆಗಳಲ್ಲಿ ಜಾಗ ತೆರವು ಮಾಡಿ: ಉತ್ತರ ಗಾಜಾದ 11 ಲಕ್ಷ ಜನರಿಗೆ ಇಸ್ರೇಲ್ ವಾರ್ನಿಂಗ್!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.