ವಾಷಿಂಗ್ಟನ್: ವ್ಯಾಪಾರ ನೀತಿ ಮತ್ತು ಮಾತುಕತೆಗಳ ಸಲಹಾ ಸಮಿತಿಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಇಬ್ಬರು ಭಾರತೀಯ ಮೂಲದವರ ಹೆಸರನ್ನು ಘೋಷಿಸಿದ್ದಾರೆ. ಫ್ಲೆಕ್ಸ್ ಸಿಇಒ ರೇವತಿ ಅದ್ವೈತಿ ಮತ್ತು ನ್ಯಾಚುರಲ್ ರಿಸೋರ್ಸ್ ಡಿಫೆನ್ಸ್ ಕೌನ್ಸಿಲ್ ಸಿಇಒ ಮನೀಶ್ ಬಪ್ನಾ ನೇಮಕಗೊಂಡವರು.
ಶುಕ್ರವಾರ ಸಲಹಾ ಸಮಿತಿಗೆ 14 ಮಂದಿಯನ್ನು ನೇಮಕ ಮಾಡಲಾಗಿದೆ ಎಂದು ಜೋ ಬೈಡನ್ ಘೋಷಿಸಿದರು. ಇವರು ವ್ಯಾಪಾರ ನೀತಿಯ ಅಭಿವೃದ್ಧಿ, ಅನುಷ್ಠಾನ ಮತ್ತು ಆಡಳಿತದ ವಿಷಯಗಳ ಕುರಿತು ಯುನೈಟೆಡ್ ಸ್ಟೇಟ್ಸ್ ಟ್ರೇಡ್ ರೆಪ್ರೆಸೆಂಟೇಟಿವ್‌ಗೆ ಸಲಹೆಯನ್ನು ನೀಡುತ್ತಾರೆ.
ಅಮೆರಿಕದ ವ್ಯಾಪಾರ ನೀತಿಯು ವ್ಯಾಪಾರ ಒಪ್ಪಂದಗಳಿಗೆ ಸಂಬಂಧಿಸಿದ ಮಾತುಕತೆಯ ಉದ್ದೇಶಗಳು ಮತ್ತು ಚೌಕಾಶಿ ಸ್ಥಾನಗಳು, ವ್ಯಾಪಾರ ಒಪ್ಪಂದಗಳ ಅನುಷ್ಠಾನದ ಪರಿಣಾಮ. ಯಾವುದೇ ವ್ಯಾಪಾರ ಒಪ್ಪಂದದ ಕಾರ್ಯಾಚರಣೆಗೆ ಸಂಬಂಧಿಸಿದ ವಿಷಯಗಳು ಮತ್ತು ಅಭಿವೃದ್ಧಿ, ಅನುಷ್ಠಾನ ಮತ್ತು ಆಡಳಿತಕ್ಕೆ ಸಂಬಂಧಿಸಿದಂತೆ ಉದ್ಭವಿಸುವ ಇತರ ವಿಷಯಗಳನ್ನು ಒಳಗೊಂಡಿರುತ್ತದೆ ಎಂದು ವೈಟ್ ಹೌಸ್ ತಿಳಿಸಿದೆ.
ಯಾರು ಈ ರೇವತಿ: ಜಾಗತಿಕ ಉತ್ಪಾದನಾ ಪಾಲುದಾರರ ಆಯ್ಕೆಯಲ್ಲಿ ವೈವಿದ್ಯಮಯ ಗ್ರಾಹಕ ಆಧಾರಿತ ವಿನ್ಯಾಸ ಮತ್ತು ಉತ್ಪನ್ನಗಳ ಸುಧಾರಣೆ ಮಾಡಲು ಇದು ಸಹಾಯ ಮಾಡುತ್ತದೆ ಎಂದು ಫ್ಲೆಕ್ಸ್ ಸಿಇಒ ರೇವತಿ ಅದ್ವೈತ ತಿಳಿಸಿದ್ದಾರೆ. ರೇವತಿ ಅವರು ಕಾರ್ಯತಂತ್ರ ನಿರ್ದೇಶಿಸುವ ಜವಾಬ್ದಾರಿಯನ್ನು ಅವರು ಹೊಂದಿದ್ದಾರೆ. ಫ್ಲೆಕ್ ಮೂಲಕ ಉತ್ಪಾದನೆ ರೂಪಾಂತರದಲ್ಲಿ ಹೊಸ ಯುಗ ವ್ಯಾಖ್ಯಾನಿಸಲಾಗಿದೆ ಎಂದು ವೈಟ್ ಹೌಸ್ ತಿಳಿಸಿದೆ.
