ETV Bharat / international

ಮೇರಿಲ್ಯಾಂಡ್​​ನಲ್ಲಿ ವಿದ್ಯುತ್​​ ತಂತಿಗೆ ಅಪ್ಪಳಿಸಿದ ವಿಮಾನ.. - ವಿಮಾನ ಅಪಘಾತ

ವಿಮಾನ ಅಪಘಾತದಿಂದ ಮಾಂಟ್ಗೊಮೆರಿ ಕೌಂಟಿಯಲ್ಲಿ ವಿದ್ಯುತ್ ಕಡಿತವಾಗಿತ್ತು. ಈ ಪರಿಣಾಮವಾಗಿ 90,000 ಮನೆಗಳು ಮತ್ತು ವ್ಯವಹಾರಗಳ ಮೇಲೆ ಪರಿಣಾಮ ಬೀರಿತು. ಈ ವಿಮಾನ ಅಪಘಾತದಲ್ಲಿ ಯಾವುದೇ ಪ್ರಾಣಹಾನಿಯಾದ ವರದಿಯಾಗಿಲ್ಲ.

Plane crashes into power lines in Montgomery County, cuts off electricity
ಮೇರಿಲ್ಯಾಂಡ್​​ನಲ್ಲಿ ವಿದ್ಯುತ್​​ ತಂತಿಗೆ ಅಪ್ಪಳಿಸಿದ ವಿಮಾನ
author img

By

Published : Nov 28, 2022, 7:42 AM IST

ಮೇರಿಲ್ಯಾಂಡ್ (ಅಮೆರಿಕ): ಅಮೆರಿಕದ ಮೇರಿಲ್ಯಾಂಡ್ ರಾಜ್ಯದ ಮಾಂಟ್ಗೊಮೆರಿ ಕೌಂಟಿಯಲ್ಲಿ ವಿದ್ಯುತ್ ತಂತಿಗಳಿಗೆ ಸಣ್ಣ ವಿಮಾನವೊಂದು ಅಪ್ಪಳಿಸಿದೆ. ಪರಿಣಾಮ ಈ ರಾಜ್ಯದಲ್ಲಿ ವ್ಯಾಪಕ ವಿದ್ಯುತ್ ಕಡಿತ ಕಂಡು ಬಂದಿದೆ ಎಂದು ಸ್ಥಳೀಯ ಅಧಿಕಾರಿಗಳನ್ನು ಉಲ್ಲೇಖಿಸಿ ಅಲ್ಲಿನ ಪ್ರಮುಖ ಮಾಧ್ಯಮವೊಂದು ವರದಿ ಮಾಡಿದೆ.

ವಿಮಾನ ಅಪಘಾತದಿಂದ ಮಾಂಟ್ಗೊಮೆರಿ ಕೌಂಟಿಯಲ್ಲಿ ವಿದ್ಯುತ್ ಕಡಿತವಾಗಿತ್ತು. ಈ ಪರಿಣಾಮವಾಗಿ 90,000 ಮನೆಗಳು ಮತ್ತು ವ್ಯವಹಾರಗಳ ಮೇಲೆ ಪರಿಣಾಮ ಬೀರಿತು. ಈ ವಿಮಾನ ಅಪಘಾತದಲ್ಲಿ ಯಾವುದೇ ಪ್ರಾಣಹಾನಿಯಾದ ವರದಿಯಾಗಿಲ್ಲ.

ಮಳೆಯ ವಾತಾವರಣದಿಂದಾಗಿ ವಾಣಿಜ್ಯ ಪ್ರದೇಶದ ಸಮೀಪದಲ್ಲಿ ಈ ಅಪಘಾತ ಸಂಭವಿಸಿದೆ. ಆದಾಗ್ಯೂ ನಿಖರವಾದ ಕಾರಣ ಇನ್ನೂ ಗೊತ್ತಾಗಿಲ್ಲ. ವಿಮಾನ ಅಪಘಾತದ ಬಗ್ಗೆ ಅಲ್ಲಿನ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನು ಓದಿ: ದಕ್ಷಿಣ ಕೊರಿಯಾದಲ್ಲಿ ಹೆಲಿಕಾಪ್ಟರ್ ಪತನ: ಐವರು ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.