ಕೀವ್, ಉಕ್ರೇನ್ : ಶಾಂತಿ ಮಾತುಕತೆಗಳನ್ನು ನಡೆಸಲು ಉಕ್ರೇನ್ ಸಿದ್ಧವಾಗಿದೆ. ರಷ್ಯಾದ ಪಡೆಗಳು ಉಕ್ರೇನ್ನಿಂದ ಮರಳಿದ ನಂತರ ಸಂಘರ್ಷವನ್ನು ಇತ್ಯರ್ಥಪಡಿಸುವ ಕುರಿತು ಮಾತುಕತೆಗಳನ್ನು ಪುನಾರಂಭಿಸಲು ನಾವು ಸಿದ್ಧವಾಗಿದ್ದೇವೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ಫೆಬ್ರವರಿ 24ರಂದು ಅಂದರೆ ಆಕ್ರಮಣದ ಮೊದಲು ರಷ್ಯಾ ಪಡೆಗಳು ಇದ್ದ ಜಾಗಕ್ಕೆ ಮರಳಬೇಕೆಂದು ಝೆಲೆನ್ಸ್ಕಿ ಒತ್ತಾಯಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ವೊಲೊಡಿಮಿರ್ ಝೆಲೆನ್ಸ್ಕಿ, ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ನಿಲ್ಲಿಸಲು ರಷ್ಯಾ ತನ್ನ ಸಂಪೂರ್ಣ ಸೇನೆಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ ಎಂದು ಕ್ಸಿನುವಾ ಸುದ್ದಿಸಂಸ್ಥೆ ವರದಿ ಮಾಡಿದೆ. ನಾನು ಉಕ್ರೇನ್‌ನ ಜನರಿಂದ, ಉಕ್ರೇನ್‌ನ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ಮಿನಿ ಉಕ್ರೇನ್‌ನ ಅಧ್ಯಕ್ಷನಾಗಿ ಅಲ್ಲ ಎಂದು ಝೆಲೆನ್ಸ್ಕಿ ಮಾರ್ಮಿಕವಾಗಿ ನುಡಿದಿದ್ದಾರೆ.
ಅವರು ನಮ್ಮ ಎಲ್ಲಾ ಸೇತುವೆಗಳನ್ನು ನಾಶಪಡಿಸಿದರೂ, ಎಲ್ಲಾ ಸೇತುವೆಗಳು ಇನ್ನೂ ನಾಶವಾಗಿಲ್ಲ ಎಂದೇ ನಾನು ನಂಬುತ್ತೇನೆ ಎಂದು ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ಉಕ್ರೇನಿಯನ್ ಮತ್ತು ರಷ್ಯಾದ ನಿಯೋಗಗಳು ಮಾರ್ಚ್ ಅಂತ್ಯದಲ್ಲಿ ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ ಶಾಂತಿ ಮಾತುಕತೆ ನಡೆಸಿದ್ದು, ಆ ಮಾತುಕತೆ ವಿಫಲವಾಗಿತ್ತು.
ಇದನ್ನೂ ಓದಿ: ಕ್ಯೂಬಾದಲ್ಲಿ ಹೋಟೆಲ್ನಲ್ಲಿ ಸ್ಫೋಟ : 18 ಮಂದಿ ಸಾವು, 50ಕ್ಕೂ ಹೆಚ್ಚು ಮಂದಿಗೆ ಗಾಯ