ಫ್ಲೆಕ್ಸ್ಗೂ ಮುನ್ನ ರೇವತಿ, ಎಲೆಕ್ಟ್ರಾನಿಕಲ್ ವಲಯದ ಉದ್ಯಮ ಈಟನ್ನಲ್ಲಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯಾಗಿದ್ದರು. ಈ ಸಂಸ್ಥೆ 20 ಬಿಲಿಯನ್ ಅಮೆರಿಕನ್ ಡಾಲರ್ಗೆ ಮಾರಟ ಮಾಡಲಾಯಿತು. ರೇವತಿ ಕೂಡ ಈಟನ್ ಎಲೆಕ್ಟ್ರಾನಿಕ್ ವಲಯದಲ್ಲಿ ಅಮೆರಿಕ ಮತ್ತು ಹನಿವೆಲ್ನಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಜೊತೆಗೆ ಕ್ಯಾಟಲೆಸ್ಟ್.ಆರ್ಗ್ನಲ್ಲಿ ಅವರು ಮಂಡಳಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.
ಜಾಗತಿಕ ಆರ್ಥಿಕ ವೇದಿಕೆಯ ಡ್ವಾನ್ಸ್ಡ್ ಮ್ಯಾನುಫ್ಯಾಕ್ಚರಿಂಗ್ ಸಿಇಒ ಸಮುದಾಯದ ಸಹ ಅಧ್ಯಕ್ಷರಾಗಿದ್ದಾರೆ ರೇವತಿ. ಫಾರ್ಚೂನ್ ಪ್ರಭಾವಶಾಲಿ ಮಹಿಳಾ ಉದ್ಯಮಿ ಪಟ್ಟಿ ಹಾಗೇ ಭಾರತದ ಬ್ಯುಸಿನೆಟ್ ಟುಡೇಯಲ್ಲೀ ಪ್ರಭಾವಶಾಲಿ ಮಹಿಳೆ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ ಅಂಡ್ ಸೈನ್ಸ್ನಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದು, ದಂಢರ್ಬರ್ಡ್ ಸ್ಕೂಲ್ ಆಫ್ ಗ್ಲೋಬಲ್ ಮ್ಯಾನೇಜ್ಮೆಂಟ್ನಲ್ಲಿ ಎಂಬಿಎ ಪದವಿ ಪಡೆದಿದ್ದಾರೆ.
ಮನಿಷ್ ಬಪ್ನಾ ಕುರಿತು: ಮನಿಷ್ ಬಪ್ನಾ ನ್ಯಾಚುರಲ್ ರಿಸೋರ್ಸ್ ಡಿಫೆನ್ಸ್ ಕೌನ್ಸಿಲ್ನ ಅಧ್ಯಕ್ಷ ಮತ್ತು ಸಿಇಒ ಆಗಿದ್ದಾರೆ. ಪರಿಸರ ಕಾನೂನುಗಳ ರಚನೆಯಿಂದ ಹಿಡಿದು, ಕಾನೂನು ವಿಜಯಗಳು ಮತ್ತು ಸಂಶೋಧನೆಗಳ ಅಡಿಪಾಯವಾಗಿ ಕಳೆದ ಅರ್ಧ ಶತಮಾನದ ಹಲವು ಮಹತ್ವದ ಪರಿಸರ ಕಾರ್ಯದಲ್ಲಿದ್ದಾರೆ ಎಂದು ವೈಟ್ ಹೌಸ್ ತಿಳಿಸಿದೆ.
ತಮ್ಮ 25ವರ್ಷದ ವೃತ್ತಿ ಜೀವನದಲ್ಲಿ ಬಪ್ನಾ ಅವರ ನಾಯಕತ್ವದಲ್ಲಿ, ಬಡತನ ಮತ್ತು ಹವಾಮಾನ ಬದಲಾವಣೆ ಮೂಲ ಕಾರಣವನ್ನು ನಿಭಾಯಿಸುವತ್ತ ಗಮನ ಹಿಸಲಾಗಿದೆ. ಇತ್ತೀಚೆಗೆ ಅವರು ಜಾಗತಿಕ ಸಂಪನ್ಮೂಲ ಸಂಸ್ಥೆಯ ಕಾರ್ಯಕಾರಿ ಉಪ ಅಧ್ಯಕ್ಷರು ಮತ್ತು ನಿರ್ವಹಣಾ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಈ ಸಂಶೋಧನಾ ಸಂಸ್ಥೆಯು 14 ವರ್ಷಗಳಿಂದ ಪರಿಸರ ಮತ್ತು ಮಾನವದ ಅಭಿವೃದ್ಧಿಯ ಕಡೆ ಗಮನ ಹರಿಸಿದೆ.
ಇದನ್ನೂ ಓದಿ: ಶ್ರೀಮಂತ ಅಮೆರಿಕನ್ನರ ಮೇಲೆ ತೆರಿಗೆ ಭಾರ ಹೆಚ್ಚಿಸಲು ಅಧ್ಯಕ್ಷ ಬೈಡನ್ ಚಿಂತನೆ