ನ್ಯೂಯಾರ್ಕ್, ಅಮೆರಿಕ : ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಅವರು ಏಪ್ರಿಲ್ 28ರಂದು ಉಕ್ರೇನ್‌ಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಅವರು ವೊಲೊಡಿಮಿರ್ ಝೆಲೆನ್ಸ್ಕಿ ಮತ್ತು ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಅವರನ್ನು ಭೇಟಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ.
ಆಂಟೋನಿಯೊ ಗುಟೆರೆಸ್ ಮುಂದಿನ ವಾರ ಉಕ್ರೇನ್‌ಗೆ ಭೇಟಿ ನೀಡಲಿದ್ದಾರೆ. ಅವರು ಉಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಅವರೊಂದಿಗೆ ಕಾರ್ಯಕಾರಿ ಸಭೆಯನ್ನು ನಡೆಸಲಿದ್ದಾರೆ ಮತ್ತು ಏಪ್ರಿಲ್ 28ರಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ. ಅದರ ನಂತರ ಉಕ್ರೇನ್ನ ನೆರವಿನ ಕುರಿತಂತೆ ಚರ್ಚಿಸಲು ಯುಎನ್ ಏಜೆನ್ಸಿಗಳ ಸಿಬ್ಬಂದಿಯನ್ನು ಭೇಟಿಯಾಗಲಿದ್ದಾರೆ ವಿಶ್ವಸಂಸ್ಥೆಯ ಪತ್ರಿಕಾ ಹೇಳಿಕೆ ತಿಳಿಸಿದೆ.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರನ್ನು ಭೇಟಿ ಮಾಡಲು ಗುಟೆರಸ್ ರಷ್ಯಾಗೆ ಭೇಟಿ ನೀಡಲಿದ್ದಾರೆ ಎಂದು ಘೋಷಿಸಿದ ಕೆಲವೇ ಗಂಟೆಗಳ ನಂತರ ಉಕ್ರೇನ್‌ಗೆ ಭೇಟಿ ನೀಡುವ ನಿರ್ಧಾರವನ್ನು ಘೋಷಿಸಲಾಯಿತು. ರಷ್ಯಾ ಕೂಡ ಆಂಟೋನಿಯೋ ಗುಟೆರಸ್ ಅವರ ಭೇಟಿಯನ್ನು ದೃಢಪಡಿಸಿದೆ. ಮಂಗಳವಾರವಷ್ಟೇ ಮಾತನಾಡಿದ್ದ ಗುಟೆರೆಸ್ ಅವರು ಉಕ್ರೇನ್‌ನಲ್ಲಿ ನಾಲ್ಕು ದಿನಗಳ ಕದನ ವಿರಾಮಕ್ಕೆ ಕರೆ ನೀಡಿದ್ದಾರೆ. ಇದಲ್ಲದೇ ಶಾಂತಿ ಮಾತುಕತೆಗಾಗಿ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಪ್ರಸ್ತುತ ನಮ್ಮಲ್ಲಿ ಮೂರು ಗೂಂಡಾಗಳ ಸರ್ಕಾರವಿದೆ.. ಮತ್ತೆ ಭಾರತವನ್ನು ಹೊಗಳಿದ ಇಮ್ರಾನ್ ಖಾನ್!